ಕಳೆದ ಸೋಮವಾರ ಸಾಯಂಕಾಲ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿತ್ತು. ನಗರದ ರೈಲ್ವೆ ಸ್ಟೇಷನ್ ಏರಿಯಾ, ಗೋಳಗುಮ್ಮಟ ಏರಿಯಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭೂಮಿಯಲ್ಲಿ ಸದ್ದು ಕೇಳಿಬಂದಿತ್ತು.
ಕವಲಗಿ ಗ್ರಾಮದಲ್ಲಿ ವರದಿಯಾಗಿರುವಂತೆಯೇ ಭೂಮಿಯ 10 ಕೀಮೀ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂದು ಜಿಲ್ಲಾಡ ಳಿತ ವರದಿ ಮಾಡಿತ್ತು. ಸೋಮವಾರ ರಾತ್ರಿ ಕೆಲ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿರುವ ವರದಿ ಬಂದಿದೆ.
ವಿಜಯಪುರ ನಗರ, ಸಿಂದಗಿ, ಇಂಡಿ, ಬಸವನಬಾಗೇವಾಡಿ, ನೆರೆಯ ಬಾಗಲಕೋಟೆಯ ಜಮಖಂಡಿ ಹಾಗೂ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಕಂಪನದ ಅನುಭವ ಉಂಟಾಗಿದೆ.
ಕಳೆದ ವಾರ ವಿಜಯಪುರ ಜಿಲ್ಲೆಯ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ ತಾಲೂಕುಗಳು ಸೇರಿದಂತೆ ಇತರೆ ಭಾಗಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಆತಂಕದಿಂದ ಮನೆಯಿಂದ ಆಚೆ ಬಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈವರೆಗೆ 19ನೇ ಬಾರಿ ಭೂಕಂಪಿಸಿದೆ.