ರಾಯಚೂರು : ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪ್ರಧಾನಮಂತ್ರಿಗಳ ಕೋರಿಕೆಯಂತೆ ೨೦೨೩ ಅನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲಾಗಿದೆ.
ವಿದೇಶಗಳಲ್ಲಿ ಸಿರಿಧಾನ್ಯದ ಮಹತ್ವವೇನು ಎಂಬುದು ತಿಳಿಯು ವಂತಾಗಬೇಕು. ಮೊದಲೆಲ್ಲಾ ಜನರ ಊಟದ ತಟ್ಟೆಯಲ್ಲಿ ಸಿರಿಧಾನ್ಯದ ಬಳಕೆಯಿತ್ತು. ಜೋಳ, ನವಣೆ, ಆರಕ, ಸಜ್ಜೆ ಹೆಚ್ಚು ತಿನ್ನುತ್ತಿದ್ದರು.
ದೇಶದಲ್ಲಿ ಆಹಾರದ ಕೊರತೆಯ ಕಾರಣ ದಿಂದ, ವಿದೇಶಗಳು ಬಿಸಾಡು ವಂತಹ ಗೋಧಿ, ಅಕ್ಕಿಯನ್ನು ನಮ್ಮ ದೇಶಕ್ಕೆ ತರಿಸಲಾಯಿತು. ಹಸಿರು ಕ್ರಾಂತಿಯ ಮೂಲಕ ದೇಶದಲ್ಲಿ ಹೆಚ್ಚಿನ ಆಹಾರ ಉತ್ಪಾದನೆ ಪ್ರಾರಂಭವಾಗಿ, ಸಿರಿಧಾನ್ಯಗಳು ಜನರ ನಿರ್ಲಕ್ಷ್ಯಕ್ಕೆ ಒಳಗಾಗ ಬೇಕಾಯಿತು.
ಸಾವಿರಾರು ವರ್ಷಗಳಿಂದಲೂ ಸಿರಿಧಾನ್ಯವೇ ನಮ್ಮ ಆಹಾರ ಪದ್ಧತಿಯಾ ಗಿತ್ತು. ನಮ್ಮ ದೇಶದ ಆಹಾರ ಪರಂಪರೆ ಮರು ಕಳಿಸಬೇಕಿದೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಉತ್ಪಾದಕರ ಸಂಘಗಳ ರಚನೆಯಾಗುತ್ತಿವೆ. ದೇಶದ ಜನಸಂಖ್ಯೆಗೆ ಅಗತ್ಯವಿರುವ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸದ್ಯ ಆಹಾರ ಉತ್ಪಾದನೆಯಾಗುತ್ತಿದ್ದು, ವಿದೇಶಕ್ಕೆ ನಾವು ಈಗ ಆಹಾರ ರಫ್ತು ಮಾಡುತ್ತಿದ್ದೇವೆ.
ಕರೋನಾ ಸಂಕಷ್ಟ ಕಾಲದಲ್ಲಿಯೂ ಹೆಚ್ಚು ಆಹಾರ ಉತ್ಪಾದನೆ ಮಾಡಿರುವ ದೇಶ ಭಾರತ. ಉತ್ಪಾದಿತ ಬೆಳೆ ಹಾಳಾಗದಂತೆ ಮಾಡಿ, ಸಂಸ್ಕರಿಸಿ, ಉತ್ತಮ ಬೆಲೆ ಸಿಗುವಂತೆ ಮಾಡಬೇಕಿದೆ. ಬೆಳೆದ ಆಹಾರ ಹಾಳಾಗದೆ, ತಟ್ಟೆಗೆ ತಲುಪುವಂತಾಗಬೇಕು ಎಂದು ಸಚಿವರಾದ ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.