ರಾಯಚೂರು : ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಲು ಕೇಂದ್ರ ಬಡ್ಜೆಟ್ ನಲ್ಲಿ ವಿಶೇಷ ಅನುದಾನವಿಟ್ಟು ಅಭಿಯಾನ ನಡೆಸಿದ್ದಾರೆ. ರಾಜ್ಯ ಸರ್ಕಾರ ಸಿರಿಧಾನ್ಯ ಸಮಾವೇಶವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ನಿರ್ಣಯಗಳನ್ನ ರಾಯಚೂರು ಮಿಲ್ಲೆಟ್ ಡಿಕ್ಲರೇಷನ್ ಅಂತ ಕರೆಯುತ್ತೇವೆ. ಈ ಸಭೆಯಲ್ಲಿನ ಚರ್ಚೆ, ನಿರ್ಣಯಗಳನ್ನ ಅನುಷ್ಟಾನ ಮಾಡಲಾಗುತ್ತದೆ. ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಕಾರಣ ಇತ್ತೀಚಿನ ದಿನಗಳಲ್ಲಿ ಕ್ರಮೇಣವಾಗಿ ಸಿರಿಧಾನ್ಯ ಬೆಳೆಯುವುದು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಈಗ ಬಗ್ಗೆ ಸರ್ಕಾರ ಕಾರ್ಯಕ್ರಮ ಮಾಡಿ ಮತ್ತೆ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸುತ್ತದೆ ಎಂದರು.
ನಾನು ಕಳೆದ 30 ವರ್ಷಗಳಿಂದ ರೈಸ್ ತಿನ್ನುತ್ತಿಲ್ಲ, ಸಿರಿಧಾನ್ಯ ತಿನ್ನುತ್ತಿದ್ದೇನೆ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸುತ್ತೇವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿಯೂ ಕೂಡ ಚರ್ಚೆಯಾಗುತ್ತಿದೆ ಎಂದು ಹೇಳಿದರು.
ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ 9 ಯೋಜನೆ ಕೈಗೆತ್ತಿಕೊಂಡಿದ್ದೇವೆ. ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸುವ ಕುರಿತ ವಿಚಾರ ಸುಪ್ರೀಂಕೋರ್ಟ್ ನಲ್ಲಿದೆ. ನೋಟಿಫಿಕೇಷನ್ ಬಂದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದರು. ಪ್ರವಾಹ ವಿಚಾರಕ್ಕೆ ಬಂದಾಗ 1 ಲಕ್ಷ 30 ಸಾವಿರ ಹೆಕ್ಟೇರ್ ಭೂ ಸ್ವಾಧೀನ ಹಾಗೂ 22 ಹಳ್ಳಿಗಳ ಸ್ಥಳಾಂತರ ಮಾಡಬೇಕು, ಈಗಾಗಲೇ ಹಳ್ಳಿಗಳ ಸ್ಥಳಾಂತರ ಪ್ರಕ್ರೀಯೆ ಆರಂಭವಾಗಿದೆ. ಅದಕ್ಕೆ 5 ಸಾವಿರ ಕೋಟಿ ಬೇಕಾಗುತ್ತೆ ಅದನ್ನು ಒದಗಿಸುತ್ತಿದ್ದೇನೆ ಎಂದರು.
ರಾಯಚೂರಿನಲ್ಲಿ ಮುಂದಿನ ತಿಂಗಳು ವಿಮಾನನಿಲ್ದಾಣಕ್ಕೆ ಅಡಿಗಲ್ಲು ಹಾಕಲು ಬರುತ್ತಿದ್ದೇನೆ. ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ದಿ ದೃಷ್ಟಿಯಲ್ಲಿ ಜವಳಿ ಪಾರ್ಕ್ ಮಾಡಲು ನಾವು ಸಿದ್ದರಿದ್ದೇವೆ. ಸರ್ಕಾರದಿಂದಲೂ ಕೂಡ ಈಗಾಗಲೇ ಬೇಕಾಗಿರುವಂತಹ ಅಗತ್ಯ ಕ್ರಮಗಳ ಬಗ್ಗೆ ಕ್ರಮಕ್ಕೆ ಮುಂದಾಗಿದ್ದು ಆದಷ್ಟು ಬೇಗನೆ ಈ ಒಂದು ಭಾಗಕ್ಕೆ ಜವಳಿ ಪಾರ್ಕ್ ಮಾಡಲಾಗುತ್ತದೆ.
ಇದರೊಂದಿಗೆ ಈ ಭಾಗದ ರೈತರಲ್ಲಿ ಹೆಚ್ಚಿನ ಹುಮ್ಮಸ್ಸು ಮೂಡಿಸಲು ಕೃಷಿ ವಿಜ್ಞಾನಿಗಳು ರೈತರಿಗೆ ಪ್ರಯೋಜನವಾಗುವ ಸಂಶೋಧನೆಗಳನ್ನ ಮಾಡಬೇಕು. ಮುಂದಿನ ವರ್ಷ ಜನವರಿ ತಿಂಗಳು ಬೆಂಗಳೂರಿನಲ್ಲಿ ಮಿಲ್ಲೆಟ್ ಟ್ರೇಡ್ ಫೇರ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.