Thursday, 5th December 2024

ಕ್ರೀಡಾಕೂಟಗಳು ಸಾಧನೆಗೆ ರಹದಾರಿ: ಗ್ರಾ ಪಂ ಸದಸ್ಯ ಗುರುನಗೌಡ ಬಿರಾದಾರ

ಕೋಲಾರ: ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಸರಿಯಾದ ನ್ಯಾಯ ಒದಗಿಸುವ ಮೂಲಕ ಒಳ್ಳೆಯ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ ಮುಂದಿನ ಹಂತಕ್ಕೆ ಕಳುಹಿಸಿಕೊಡಬೇಕು ಎಂದು ಗ್ರಾ.ಪಂ ಸದಸ್ಯ ಗುರುನಗೌಡ ಬಿರಾದಾರ ಹೇಳಿದರು.

ತಾಲೂಕಿನ ಕುಪಕಡ್ಡಿ ಗ್ರಾಮದ ಆರ್ ಎಮ್ ಎಸ್ ಎ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ ಕೊಲ್ಹಾರ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಬಹಳ ವರ್ಷಗಳ ನಂತರ ಮೊದಲ ಬಾರಿಗೆ ಕುಪಕಡ್ಡಿ ಗ್ರಾಮದಲ್ಲಿ ಕ್ರೀಡಾಕೂಟವನ್ನು ಸಂಘಟನೆ ಮಾಡಿದ್ದು ಇಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಬಹಳಷ್ಟು ದಾನಿಗಳು ಕೊಡುಗೆ ನೀಡಿದ್ದಾರೆ ಅವರೆಲ್ಲರಿಗೂ ಅಭಿನಂದನೆಗಳು ಎಂದರು.

ಪಿ.ಎಸ್.ಐ ಪ್ರೀತಮ್ ನಾಯಕ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಉದಯಕುಮಾರ ಹಳ್ಳಿ ಕ್ರೀಡಾಕೂಟದ ಧ್ವಜಾ ರೋಹಣ ನೆರವೇರಿಸಿದರು. ರೋಣ ಹಾಳ ಗ್ರಾ ಪಂ ಅಧ್ಯಕ್ಷೆ ಆಶಾ ಹೊಸಮನಿ ವಹಿಸಿ ದ್ದರು. ಶಾಲಾ ದೈಹಿಕ ಶಿಕ್ಷಕ ಶಿವಕುಮಾರ ಹಿರೇಮಠ ಪ್ರತಿಜ್ಞಾ ವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಸ್ ಎಸ್ ಅವಟಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಜಿ ವಾಯ್ ನಾಗರಾಳ, ಗ್ರಾಮದ ಹಿರಿಯರಾದ ಸಿದ್ದನಗೌಡ ಪಾಟೀಲ, ಸಂಗನಗೌಡ ಬಿರಾದಾರ, ರೋಣ ಹಾಳ ಗ್ರಾ ಪಂ ನಿಕಟ ಪೂರ್ವ ಅಧ್ಯಕ್ಷ ಗಂಗಾಧರ ಹಳ್ಳಿ, ರೋಣ ಹಾಳ ಮಾಜಿ ಗ್ರಾ ಪಂ ಅಧ್ಯಕ್ಷ ಹಣಮಂತ ನ್ಯಾಮಗೊಂಡ, ಗಡಿಗೆಪ್ಪ ಜಿಡ್ಡಿಮನಿ, ಮುಖ್ಯ ಗುರುಗಳಾದ ಎನ್ ಪಿ ಹೊನ್ನಾಕಟ್ಟಿ,ಸಿ ಆರ್ ಪಿ ಗಳಾದ ಶ್ರೀಕಾಂತ ಪಾರಗೊಂಡ, ಜಿ ಆಯ್ ಗೊಡ್ಯಾಳ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಸಮಸ್ತ ಗುರು ಹಿರಿಯರು, ಯುವಕರು, ತಾಯಂದಿರರು,ಕೊಲ್ಹಾರ ವಲಯದ ವಿವಿಧ ಪ್ರೌಢ ಶಾಲೆಗಳ ಮುಖ್ಯ ಗುರುಗಳು,ದೈಹಿಕ ಶಿಕ್ಷಕರು, ತಂಡದ ವ್ಯವಸ್ಥಾಪಕರು ಮತ್ತು ಕ್ರೀಡಾಪಟುಗಳು ಭಾಗವಹಿಸಿದ್ದರು.

ಸಹನಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದೀಪಾ ಹಾಗೂ ಸಂಗಡಿಗರು ಸ್ವಾಗತಿಸಿದರು, ಮುಖ್ಯ ಗುರು ಎನ್ ಪಿ ಹೊನ್ನಾಕಟ್ಟಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಕರಿಯಣ್ಣವರ ವಂದಿಸಿದರು. ಶಿಕ್ಷಕ ಶಿವಶರಣಪ್ಪ ಬಾಲಿ ನಿರೂಪಿಸಿದರು.