Sunday, 24th November 2024

ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಿ: ಸಿ.ನಾಗಪ್ಪ

ನೀರಮಾನ್ವಿ ವಲಯಮಟ್ಟದ ಪ್ರತಿಭಾ ಕಾರಂಜಿ..

ಮಾನವಿ : ತಾಲೂಕಿನ ನೀರಮಾನವಿ ಗ್ರಾಮದ ಸ, ಹಿ,ಪ್ರಾ,ಶಾಲೆಯಲ್ಲಿ ನಡೆದ ವಲಯಮಟ್ಟದ ಕಾರ್ಯಕ್ರಮವನ್ನು ಉದ್ಘಾ ಟನೆ ಮಾಡಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಿ ನಾಗಪ್ಪ ಹೇಳಿದರು.

ಪ್ರತಿವರ್ಷದಂತೆ ನೀರಮಾನವಿಯಲ್ಲಿ ನಡೆದ ವಲಯಮಟ್ಟದ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಫ್ರೌಡ, ಹಾಗೂ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು 18 ಶಾಲೆಯ 500 ಹೆಚ್ಚು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹು ಮಾನಗಳನ್ನು ಪಡೆದರು‌.

ನಂತರ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಕುರ್ಡಿ ಮಾತಾನಾಡಿ ಕರೋನ ಕಾಲ ಮುಗಿದ ನಂತರ ಇದು ತುಂಬಾ ಸಂತೋಷದ ಕ್ಷಣವಾಗಿದೆ ಇಂತಹ ಕಾರ್ಯಕ್ರಮದಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಯನ್ನು ಹೊರ ತೆಗೆದಂತೆ ಆಗುತ್ತದೆ. ಅವರ ಬೌದ್ಧಿಕ ಮಟ್ಟಕೂಡ ಅಧಿಕವಾಗುತ್ತದೆ ಎಂದು ನಂತರ ವೇದಿಕೆಯಲ್ಲಿದ್ದ ಗಣ್ಯರಿಗೆ ಮತ್ತು ಸಾಧಕರಿಗೆ ಶಾಲೆ ಆಡಳಿತದಿಂದ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬಿ ಆರ್ ಸಿ ನಾಗಪ್ಪ, ಸಿದ್ದಲಿಂಗಪ್ಪ ನಂದಿಕೋಲು. ಸುರೇಶ ಬೆಸ್ತಾರವಾಡಿ, ನೌಕರರ ಸಂಘ ಅಧ್ಯಕ್ಷ ಶ್ರೀಶೈಲ ಗೌಡ, ಜಿಲ್ಲಾ ಉಪಧ್ಯಾಕ್ಷ ಸುರೇಶ ಕುರ್ಡಿ, ತಾ ಅಧ್ಯಕ್ಷ ಸಂಗಮೇಶ ಮುದೋಳ, ಹನುಮಂತ ಜಲ್ಲಿ, ಶ್ರೀನಿವಾಸ ಮ್ಯಾಗಳಮನಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಶೆ ಶರಣಮ್ಮ, ಜಾನೇಸಾಬ್ ಮುಖ್ಯಶಿಕ್ಷಕರು, ಸಿ ಆರ್ ಪಿ, ರಮೇಶ ಉಜ್ಜಣ್ಣನವರ, ದೈಹಿಕ ಶಿಕ್ಷಕ ಮಹೆಬೂಬ್, ಮಹೆಬೂಬ್ ಬಾವಿಕಟ್ಟಿ, ಶರಣಬಸವ ಸಾಧಪೂರ, ವಿಜಯಕುಮಾರ ತಾಂಡ, ಶಿಕ್ಷಕಿಯರಾದ ಶಾಂತ ಕುಮಾರಿ, ಶಾಂತಮ್ಮ ಬಿ. ಶ್ರೀದೇವಿ, ಲಕ್ಷ್ಮೀ, ಶೋಭ, ರಜನಿ, ನಾಗಲಿಂಗ ಸೇರಿದಂತೆ ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.