ರಾಯಚೂರು : ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತೋತ್ಸವ ಜಯಂತಿಯನ್ನು ಇದೇ ಸೆ.9 ರಂದು ವಿಜೃಂಭಣೆಯಿಂದ ಆಚರಿಸಲು ಸಮಾಜದಿಂದ ನಿರ್ಧರಿಸಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರಕಾರ ಮತ್ತು ನಗರಸಭೆ ವತಿಯಿಂದ ಆಚರಣೆ ಮಾಡಲಾಗುತ್ತಿರುವ ಜಯಂತೋತ್ಸವದಲ್ಲಿ ನಮ್ಮ ಈಡಿದ ಸಮಾಜದ ಎಲ್ಲಾ ಸಮಾಜ ಬಾಂಧವರು ಸೇರಿ ಆಚರಣೆಯಲ್ಲಿ ಭಾಗಿಯಾಗುತ್ತಿದ್ದು, ಜಯಂತಿಯಂದು ನಗರದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆಯನ್ನು ಮಾಡಲಾ ಗುವುದು ಎಂದರು.
ಇನ್ನೂ ಆರ್ಯ ದ್ರಾವಿಢ ಕಾಲದಿಂದಲೂ ಕೂಡ ನಮ್ಮ ಕುಲ ಕಸುಬು ಮಾಡಿಕೊಂಡು ಬರುತ್ತಿದ್ದರು ಕೂಡ ಸರ್ಕಾರ ಇದುವರೆಗೆ ನಮ್ಮ ಸಮುದಾ ಯವನ್ನು ಗುರುತಿಸುತ್ತಿಲ್ಲ, ಅಲ್ಲದೇ ಒಂದು ನಿಗಮ ಮಂಡಳಿಯನ್ನು ಕೂಡ ಸ್ಥಾಪಿಸಿಲ್ಲ. ನಿಗಮ ಮಂಡಳಿಗೆ ಒತ್ತಾಯಿಸಿ ಹಲವು ಹೋರಾಟ, ಪಾದ ಯಾತ್ರೆಗಳನ್ನು ಮಾಡಿದರು ಕೂಡ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಬರುವ ಜಯಂತಿ ಒಳಗಾಗಿ ಸರಕಾರ ನಿಗಮ ಮಂಡಳಿ ಸ್ಥಾಪನೆ ಮಾಡಿ ಎಲ್ಲಾ ಸೌಲಭ್ಯಗಳನ್ನು ನೀಡದೇ ಹೋದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ನಿರ್ಣಯ ಮಾಡಲಾಗಿದೆ ಎಂದು ಅಸಮಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಆರ್ಯ ಈಡಿಗ ಸಮಾಜದ ಸಂಸ್ಥಾಪಕರಾದ ದೊಡ್ಡ ಖಾಜನಗೌಡ, ತಾಲೂಕ ಅಧ್ಯಕ್ಷ ಎಂ ಬಸವರಾಜ ಗೌಡ, ಈರನ ಗೌಡ, ಮಂಜುನಾಥ್ ಹಾನಗಲ್ ಉಪಸ್ಥಿತರಿದ್ದರು.