Thursday, 5th December 2024

ಸರ್ಕಾರಿ ಶಾಲೆಗೆ 75 ಸಾವಿರ ಕಾಣಿಕೆ ನೀಡಿ ಜನ್ಮದಿನ ಆಚರಿಸಿಕೊಂಡ ಯುವಕ

ಕೋಲಾರ: ತಾಲೂಕಿನ ಕುಪಕಡ್ಡಿ ಗ್ರಾಮದ ಯುವಕರಾದ ಗುರುಲಿಂಗ ಭೀಮಶಿ ಪಾಯಗೊಂಡ ಅವರು ತಮ್ಮ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಎಲ್ಲ ಯುವಕರಿಗೆ ಮಾದರಿಯಾಗಿದ್ದಾರೆ.

ತಮ್ಮ ಜನ್ಮ ದಿನದಂದು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ತೆರಳಿ ಶಾಲಾ ಕೊಠಡಿ ಗಳಿಗೆ ನೆಲಹಾಸು ಹಾಕಲು 75,000 ರೂಪಾಯಿಗಳನ್ನು ದೇಣಿಗೆಯಾಗಿ ನೀಡಿ ಮಕ್ಕಳ ಜೊತೆಗೆ ಸರಳವಾಗಿ ಜನ್ಮ ದಿನ ಆಚರಿಸಿಕೊಂಡರು. ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ಗಲಗಲಿ ಪೇಡಾ ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮುರುಗೇಶ ಹಳ್ಳಿ, ಶಾಲೆಯ ಮುಖ್ಯ ಗುರುಗಳಾದ ಸಿದ್ದು ಕೋಟ್ಯಾಳ, ಸಿಬ್ಬಂದಿಗಳಾದ ಹಣಮಂತ ಬಿರಾದಾರ, ಕವಿತಾ ಹಿರೇಮಠ, ಎಮ್.ಎಮ್.ಮಕಾನದಾರ, ಬಿ.ಡಿ.ಪವಾರ, ರಮೇಶ ಇಂಡಿ, ರೋಹಿಣಿ ನ್ಯಾಮಗೊಂಡ ಹಾಜರಿದ್ದರು.