Friday, 22nd November 2024

ತೀವ್ರ ಆರ್ಥಿಕ ಬಿಕ್ಕಟ್ಟು: 300 ವಸ್ತುಗಳ ಆಮದಿಗೆ ನಿಷೇಧ

ಕೋಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿದೆ.

ಇದರ ಭಾಗವಾಗಿ, ಸರ್ಕಾರವು ಚಾಕೊಲೇಟ್, ಸುಗಂಧ ದ್ರವ್ಯಗಳು, ಶಾಂಪೂ ಗಳು ಇತ್ಯಾದಿ 300 ವಸ್ತುಗಳ ಆಮದಿನ ಮೇಲೆ ನಿಷೇಧ ಹೇರಿದೆ. 300 ರೀತಿಯ ಸರಕುಗಳು ಆ.23 ರ ಮೊದಲು ರಫ್ತು ಮಾಡಬೇಕು. ಅವು ಸೆಪ್ಟೆಂಬರ್ 14 ರ ಮೊದಲು ಶ್ರೀಲಂಕಾ ವನ್ನು ತಲುಪುವ ಹಾಗೆ ನೋಡಿಕೊಳ್ಳಿ. ಅಂತವುಗಳನ್ನು ಮಾತ್ರ ಅನುಮತಿಸಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದೆ.

1948 ರಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ದ್ವೀಪ ರಾಷ್ಟ್ರ ಬಿಕ್ಕಟ್ಟಿನಲ್ಲಿ ಮುಳುಗಿದ್ದು, ಫಾರೆಕ್ಸ್ ಮೀಸಲು ಹದಗೆಟ್ಟಿದ್ದ ರಿಂದ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಶ್ರೀಲಂಕಾದ ಹಣಕಾಸು ಸಚಿವಾಲಯ ಹೊರಡಿಸಿದ ವಿಶೇಷ ಅಧಿಸೂಚನೆಯಲ್ಲಿ, ಚಾಕೊಲೇಟ್‌ಗಳು, ಸುಗಂಧ ದ್ರವ್ಯಗಳು, ಮೇಕಪ್ ಮತ್ತು ಶಾಂಪೂಗಳು ಸೇರಿದಂತೆ ಒಟ್ಟು 300 ಉತ್ಪನ್ನಗಳ ಆಮದನ್ನು ನಿಷೇಧಿಸಲಾಗಿದೆ.