Saturday, 23rd November 2024

ಕೃಷಿ ಕ್ಷೇತ್ರದ ಸಮಗ್ರ ಡಿಜಟಲೀಕರಣಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ನರೇಂದ್ರಸಿ0ಗ್ ತೋಮರ್

ರಾಯಚೂರು: ಕೇಂದ್ರದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರವನ್ನು ಸಮಗ್ರವಾಗಿ ಡಿಜಟಲೀಕರಣಗೊಳಿಸಿ, ಪಾರದರ್ಶಕತೆಯನ್ನು ಜಾರಿಗೊಳಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ ಯಲ್ಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮರ್ ಪ್ರಶಂಸೆ ವ್ಯಕ್ತಪಡಿಸಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇವರ ಸಹಯೋಗದಲ್ಲಿ ವಿವಿ ಆವರಣದ ಪ್ರೇಕ್ಷಾಗೃಹದಲ್ಲಿ ಶನಿವಾರ ಏರ್ಪಡಿಸಲಾದ ಸಿರಿಧಾನ್ಯ ಸಮಾವೇಶ-೨೦೨೨ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಕಳೆದ ೦೮ ಗಳಿಂದ ಕೃಇ ಕ್ಷೇತ್ರ ಅಭಿವೃದ್ಧಿ ಕಾಣುತ್ತಿದ್ದು, ರೈತರ ಹೊಲಗಳಲ್ಲಿ ತಂತ್ರಜ್ಞಾನದ ಸದ್ಬಳಕೆಯಾ ಗುತ್ತಿದೆ. ಇದರ ಲಾಭ ರೈತರಿಗೆ ತಲುಪಲು ಪ್ರಾರಂಭವಾಗಿದೆ. ಸಿರಿಧಾನ್ಯ ನಮ್ಮ ಪ್ರಾಚೀನ ಆಹಾರ ಪದ್ಧತಿಯಾಗಿತ್ತು. ಯಜುರ್ವೇದದಲ್ಲೂ ಸಿರಿಧಾನ್ಯ ಗಳ ಬಗ್ಗೆ ಉಲ್ಲೇಖಿಸಲಾಗಿದೆ. ಮೊದಲು ಪ್ರತಿ ಮನೆ ಮನೆಯಲ್ಲೂ ಸಿರಿಧಾನ್ಯ ಬಳಕೆಯಾಗುತ್ತಿತ್ತು. ಆದರೆ ಆಹಾರದ ಕೊರತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಗೋಧಿ ಮತ್ತು ಅಕ್ಕಿ, ಸಿರಿಧಾನ್ಯದ ಜಾಗವನ್ನು ಆಕ್ರಮಿಸಿಕೊಂಡವು.

ದೇಶದಲ್ಲಿ ಸದ್ಯ ಅತಿ ಹೆಚ್ಚು ಆಹಾರ ಧಾನ್ಯದ ಸಂಗ್ರಹವಿದೆ. ರೈತರ ನಷ್ಟ ಕಡಿಮೆಗೊಳಿಸಿ ಆದಾಯ ಹೆಚ್ಚಿಸುವ ಕ್ರಮಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಣ್ಣ ರೈತರ ಆರ್ಥಿಕ ಸಬಲತೆಗಾಗಿ ಕೃಷಿ ಉತ್ಪಾದಕರ ಸಂಘಗಳ ರಚನೆಗೆ ಮುಂದಾಗಿದೆ. ಇದರಿಂದ ಸಣ್ಣ ಸಣ್ಣ ರೈತರು ಸಂಘಟಿತರಾಗಿ ಹೆಚ್ಚಿನ ಲಾಭಗಳಿಸಲು ಸಾಧ್ಯವಿದೆ. ಕೇಂದ್ರ ಸರ್ಕಾರ ಹೈನುಗಾರಿಕೆ, ಜೇನು ಸಾಕಾಣಿಕೆಯಂತಹ ಉಪಕೃಷಿ ಕಸುಬು ಕೈಗೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿಯಾಗಲು ರೈತರಿಗೆ ೧.೫ ಲಕ್ಷ ಕೋಟಿ ರೂ. ಒದಗಿಸಿದೆ.

ದೇಶದ ಆರ್ಥಿಕತೆಗೆ ಕೃಷಿಯದ್ದು ಸಿಂಹಪಾಲು ಆಗಿಸುವತ್ತ ಸರ್ಕಾರ ಪ್ರಾಮಾಣಿಕ ಯತ್ನ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿರುವ ಜೊತೆಗೆ ಅನೇಕ ರೈತ ಪರ ಯೋಜನೆಗಳನ್ನು ಕೂಡ ಜಾರಿಗೊಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ ಎಂದರು.

ಸಿರಿಧಾನ್ಯವನ್ನು ೬೦ ರಿಂದ ೯೦ ದಿನಗಳಲ್ಲಿ ಬೆಳೆಯಬಹುದಾಗಿದ್ದು, ಇದಕ್ಕೆ ರಾಸಾಯನಿಕ ಗೊಬ್ಬರ ಅಥವಾ ಹೆಚ್ಚು ನೀರಿನ ಅಗತ್ಯವಿಲ್ಲ. ಫಲವತ್ತಾಗಿಲ್ಲದ ಭೂಮಿಯಲ್ಲೂ ಕೂಡ ಸಿರಿಧಾನ್ಯವನ್ನು ಬೆಳೆಯಬಹುದಾಗಿದೆ. ಪ್ರಸ್ತುತ ೪೩ ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಸಿರಿಧಾನ್ಯ ಬೆಳೆಯಲಾಗುತ್ತಿದ್ದು, ಇದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ. ಸಿರಿಧಾನ್ಯ ಪ್ರದೇಶ
ವಿಸ್ತರಣೆಗಾಗಿ ಕರ್ನಾಟಕ ರಾಜ್ಯ ಪ್ರತಿ ಹೆಕ್ಟೇರ್‌ಗೆ ೧೦ ಸಾವಿರ ರೂ. ಪ್ರೋತ್ಸಾಹಧನ ಹಾಗೂ ಗರಿಷ್ಠ ೧೦ ಲಕ್ಷ ರೂ. ವರೆಗೂ
ಸಂಸ್ಕರಣಾ ಘಟಕಗಳಿಗೆ ಸಹಾಯಧನ ನೀಡುತ್ತಿರುವುದು ಅತ್ಯಂತ ಸಂತಸಕರ ಸಂಗತಿಯಾಗಿದೆ.

ಕೇಂದ್ರ ಸರ್ಕಾರ ಕೂಡ ಕರ್ನಾಟಕ ರಾಜ್ಯದ ಯತ್ನಕ್ಕೆ ಕೈಜೋಡಿಸಲಿದೆ. ಸಿರಿಧಾನ್ಯಕ್ಕೆ ಕೇವಲ ಭಾರತ ಮಾತ್ರವಲ್ಲ, ವಿದೇಶ ಗಳಲ್ಲಿನ ಜನರ ತಟ್ಟೆಗಳಲ್ಲಿ ಸ್ಥಾನ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಇಡೀ ವಿಶ್ವದ ಗಮನ ಸೆಳೆಯುವಂತಾಗಲು ೨೦೨೩ ರ ಜನವರಿಯಲ್ಲಿ ಸಿರಿಧಾನ್ಯ ಮೇಳವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ಸಿರಿಧಾನ್ಯ ಎಲ್ಲರ ಆಹಾರವಾಗಬೇಕು.

ಸಿರಿಧಾನ್ಯದ ಪೌಷ್ಠಿಕತೆ, ಉಪಯುಕ್ತತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಜನರ ನಡುವೆ ಈ ಕುರಿತು ಹೆಚ್ಚು ಹೆಚ್ಚು
ಚರ್ಚೆಗಳು ನಡೆಯಬೇಕು. ಹೀಗಾದಾಗ ಮಾತ್ರ ಸರ್ಕಾರದ ಉದ್ದೇಶ ಸಫಲವಾಗಲು ಸಾಧ್ಯ ಎಂದು ಕೇಂದ್ರ ಕೃಷಿ ಮತ್ತು
ರೈತ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ಸಿಂಗ್ ತೋಮರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇವರ ಸಹಯೋಗದಲ್ಲಿ ವಿವಿ ಆವರಣದ ಪ್ರೇಕ್ಷಾಗೃಹದಲ್ಲಿ ಶನಿವಾರ ಏರ್ಪಡಿಸಲಾದ ಸಿರಿಧಾನ್ಯ ಸಮಾವೇಶ- ೨೦೨೨ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಕಳೆದ ೦೮ ಗಳಿಂದ ಕೃಇ ಕ್ಷೇತ್ರ ಅಭಿವೃದ್ಧಿ ಕಾಣುತ್ತಿದ್ದು, ರೈತರ ಹೊಲಗಳಲ್ಲಿ ತಂತ್ರಜ್ಞಾನದ ಸದ್ಬಳಕೆಯಾಗುತ್ತಿದೆ. ಇದರ ಲಾಭ ರೈತರಿಗೆ ತಲುಪಲು ಪ್ರಾರಂಭವಾಗಿದೆ. ಸಿರಿಧಾನ್ಯ ನಮ್ಮ ಪ್ರಾಚೀನ ಆಹಾರ ಪದ್ಧತಿಯಾಗಿತ್ತು. ಯಜುರ್ವೇದದಲ್ಲೂ ಸಿರಿಧಾನ್ಯ ಗಳ ಬಗ್ಗೆ ಉಲ್ಲೇಖಿಸಲಾಗಿದೆ. ಮೊದಲು ಪ್ರತಿ ಮನೆ ಮನೆಯಲ್ಲೂ ಸಿರಿಧಾನ್ಯ ಬಳಕೆಯಾಗುತ್ತಿತ್ತು. ಆದರೆ ಆಹಾರದ ಕೊರತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಗೋಧಿ ಮತ್ತು ಅಕ್ಕಿ, ಸಿರಿಧಾನ್ಯದ ಜಾಗವನ್ನು ಆಕ್ರಮಿಸಿಕೊಂಡವು.

ದೇಶದಲ್ಲಿ ಸದ್ಯ ಅತಿ ಹೆಚ್ಚು ಆಹಾರ ಧಾನ್ಯದ ಸಂಗ್ರಹವಿದೆ. ರೈತರ ನಷ್ಟ ಕಡಿಮೆಗೊಳಿಸಿ ಆದಾಯ ಹೆಚ್ಚಿಸುವ ಕ್ರಮಕ್ಕೆ
ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಣ್ಣ ರೈತರ ಆರ್ಥಿಕ ಸಬಲತೆಗಾಗಿ ಕೃಷಿ ಉತ್ಪಾದಕರ ಸಂಘಗಳ ರಚನೆಗೆ
ಮುಂದಾಗಿದೆ. ಇದರಿಂದ ಸಣ್ಣ ಸಣ್ಣ ರೈತರು ಸಂಘಟಿತರಾಗಿ ಹೆಚ್ಚಿನ ಲಾಭಗಳಿಸಲು ಸಾಧ್ಯವಿದೆ. ಕೇಂದ್ರ ಸರ್ಕಾರ ಹೈನುಗಾರಿಕೆ, ಜೇನು ಸಾಕಾಣಿಕೆಯಂತಹ ಉಪಕೃಷಿ ಕಸುಬು ಕೈಗೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿಯಾಗಲು ರೈತರಿಗೆ ೧.೫ ಲಕ್ಷ ಕೋಟಿ ರೂ. ಒದಗಿಸಿದೆ.

ದೇಶದ ಆರ್ಥಿಕತೆಗೆ ಕೃಷಿಯದ್ದು ಸಿಂಹಪಾಲು ಆಗಿಸುವತ್ತ ಸರ್ಕಾರ ಪ್ರಾಮಾಣಿಕ ಯತ್ನ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿರುವ ಜೊತೆಗೆ ಅನೇಕ ರೈತ ಪರ ಯೋಜನೆಗಳನ್ನು ಕೂಡ ಜಾರಿಗೊಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ ಎಂದರು.

ಸಿರಿಧಾನ್ಯವನ್ನು ೬೦ ರಿಂದ ೯೦ ದಿನಗಳಲ್ಲಿ ಬೆಳೆಯಬಹುದಾಗಿದ್ದು, ಇದಕ್ಕೆ ರಾಸಾಯನಿಕ ಗೊಬ್ಬರ ಅಥವಾ ಹೆಚ್ಚು ನೀರಿನ ಅಗತ್ಯವಿಲ್ಲ. ಫಲವತ್ತಾಗಿಲ್ಲದ ಭೂಮಿಯಲ್ಲೂ ಕೂಡ ಸಿರಿಧಾನ್ಯವನ್ನು ಬೆಳೆಯಬಹುದಾಗಿದೆ. ಪ್ರಸ್ತುತ ೪೩ ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಸಿರಿಧಾನ್ಯ ಬೆಳೆಯಲಾಗುತ್ತಿದ್ದು, ಇದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ. ಸಿರಿಧಾನ್ಯ ಪ್ರದೇಶ
ವಿಸ್ತರಣೆಗಾಗಿ ಕರ್ನಾಟಕ ರಾಜ್ಯ ಪ್ರತಿ ಹೆಕ್ಟೇರ್‌ಗೆ ೧೦ ಸಾವಿರ ರೂ. ಪ್ರೋತ್ಸಾಹಧನ ಹಾಗೂ ಗರಿಷ್ಠ ೧೦ ಲಕ್ಷ ರೂ. ವರೆಗೂ
ಸಂಸ್ಕರಣಾ ಘಟಕಗಳಿಗೆ ಸಹಾಯಧನ ನೀಡುತ್ತಿರುವುದು ಅತ್ಯಂತ ಸಂತಸಕರ ಸಂಗತಿಯಾಗಿದೆ. ಕೇಂದ್ರ ಸರ್ಕಾರ
ಕೂಡ ಕರ್ನಾಟಕ ರಾಜ್ಯದ ಯತ್ನಕ್ಕೆ ಕೈಜೋಡಿಸಲಿದೆ.

ಸಿರಿಧಾನ್ಯಕ್ಕೆ ಕೇವಲ ಭಾರತ ಮಾತ್ರವಲ್ಲ, ವಿದೇಶಗಳಲ್ಲಿನ ಜನರ ತಟ್ಟೆಗಳಲ್ಲಿ ಸ್ಥಾನ ದೊರಕುವಂತಾಗಬೇಕು. ಈ
ನಿಟ್ಟಿನಲ್ಲಿ ಇಡೀ ವಿಶ್ವದ ಗಮನ ಸೆಳೆಯುವಂತಾಗಲು ೨೦೨೩ ರ ಜನವರಿಯಲ್ಲಿ ಸಿರಿಧಾನ್ಯ ಮೇಳವನ್ನು ಬೆಂಗಳೂರಿನಲ್ಲಿ
ಆಯೋಜಿಸಲಾಗುವುದು. ಸಿರಿಧಾನ್ಯ ಎಲ್ಲರ ಆಹಾರವಾಗಬೇಕು. ಸಿರಿಧಾನ್ಯದ ಪೌಷ್ಠಿಕತೆ, ಉಪಯುಕ್ತತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಜನರ ನಡುವೆ ಈ ಕುರಿತು ಹೆಚ್ಚು ಹೆಚ್ಚು ಚರ್ಚೆಗಳು ನಡೆಯಬೇಕು. ಹೀಗಾದಾಗ ಮಾತ್ರ ಸರ್ಕಾರದ
ಉದ್ದೇಶ ಸಫಲವಾಗಲು ಸಾಧ್ಯ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ತಿಳಿಸಿದರು.