ಸ್ವಾತಂತ್ರ್ಯ ಸ್ಮರಣೆ
ನಳಿನ್ ಕುಮಾರ್ ಕಟೀಲ್
ಕಳೆದ 50 ವರ್ಷಗಳಲ್ಲಿ ಬ್ರಿಟಿಷರು ಎಂಟು ಕೋಟಿ ಭಾರತೀಯರನ್ನು ಕೊಂದಿದ್ದಾರೆ. ಇದಕ್ಕೆ ನಾನು ಅವರನ್ನೇ (ಬ್ರಿಟಿಷರನ್ನೇ) ನೇರ ಹೊಣೆ ಮಾಡುತ್ತೇನೆ. ಈ ಪರಂಗಿಗಳು ನಮ್ಮ ದೇಶದಿಂದ ಪ್ರತೀವರ್ಷವೂ 10 ಕೋಟಿ ಪೌಂಡ್ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ.
ಜರ್ಮನ್ನರಿಗೆ ಹೇಗೆ ಈ ದೇಶವನ್ನು (ಬ್ರಿಟನ್) ಆಕ್ರಮಿಸಿಕೊಳ್ಳುವ ಹಕ್ಕಿಲ್ಲವೋ ಹಾಗೆಯೇ ಈ ಬ್ರಿಟಿಷರಿಗೆ ಕೂಡ ನಮ್ಮ ದೇಶವಾದ ಭಾರತವನ್ನು ಆಕ್ರಮಿಸುವ ಯಾವ ಹಕ್ಕೂ ಇಲ್ಲ. ಪವಿತ್ರವಾದ ನಮ್ಮ ದೇಶವನ್ನು ಕುಲಗೆಡಿಸುತ್ತಿರುವ ಬ್ರಿಟಿಷರ ಪೈಕಿ ಒಬ್ಬನನ್ನು (ಸರ್ ಕರ್ಜನ್ ವಿಲ್ಲಿ) ಕೊಂದಿದ್ದು ಎಲ್ಲ ದೃಷ್ಟಿಗಳಿಂದಲೂ ನ್ಯಾಯಬದ್ಧವಾಗಿದೆ. ಇದು, ಬ್ರಿಟಿಷರ ಕಪಿಮುಷ್ಟಿ ಯಿಂದ ದೇಶವನ್ನು ವಿಮುಕ್ತಿಗೊಳಿಸುವುದಕ್ಕಾಗಿ ಲಂಡನ್ನಿನಲ್ಲಿ ಸಶಸ ಹೋರಾಟದ ಮಾರ್ಗ ಹಿಡಿದು ಮುನ್ನುಗ್ಗಿದ ಮದನ್ಲಾಲ್ ಧಿಂಗ್ರಾ ಅವರ ಮಾತು.
ಬ್ರಿಟನ್ನಿನ ಜಹಾಂಗೀರ್ ಹಾಲ್‌ನಲ್ಲಿ ನಡೆದ ಒಂದು ಸಂತೋಷ ಕೂಟದೊಳಕ್ಕೆ ನುಸುಳಿ, ‘ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್’ನ ಗೌರವ ಖಜಾಂಚಿಯಾಗಿದ್ದ ಕರ್ಜನ್ ವಿಲ್ಲಿಯನ್ನು ಗುಂಡಿಟ್ಟು ಕೊಂದ ಪ್ರಕರಣದಲ್ಲಿ ಅಲ್ಲಿನ ನ್ಯಾಯಾ ಧೀಶರ ಎದುರು ಧಿಂಗ್ರಾ, ಭಾರತದ ಸ್ವಾತಂತ್ರ್ಯ ಪ್ರಾಪ್ತಿಗಾಗಿ ತಾವು ಕೈಗೊಂಡ ಸಾಹಸವನ್ನು ಸಮರ್ಥಿಸಿಕೊಂಡ ಪರಿ ಇದಾಗಿತ್ತು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಇದು ನಿಜಕ್ಕೂ ವೀರೋಚಿತವಾದ ಮಾರ್ಗ!
ಇಂಥ ಒಬ್ಬ ಕ್ರಾಂತಿಕಾರಿಯನ್ನು ರೂಪಿಸಿದ್ದು ಯಾರೆಂದರೆ, ಲಂಡನ್ನಿನಲ್ಲಿ ‘ಇಂಡಿಯಾ ಹೌಸ್’ ಮೂಲಕ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮವನ್ನು ನೀಡಿದ ವಿನಾಯಕ್ ದಾಮೋದರ ಸಾವರ್ಕರ್. ಇಷ್ಟಕ್ಕೂ, ಭಾರತದ ಹಿತವನ್ನು ಬಯಸಿ ಬ್ರಿಟನ್ನಿನ ನಡೆದ ಮೊಟ್ಟಮೊದಲ ರಾಜಕೀಯ ಹತ್ಯೆ ಇದಾಗಿತ್ತು! ಈ ಘಟನೆ ನಡೆದಿದ್ದು ಇಲ್ಲಿಗೆ 113 ವರ್ಷಗಳ ಹಿಂದೆ- ಅಂದರೆ, 1909ರ ಜುಲೈ 1ರಂದು. ಆಗ ಧಿಂಗ್ರಾ ಮತ್ತು ಸಾವರ್ಕರ್ ಇಬ್ಬರಿಗೂ ಕೇವಲ 27ರ ಏರುಯೌವನ ವಷ್ಟೆ!
ಆ ದಿನಗಳಲ್ಲಿ ಬ್ರಿಟಿಷರ ಪರವಾಗಿದ್ದ ಕೆಲವು ಗಣ್ಯ ಭಾರತೀಯರು, ಧಿಂಗ್ರಾನನ್ನು ಖಂಡಿಸುತ್ತ ಒಂದು ರೀತಿಯಲ್ಲಿ ಶರಣಾಗತ ರಾದರು. ಈ ನೆಪದಲ್ಲಿ ಲಂಡನ್ನಿನ ಕಾಕ್ ಸ್ಟನ್ ಸಭಾಂಗಣದಲ್ಲಿ ಸಭೆಗಳು ನಡೆದು, ಧಿಂಗ್ರಾ ವಿರುದ್ಧ ತರಾತುರಿಯಲ್ಲಿ ಒಂದರ ಹಿಂದೊಂದರಂತೆ ಮೂರು ಖಂಡನಾ ನಿರ್ಣಯಗಳನ್ನು ಅಂಗೀಕರಿಸುವ ಸನ್ನಾಹ ನಡೆಯಿತು. ಆಗ ಈ ಸಭೆಗೆ ನುಗ್ಗಿ, ಇಂತಹ ಶರಣಾಗತಿ ತಂತ್ರದ ವಿರುದ್ಧ ಸಿಡಿದೆದ್ದು, ‘ಈ ಸಭೆಯಲ್ಲಿರುವ ಪ್ರತಿಯೊಬ್ಬರೂ ಖಂಡನಾ ನಿರ್ಣಯಗಳ ಪರವಾಗಿಲ್ಲ.
ಇದನ್ನು ಒಪ್ಪದೆ ಇರುವವರೂ ಇzರೆ!’ ಎಂದು ಘರ್ಜಿಸಿದರು. ಪರಿಣಾಮವಾಗಿ, ಇಡೀ ಸಭೆಯಲ್ಲಿ ಕೋಲಾಹಲ ಸೃಷ್ಟಿ ಯಾಯಿತು. ಈ ಸಭೆಯ ಬಗ್ಗೆ ಮರುದಿನದ ‘ಡೈಲಿ ಡಿಸ್‌ಪ್ಯಾಚ್’ ಪತ್ರಿಕೆಯು, ‘ನೋಡಲು ಬಿಳಿಚಿಕೊಂಡಿದ್ದ ವ್ಯಕ್ತಿಯೊಬ್ಬ
ತುಂಬಾ ನಾಟಕೀಯ ಶೈಲಿಯಲ್ಲಿ ತನ್ನ ಪ್ರತಿಭಟನೆ ವ್ಯಕ್ತಪಡಿಸಿದ. ಕೊನೆಗೆ ಈ ವ್ಯಕ್ತಿಯು ಸಾವರ್ಕರ್ ಎಂದು ಗೊತ್ತಾಯಿತು. ಈ ಮನುಷ್ಯ ತುಂಬಾ ತೀವ್ರ ಸ್ವರೂಪದ ರಾಷ್ಟ್ರೀಯವಾದಿಯಾಗಿದ್ದು, ರಾಜಕೀಯ ಸ್ವಾತಂತ್ರ್ಯವನ್ನು ಕುರಿತ ಸಮಗ್ರ ಸಾಹಿತ್ಯ ವನ್ನೂ ಓದಿಕೊಂಡಿದ್ದ,’ ಎಂದು ಬಣ್ಣಿಸಿತ್ತು.
ಆ ಸಮಯದಲ್ಲಿ ಸಾವರ್ಕರ್ ಅವರ ಬೆಂಬಲಕ್ಕೆ ನಿಂತಿದ್ದವರಲ್ಲಿ ಅಂದಿನ ಕಾಂಗ್ರೆಸಿನ ಅಗ್ರೇಸರರಲ್ಲಿ ಒಬ್ಬರಾದ ಬಿಪಿನ್‌ಚಂದ್ರ ಪಾಲ, ನಂತರದ ದಿನಗಳಲ್ಲಿ ಆ ಪಕ್ಷದ ಮುಂಚೂಣಿ ನಾಯಕಿಯರಲ್ಲಿ ಒಬ್ಬರಾಗಿದ್ದ ಸರೋಜಿನಿ ನಾಯ್ಡು ಅವರ ಖಾಸಾ ತಮ್ಮ ವೀರೇಂದ್ರನಾಥ್ ಚಟ್ಟೋ ಪಾಧ್ಯಾಯ, ‘ಇಂಡಿಯಾ ಹೌಸ್’ನ ಮಾಲೀಕರಾಗಿದ್ದುಕೊಂಡು ಲಂಡನ್ನಿನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಬ್ರಿಟಿಷರ ವಿರುದ್ಧ ಸಂಘಟಿಸುತ್ತಿದ್ದ ಶಾಮ್‌ಜೀ ಕೃಷ್ಣವರ್ಮ, ವಿದೇಶೀ ನೆಲದಲ್ಲಿ ಭಾರತದ ರಾಷ್ಟ್ರಧ್ವಜ ವನ್ನು ಪ್ರಪ್ರಥಮವಾಗಿ ಹಾರಿಸಿದ ವೀರವನಿತೆ ಮೇಡಂ ಭಿಕೈಜಿ ಕ್ಯಾಮಾ ಮುಂತಾದವರೆಲ್ಲ ಇದ್ದರು. ಈ ಪೈಕಿ ಚಟ್ಟೋಪಾ ಧ್ಯಾಯ ಅವರಂತೂ ‘ದಿ ಟೈಮ್ಸ’ ಪತ್ರಿಕೆಗೆ ಒಂದು ಪತ್ರ ಬರೆದು, ‘ಕಾಕ್‌ಸ್ಟನ್ ಸಭಾಂಗಣದಲ್ಲಿ ನಡೆದ ಸಭೆಗೆ ನಾನೇ ಖುದ್ದಾಗಿ ತೆರಳಿ, ಧಿಂಗ್ರಾನ ಪರವಾಗಿ ದನಿ ಎತ್ತಬೇಕೆಂದಿದ್ದೆ.
ಆದರೆ, ಅನಿವಾರ್ಯ ಕಾರಣಗಳಿಂದ ಹೋಗಲಾಗಲಿಲ್ಲ. ಅದೇನೇ ಇರಲಿ, ಅಲ್ಲಿ ಧಿಂಗ್ರಾ ನ ವಿರುದ್ಧ ಅಂಗೀಕರಿಸಿದ ನಿರ್ಣಯ ಗಳ ವಿರುದ್ಧ ಸಾವರ್ಕರ್ ಅವರು ಪ್ರತಿಭಟಿಸಿರುವುದು ನನಗೆ ಸಂತೋಷವನ್ನು ಉಂಟುಮಾಡಿದೆ,’ ಎಂದು ಪ್ರಶಂಸಿಸಿದ್ದರು. ಸಾವಕರ್ರ ವಿರುದ್ಧ ವಿವೇಚನಾರಹಿತವಾಗಿ ಊಳಿಡುತ್ತಿರುವ ಇಂದಿನ ರಾಜಕೀಯ ಪಕ್ಷ ಕಾಂಗ್ರೆಸ್ಸಿನ ರೋಗಗ್ರಸ್ತ ಅವಸ್ಥೆಗೂ, ಅಂದಿನ ಸಂಘಟನೆ ಕಾಂಗ್ರೆಸ್ಸಿನಲ್ಲಿದ್ದ ಧೋರಣೆಗೂ ಇರುವ ವ್ಯತ್ಯಾಸ ಎಷ್ಟೆಂದು ತೋರಿಸಲು ಈ ಘಟನೆಯನ್ನು ಇಲ್ಲಿ ಹೇಳಬೇಕಾಯಿತಷ್ಟೆ.
ಸಾವರ್ಕರ್ ಚಿಕ್ಕಂದಿನ ಭಾರತೀಯ ಪ್ರಜ್ಞೆ ಮತ್ತು ಚಿಂತನಾ ಕ್ರಮಗಳನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದರು. ತೀರಾ ಸಣ್ಣ ಪ್ರಾಯದ ಅವರು ಸ್ಮೃತಿಗಳು, ಪುರಾಣಗಳು, ರಾಮಾಯಣ, ಮಹಾಭಾರತ ಇತ್ಯಾದಿಗಳ ಓದಿಗೆ ತೆರೆದುಕೊಂಡಿದ್ದೇ ಇದಕ್ಕೆ ಮೂಲಕಾರಣ. ಇದಲ್ಲದೆ, ಬಾಲಗಂಗಾಧರ ತಿಲಕರ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಕೇಸರಿ’ ಮತ್ತು ‘ನಾಸಿಕ್ ವೈಭವ್’ ಪತ್ರಿಕೆ ಗಳಲ್ಲಿ ಮೂಡಿಬರುತ್ತಿದ್ದ ರಾಷ್ಟ್ರೀಯವಾದಿ ವಿಚಾರಗಳು ಅವರ ಮೇಲೆ ಗಾಢ ಪ್ರಭಾವ ಬೀರಿದ್ದವು.
ಹೀಗೆ ಸಾವರ್ಕರರು ಪ್ರಾಯದ ಸಾರ್ವಜನಿಕ ವಿದ್ಯಮಾನಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಆ ದಿನಗಳ ಅವರು ಪರಶುರಾಮ
ಸಿಂಪಿ ಮತ್ತು ರಾಜಾರಾಂ ಸಿಂಪಿ ಎನ್ನುವ ಸಹೋದರರು ಕಟ್ಟಿದ್ದ ಒಂದು ರಂಗತಂಡಕ್ಕೆ ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟಿಸುವಂಥ ಹಾಡುಗಳನ್ನೂ ಸಂಭಾಷಣೆಗಳನ್ನೂ ಬರೆದು ಕೊಡುತ್ತಿದ್ದರು. ಇಂತಹ ಸಾವರ್ಕರ್ ಅವರಿಗೆ ಭಾರತವನ್ನು ಒಂದು ಭವ್ಯ ರಾಷ್ಟ್ರವಾಗಿ ಕಲ್ಪಿಸಿಕೊಳ್ಳಲು ನಿರ್ಣಾಯಕ ಬೌದ್ಧಿಕ ನೆರವನ್ನು ನೀಡಿದ್ದು ವಿಷ್ಣುಕೃಷ್ಣ ಚಿಪಳೂಣರ್ಕ ಅವರ ‘ನಿಬಂಧ ಮಾಲಾ’ ಎನ್ನುವ ಅಚಾರ್ಯ ಕೃತಿ!
ಇಷ್ಟರ ಮಧ್ಯೆ, ದಾಮೋದರ ಚಾಪೇಕರ್ ಮತ್ತು ಬಾಲಕೃಷ್ಣ ಚಾಪೇಕರ್ ಎನ್ನುವ ಸಹೋದರರು ಇಬ್ಬರು ಬ್ರಿಟಿಷ್ ಅಧಿಕಾರಿ ಗಳನ್ನು ಗುಂಡಿಟ್ಟು ಕೊಂದರು. ಆಗ, ದೇಶಹಿತಕ್ಕಾಗಿ ಈ ಕಾರ್ಯವನ್ನು ಕೈಗೊಂಡ ಚಾಪೇಕರ್ ಸೋದರರನ್ನು ಶ್ಲಾಘಿಸಿ, ಸಾವರ್ಕರ್ ಒಂದು ಕಾವ್ಯವನ್ನು ಬರೆದರು. ಆಗಿನ್ನೂ ಅವರಿಗೆ ೧೫ರ ಪ್ರಾಯವಷ್ಟೆ. ಇಂತಹ ಹುಟ್ಟು ಹೋರಾಟಗಾರನ ಬಗ್ಗೆ ಕ್ಷುಲ್ಲಕವಾಗಿರುವ ಮಾತನಾಡುತ್ತಿರುವ ಕಾಂಗ್ರೆಸ್ಸಿಗೆ ಈ ಇತಿಹಾಸವನ್ನು ಮತ್ತೆ ನೆನಪಿಸಬೇಕಾಗಿ ಬಂದಿರುವುದು ಆ ಪಕ್ಷದ ದಯನೀಯ ಸ್ಥಿತಿಗೊಂದು ಸಂಕೇತವಾಗಿದೆ.
ಆ ದಿನಗಳಲ್ಲಿ ಕಾಂಗ್ರೆಸ್, ಬ್ರಿಟಿಷರ ಕೃಪಾಕಟಾಕ್ಷವನ್ನು ನಿರೀಕ್ಷಿಸುತ್ತ, ಮನವಿಗಳನ್ನು ಸಲ್ಲಿಸುವುದಕ್ಕಷ್ಟೇ ತನ್ನ ಪಾತ್ರವನ್ನು ಸೀಮಿತಗೊಳಿಸಿಕೊಂಡಿತ್ತು. ಏನೇ ಆಗಲಿ, ಇದು ಎ.ಒ.ಹ್ಯೂಮ್ ಎನ್ನುವ ವಿದೇಶೀ ಪ್ರಜೆ ಹುಟ್ಟುಹಾಕಿದ ಪಕ್ಷವಲ್ಲವೇ? ಅವರು ಕಾಂಗ್ರೆಸ್ ಪಕ್ಷವನ್ನು ಬ್ರಿಟಿಷ್ ಸರಕಾರದ ಪರವಾಗಿ ಒಂದು ಸುರಕ್ಷಿತ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಸಾವರ್ಕರ್ ತಾಳಿದ ನಿಲುವಾಗಿತ್ತು.
ಹೀಗಾಗಿ ಅವರು, ಬ್ರಿಟಿಷರ ವಿರುದ್ಧ ಚಟುವಟಿಕೆಗಳನ್ನು ನಡೆಸುವಂತಹ ‘ಮಿತ್ರ ಮೇಳ’ ಎನ್ನುವ ರಹಸ್ಯ ಸಂಘಟನೆಯನ್ನು (ಸೀಕ್ರೆಟ್ ಸೊಸೈಟಿ) ಹುಟ್ಟುಹಾಕಿದರು. ಸಾವರ್ಕರರು ಬ್ರಿಟಿಷರನ್ನು ಒಂದು ವಿಷವೃಕ್ಷಕ್ಕೆ ಹೋಲಿಸಿ, ‘ದೇಶದಿಂದ ಅವರನ್ನು ಸಂಪೂರ್ಣವಾಗಿ ಓಡಿಸಬೇಕೆಂಬ ದನಿ ಎತ್ತಿ, ಸ್ವಾತಂತ್ರ್ಯಲಕ್ಷ್ಮಿಗೆ ಜಯವಾಗಲೀ!’ ಎನ್ನುವ ಘೋಷಮಂತ್ರವನ್ನು ಸೃಷ್ಟಿಸಿದ್ದು ಮತ್ತು ದೇಶಕ್ಕಾಗಿ ಹುತಾತ್ಮರಾದ ತಾನಾಜಿ ಮಲುಸಾರೆ ಹಾಗೂ ಬಾಜಿಪ್ರಭು ದೇಶಪಾಂಡೆಯವರನ್ನು ಕುರಿತು ಮನಸೂರೆ ಗೊಳ್ಳುವಂತಹ ಲಾವಣಿಗಳನ್ನು ಸೃಷ್ಟಿಸಿದ್ದು ಆ ದಿನಗಳ! ಇಷ್ಟೇ ಅಲ್ಲ, ನಾಸಿಕ್‌ನಲ್ಲಿ ಯಾವುದೇ ಜಾತಿಭೇದವಿಲ್ಲದೆ ಭೋಜನ ಕೂಟಗಳನ್ನು ನಡೆಸುವ ಪುರೋಗಾಮಿ ಹೆಜ್ಜೆಯನ್ನು ಇಟ್ಟ ಕೀರ್ತಿ ಕೂಡ ಸಾವರ್ಕರರಿಗೆ ಸಲ್ಲಬೇಕು.
ಆ ದಿನಗಳಲ್ಲಿ ಅವರು, ‘ನಾವು ಈಗ ಮಾಡುತ್ತಿರುವ ಕೆಲಸಗಳು ಬೆಂಕಿಕಡ್ಡಿಗಳಂತಿವೆ. ಇದನ್ನು ನಾವು ಸರಿಯಾದ ಜಾಗದಲ್ಲಿಟ್ಟರೆ
ಬ್ರಿಟಿಷ್ ಸಾಮ್ರಾಜ್ಯ ಸುಟ್ಟು ಭಸ್ಮವಾಗಲಿದೆ. ಇದಕ್ಕಾಗಿ ಮುವ್ವತ್ತು ಕೋಟಿ ಭಾರತೀಯರ ಪೈಕಿ ಎರಡು ಲಕ್ಷ ಭಾರತೀಯರು ಸಿಡಿದೆದ್ದರೆ ಸಾಕು,’ ಎನ್ನುತ್ತಿದ್ದರು. ಮುಂದೆ, ಈ ಸಂಘಟನೆಯೇ ಅಭಿನವ ಭಾರತ’ ಎಂದಾಯಿತು. ಇದನ್ನು ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸಿನವರೆಲ್ಲ ಅರಿಯುವ ವಿನಯವನ್ನು ಬೆಳೆಸಿಕೊಳ್ಳಬೇಕಷ್ಟೆ.
ಏಕೆಂದರೆ, ಸಾರ್ವಜನಿಕ ಜೀವನದಲ್ಲಿ ನಮ್ರತೆ ಮತ್ತು ಸತ್ಯ ಪಕ್ಷಪಾತಿಯಾಗಿರುವುದು ತೀರಾ ಮೂಲಭೂತವಾದ ಗುಣಗಳಾ ಗಿವೆ. ಬ್ರಿಟಿಷರು ತಮ್ಮ ಒಡೆದಾಳುವ ನೀತಿಗೆ ತಕ್ಕಂತೆ ೧೯೦೫ರಲ್ಲಿ ಬಂಗಾಳವನ್ನು ಇಬ್ಭಾಗ ಮಾಡಿದ್ದು ಇತಿಹಾಸದ ನೈಜ ವಿದ್ಯಾರ್ಥಿ ಗಳಿಗೆಲ್ಲ ಗೊತ್ತಿದೆ. ಇದರ ವಿರುದ್ಧ ದನಿಯೆತ್ತಿದ ಭಾರತೀಯರಿಂದಾಗಿ ಎರಡು ವಿದ್ಯಮಾನಗಳು ಸಂಭವಿಸಿದವು. ಅವೆಂದರೆ, ಸ್ವದೇಶಿ ಚಳವಳಿಗೆ ಮತ್ತು ಬ್ರಿಟಿಷ್ ವಸ್ತುಗಳಿಗೆ ಬಹಿಷ್ಕಾರ ಹಾಕುವ ಆಂದೋಲನ. ಇದರಂತೆ ಸಾವರ್ಕರರು ಐದು ಸಾವಿರ ಜನರನ್ನು ಸಂಘಟಿಸಿ, ಪುಣೆಯಲ್ಲಿ ಒಂದು ಬೃಹತ್ ಸ್ವದೇಶೀ ಸಭೆಯನ್ನೇ ನಡೆಸಿ, ಬ್ರಿಟಿಷರಿಗೆ ನಡುಕ ಹುಟ್ಟಿಸಿದರು.
ಆ ಸಭೆಯಲ್ಲಿದ್ದ ತಿಲಕರು, ‘ಇಂದಿನ ಈ ಪ್ರತಿಭಟನೆಯು ಲ್ಯಾಂಕಾಶೈರ್ ಮತ್ತು ಮ್ಯಾಂಚೆಸ್ಟರ್‌ಗಳಲ್ಲಿ ಕತ್ತಲು ಕವಿಯುವಂತೆ ಮಾಡಿದೆ’ ಎಂದು ಉದ್ಗರಿಸಿದ್ದರು. ವಾಸ್ತವವಾಗಿ, ಆ ದಿನಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಹಕ್ಕುಗಳಿಗಾಗಿ ಹೋರಾಡು ತ್ತಿದ್ದ ಮಹಾತ್ಮ ಗಾಂಧಿ ಕೂಡ ಬ್ರಿಟಿಷ್ ಉತ್ಪನ್ನಗಳ ಬಹಿಷ್ಕಾರದ ಪ್ರತಿಪಾದಕರಾಗಿದ್ದರು. 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟವನ್ನು ಬಹಳ ಕಾಲ ‘ಸಿಪಾಯಿ ದಂಗೆ’ ಎಂದಷ್ಟೆ ಕರೆಯಲಾಗುತ್ತಿತ್ತು.
ಆದರೆ, ಅದು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟ ಎಂದು ಆಧಾರಸಮೇತನ ನಿರೂಪಿಸಿದವರು ಸಾವರ್ಕರರು. ಹಾಗೆಯೇ, ಲಂಡನ್ನಿಗೆ ಕಾನೂನುಶಾಸದ ಅಧ್ಯಯನಕ್ಕೆಂದು ಹೋದರೂ, ‘ನಾನು ಎಂದಿಗೂ ಬ್ರಿಟಿಷ್ ವಸಹಾತುಶಾಹಿಯ ನೌಕರ ನಾಗುವುದಿಲ್ಲ’ ಎಂದು ಸಂಕಲ್ಪ ಮಾಡಿದವರು ಸಾವರ್ಕರರು; ಕಾಂಗ್ರೆಸಿಗಿಂತಲೂ ೨೦ ವರ್ಷ ಮೊದಲೇ ಪೂರ್ಣ ಸ್ವಾತಂತ್ರ್ಯ ಕ್ಕಾಗಿ ದನಿ ಎತ್ತಿದವರು ಸಾವರ್ಕರರು.
ತಮ್ಮ ಜೀವಿತಾವಧಿಯ ಮೂರು ದಶಕಗಳಷ್ಟು ದೀರ್ಘಕಾಲವನ್ನು ಘೋರವಾದ ಜೈಲು ಶಿಕ್ಷೆ ಮತ್ತು ನಿರ್ಬಂಧಿತ ವಾಸದ ಸವೆಸಿದ ಸಾವರ್ಕರ್, ಭಾರತಾಂಬೆಯ ನಿಜವಾದ ಅಮೃತಪುತ್ರರಲ್ಲಿ ಒಬ್ಬರಲ್ಲವೇ? ನಾವು ಅಂತಹ ಕ್ಷಾತ್ರ ತೇಜಸ್ಸನ್ನು ಗೌರವಿಸಬೇಕು; ಅಂತಹ ಸಂಸ್ಕೃತಿಯ ವಾರಸುದಾರರಾಗಿರುವುದಕ್ಕೆ ಅಭಿಮಾನದಿಂದ ಎದೆಯುಬ್ಬಿಸಬೇಕು. ಅಂತಹ ಭಾವನೆಯಲ್ಲಿ ನಾವೆಲ್ಲರೂ ಕೃತಾರ್ಥರಾಗಬೇಕು!
(ಲೇಖಕರು ಬಿಜೆಪಿ ರಾಜ್ಯಧ್ಯಕ್ಷರು)