ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ಕಾವಿ ತೊಟ್ಟು ಸ್ವಾಮೀಜಿಗಳು ಎನಿಸಿಕೊಂಡ ಅಥವಾ ಸ್ವತಃ ಹಾಗಂದುಕೊಂಡ ಇಂದಿನ ಅನೇಕರು, ಇತ್ತ ಲೌಕಿಕವಾಗಿಯೂ ಇದ್ದು ಅತ್ತ ಅಲೌಕಿಕವಾಗಿಯೂ ಇರಲಾಗದೆ ಮಧ್ಯದಲ್ಲಿ ಬೇತಾಳದಂತೆ ಜಾತಿಯೆಂಬ ವಿಕ್ರಮನ ಬೆನ್ನಿಗೆ ತಗಲಿಕೊಂಡಿದ್ದಾರೆ. ಇಂಥವರಿಂದ ಹಿಂದೂಧರ್ಮಕ್ಕೆ ಕಳಂಕವಾಗುತ್ತಿದೆಯೇ ಹೊರತು ಕೆಲಸಗಳಾಗುತ್ತಿಲ್ಲ.
‘ನಾಲ್ವೆರಳು ಹಸ್ತಿನಿಗೆ | ಮೂವೆರಳು ಚಿತ್ತಿನಿಗೆ |
ಇರ್ವೆರಳು ಕುಚಮಧ್ಯೆ ಶಂಖಿನಿಗೆ, ಪದ್ಮಿನಿಗೆ |
ಒರ್ವೆರಳು ನೋಡ ಸರ್ವಜ್ಞ||’
ಅಂದರೆ, ಹೆಣ್ಣಿನ ಎರಡು ಕುಚಗಳ ಮಧ್ಯೆ ನಾಲ್ಕು ಬೆರಳಿನಷ್ಟು ಅಂತರ ವಿದ್ದರೆ ಆಕೆ ಹಸ್ತಿನಿಯ ಗುಣಗಳುಳ್ಳವಳು, ಮೂರು ಬೆರಳುಗಳ ಅಂತರ ವಿದ್ದರೆ ಚಿತ್ತಿನಿಯ ಗುಣಗಳುಳ್ಳವಳು, ಎರಡು ಬೆರಳಿನ ಅಂತರವಿದ್ದರೆ ಶಂಖಿನಿಯ ಗುಣಗಳುಳ್ಳವಳು, ಒಂದೇ ಬೆರಳಿನ ಅಂತರವಿದ್ದರೆ ಆಕೆ ಪದ್ಮಿನಿಯ ಗುಣವುಳ್ಳವಳು (ಪದ್ಮಿನಿ ರೂಪದ ಶಿಲೆಗಳನ್ನು ಬೇಲೂರು-ಹಳೇಬೀಡು ದೇವಾಲಯಗಳಲ್ಲಿ ಕಾಣಬಹುದು), ಅಂದರೆ ಶ್ರೇಷ್ಠ ಗುಣಗಳುಳ್ಳ ಹೆಣ್ಣಾಗಿರುತ್ತಾಳೆ.
ಅಂಥ ಹೆಣ್ಣನ್ನು ವಿವಾಹವಾಗುವವನೇ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಸಾಧ್ಯ. ಹೀಗೆ ಕಾಮಶಾಸ್ತ್ರದಲ್ಲಿ ಉಲ್ಲೇಖಿಸಿರುವ ಹಸ್ತಿನಿ, ಚಿತ್ತಿನಿ, ಶಂಖಿನಿ, ಪದ್ಮಿನಿ ರೂಪದ ಹೆಣ್ಣನ್ನು ಪ್ರಸ್ತಾಪಿಸುತ್ತಾರೆ ತ್ರಿಪದಿಕವಿ ಸರ್ವಜ್ಞಮೂರ್ತಿ. ನೆನಪಿರಲಿ, ಸರ್ವಜ್ಞ ಒಬ್ಬ ಬ್ರಹ್ಮಚಾರಿ ಸಂನ್ಯಾಸಿಯಾಗಿದ್ದು ಹೆಣ್ಣಿನ ಗುಣ ವರ್ಣನೆಗಳನ್ನು ಮಾಡುತ್ತಾರೆ. ‘ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯಗಳಿಲ್ಲ’ ಎಂದರೆ ಇದೇ.
ಅಸಲಿ ವಿಷಯವೇನೆಂದರೆ, ಸರ್ವಜ್ಞಮೂರ್ತಿ ಹೆಣ್ಣಿನ ಸಂಗವನ್ನೇ ಮಾಡದೆ ಇಂಥ ಕಾಮಶಾಸ್ತ್ರದ ವಿಚಾರಗಳನ್ನು ಪ್ರಸ್ತಾಪಿಸುವುದಿದೆಯಲ್ಲ ಅದೇ ಸಂತನೊಬ್ಬನ ಜ್ಞಾನದ ಪರಾಕಾಷ್ಠೆ. ಅನುಭವಿಸಿ ಹೇಳುವವನು ಭೋಗಿ, ಅನುಭವವಿಲ್ಲದೇ ಹೇಳುವವನು ಯೋಗಿ. ಆತನೇ ಸರ್ವಜ್ಞಮೂರ್ತಿ.
ಸರ್ವಜ್ಞಮೂರ್ತಿ ಅಸಾಮಾನ್ಯ ಸಂತ ಮಹಾಶಯ. ತಂದೆ-ತಾಯಿ, ಮನೆ-ಮಠ ಬಿಟ್ಟು, ಅಷ್ಟೇಕೆ ಮೈತುಂಬ ಬಟ್ಟೆಯನ್ನೂ ಧರಿಸದೆ ಕೇವಲ ಲಂಗೋಟಿ ಕಟ್ಟಿಕೊಂಡು ಊರೂರು ಸುತ್ತಿ ಸಮಾಜದ ಡೊಂಕನ್ನು, ಮನುಷ್ಯನ ವಿಕಾರಗಳನ್ನು ಜಾತಿ ಭೇದಗಳನ್ನು ಖಂಡಿಸಿದಾತ; ಯಾರಿಗೂ ಯಾವುದೇ ಮುಲಾಜಿಲ್ಲದೆ, ಚಪ್ಪಲಿ ಕಳಚಿ ನೇರ ಮುಖಕ್ಕೆ ಬಾರಿಸಿದಂತೆ ಭಾಸವಾಗುವ ಅವರ ತ್ರಿಪದಿಗಳು ಅತಿತೀಕ್ಷ್ಣವಾಗಿರುತ್ತವೆ.
ಇವರ ತದ್ವಿರುದ್ಧವಾಗಿ ಪುರಂದರ-ಕನಕದಾಸರು, ರಾಘವೇಂದ್ರ ಸ್ವಾಮಿಗಳು ಸಂಸಾರಿಗಳಾಗಿದ್ದರೂ ಸಂನ್ಯಾಸಿ ಗಳಾಗಿ ಅಲೌಕಿಕತೆಯ ಜೋಳಿಗೆ ತುಂಬಿಸಿಕೊಂಡು ಸಮಾಜಕ್ಕೆ ಬೆಳಕಾದರು. ಬಸವಣ್ಣನವರೂ ಸೇರಿ ಅನೇಕ ವಚನಕಾರರು ಇಂಥದೇ ದಾರಿಯನ್ನು ಹಿಡಿದು ಮಹಾಪುರುಷರಾದವರು. ಹಿಂದೂ ಧರ್ಮದಲ್ಲಿ ಕಾವಿಯನ್ನು ತೊಟ್ಟು ಸಂತನಾದವನ ಮೂಲಭೂತ ಸ್ಥಿತಿಯೇ ಇಂಥದ್ದು. ಎಲ್ಲವನ್ನೂ ಬಿಟ್ಟು ಸಂನ್ಯಾಸಿಯಾಗಬೇಕು, ಆದರೆ ಎಲ್ಲವನ್ನೂ ಗ್ರಹಿಸಿ ಸಮಾಜ ದೊಂದಿಗೆ ಸಂಬಂಧವಿರಿಸಿಕೊಂಡರೂ ಕೆಸರಿನ ಕಮಲದಂತೆ ಸಮಾಜಕ್ಕೆ ಕನ್ನಡಿಯಾಗಿರಲೇಬೇಕು ಸರ್ವಜ್ಞಮೂರ್ತಿಯಂತೆ.
ಅದು ಸಾಧ್ಯವಾಗದ ಕಾವಿಧಾರಿಗಳು ಹಿಮಾಲಯ, ಕಾಶಿ, ರಾಮೇಶ್ವರಕ್ಕೆ ಹೋಗಿ ಭಿಕ್ಷೆ ಬೇಡಿ ಅನಾಥ ಶವವಾಗುವುದು ಲೇಸು. ದುರ್ದೈವವೇನೆಂದರೆ ಪರಮ ಪವಿತ್ರವಾದ ಕಾವಿ ತೊಟ್ಟು ಸ್ವಾಮೀಜಿಗಳು ಎನಿಸಿಕೊಂಡ ಅಥವಾ ಸ್ವತಃ ಹಾಗಂದುಕೊಂಡ ಇಂದಿನ ಅನೇಕರು, ಇತ್ತ ಲೌಕಿಕವಾಗಿಯೂ ಇದ್ದು ಅತ್ತ ಅಲೌಕಿಕವಾಗಿಯೂ ಇರಲಾಗದೆ ಮಧ್ಯದಲ್ಲಿ ಬೇತಾಳದಂತೆ ಜಾತಿಯೆಂಬ ವಿಕ್ರಮನ ಬೆನ್ನಿಗೆ ತಗಲಿಕೊಂಡಿದ್ದಾರೆ.
ಜಗದ್ಗುರು ಶಂಕರಾಚಾರ್ಯರು, ಕನಕ-ಪುರಂದರರು, ಸರ್ವಜ್ಞಮೂರ್ತಿಗಳು, ವಚನಕಾರರ ಚರಿತ್ರೆ ಓದಿದರೆ ಅಲ್ಲಿ ಸಿಗುವುದು ಬರಿಯ ಜ್ಞಾನಭಂಡಾರ. ಆದರೆ ಇಂದಿನ ಸ್ವಾಮೀಜಿಗಳೆನಿಸಿಕೊಂಡವರ ಬೌದ್ಧಿಕ ಉತ್ಪಾದನೆಯನ್ನು ತಿಳಿಯಲು ಹೊರಟರೆ ಸಿಗುವುದು ಜಾತಿಗಳ ಬಂಡಾಯ, ಮಠಗಳ ವೈಭೋಗವೇ ಹೊರತು ಇಂಥವರಿಂದ ಒಂದು ಸಾಲಿನ ಸೂಕ್ತಿಯೂ ಸಿಗುವುದಿಲ್ಲ.
ಇವರಿಂದ ಸಮಾಜದಲ್ಲಿ ಜಾತೀಯತೆ ಹೆಚ್ಚಾಗಿ ಧರ್ಮಭಂಜನವಾಗುತ್ತಿದೆಯೇ ಹೊರತು ಹಿಂದೂಧರ್ಮದ ಉದ್ಧಾರ ವಾಗುತ್ತಿಲ್ಲ, ಹಿಂದೂಧರ್ಮದ ಮೌಲ್ಯಗಳು ಬೆಳಗುತ್ತಿಲ್ಲ; ಇಂಥವರಿಂದ ಹಿಂದೂಧರ್ಮಕ್ಕೆ ಕಳಂಕವಾಗುತ್ತಿದೆಯೇ ಹೊರತು ಕೆಲಸಗಳಾಗುತ್ತಿಲ್ಲ. ಇಂಥವರಿಗೆ ಧ್ಯಾನವೆಂಬುದು ರಾಜಕಾರಣ, ಪ್ರವಚನವೆಂಬುದು ಸ್ವಜಾತಿ, ಪರ್ಯಾಟನೆಯೆಂದರೆ ಎ.ಸಿ. ಕಾರು, ಯೋಗವೆಂಬುದು ವೈಭೋಗ. ದೇಶವನ್ನು ಕಾಯುವ ಯೋಧ ದೈಹಿಕವಾಗಿ ಮಾನಸಿಕವಾಗಿ ಕಠಿಣ ಪರೀಕ್ಷೆಗಳಿಗೆ ಒಳಗಾಗಿ ಗೆದ್ದು ಗಡಿಯಲ್ಲಿ ನಿಂತು ಹಿಮ, ಚಳಿ, ಮಳೆಗಾಳಿ, ಬಿಸಿಲೆನ್ನದೆ ಕರ್ತವ್ಯದಲ್ಲಿ ವ್ಯಸ್ತನಾಗಿರುತ್ತಾನೆ.
ಆ ಹೊಣೆಯಲ್ಲಿ ಎಡವಿದರೆ ಕೂಡಲೆ ಆತನ ಮೇಲೆ ಕ್ರಮ ಕೈಗೊಂಡು ದಂಡಿಸಲಾಗುತ್ತದೆ. ಸಂವಿಧಾನಾತ್ಮಕವಾಗಿ ಸಮಾಜವನ್ನು ಸಲಹಲು ಐಎಎಸ್ ಪರೀಕ್ಷೆಯಲ್ಲಿ ಗೆದ್ದುಬರಲು ವಿದ್ಯಾರ್ಥಿಗಳು ತಮ್ಮ ಬದುಕನ್ನೇ ಮೀಸಲಿಡುತ್ತಾರೆ. ಆದರೆ ಅದೇ ಸಮಾಜದೊಳಗೆ ಮಕಾಡೆ ಮಲಗಿದ್ದ ಅಯೋಗ್ಯನೊಬ್ಬ ದಿಢೀರ್ ಎದ್ದುಬಂದು ಕಾವಿ ತೊಟ್ಟು ಸಂನ್ಯಾಸಿ ಎನಿಸಿ
ಪಲ್ಲಕ್ಕಿ ಪಲ್ಲಂಗವೇರಿ ರಾಜಕಾರಣಿಗಳನ್ನು ಕಾಲಿಗೆ ಬೀಳಿಸಿಕೊಂಡು ಮೆರೆಯುತ್ತಾನೆ.
ಅಷ್ಟೇ ಆಗಿದ್ದರೆ ಇವರ ತೀಟೆಗಳು ಹಾಳುಬಿದ್ದು ಹೋಗಲಿ ಎನ್ನಬಹುದು. ಆದರೆ ಬೆಂಕಿಯಂಥ ಕಾವಿಯನ್ನು ತೊಟ್ಟು ಕಳಂಕ ತರುವುದಿದೆಯ ಅದು ನಿಜಕ್ಕೂ ಹಿಂದೂಧರ್ಮದ ದೌರ್ಭಾಗ್ಯ. ಇಂಥ ಅಯೋಗ್ಯ ಕಾವಿಧಾರಿಗಳನ್ನು ನೋಡಿ ಹೊರದೇಶದ ಜನ ‘ಇಂಥ ಜಾತಿಯ ಸ್ವಾಮೀಜಿ’ ಎಂದು ಪರಿಗಣಿಸುವುದಿಲ್ಲ; ಒಟ್ಟಾರೆ ‘ಹಿಂದೂಸಂತರು ಕಚ್ಚೆಹರುಕರು’ ಎಂದು
ಆಡಿಕೊಳ್ಳುವಂತಾಗಿ ದೇಶದ ಘನತೆಗೆ ಮಸಿ ಬಳಿಯುತ್ತಾರೆ.
ಇಂಥವರನ್ನೂ ಬೆಂಬಲಿಸುವುದಕ್ಕೆ ದೇಶದಲ್ಲಿಯೇ ‘ಟೂಲ್‌ಕಿಟ್’ ಹರಾಮಿಗಳಿದ್ದಾರೆ. ‘ಭಾರತ’ ಎಂದಕೂಡಲೇ ಜಗತ್ತಿಗೆ ಗೋಚರಿಸುವುದು ಇಲ್ಲಿನ ಕೇಸರಿ ತೊಟ್ಟ ಋಷಿಮುನಿಗಳ ಸಂತ ಪರಂಪರೆ, ಕಠೋರ ತಪಸ್ಸು ಆಚರಿಸುವ ಸಾಧಕರು
ಮತ್ತು ಅವರು ವಿಶ್ವಕ್ಕೆ ನೀಡಿರುವ ಬೌದ್ಧಿಕ, ತಾತ್ವಿಕ ಜ್ಞಾನ, ವೈಜ್ಞಾನಿಕ ಸಾಧನೆಗಳು. ಇಂಥ ಪರಂಪರೆಯನ್ನು ಪವಿತ್ರವಾಗಿ ಉಳಿಸಿಕೊಳ್ಳಬೇಕೆಂದರೆ ಕಾಲಕ್ಕೆ ತಕ್ಕಂತೆ ಸಮಾಜದಲ್ಲಿ ಕೆಲವೊಂದು ನೀತಿ ನಿಯಮಗಳನ್ನು ರೂಪಿಸಬೇಕಾದ ಅನಿವಾರ್ಯತೆಯಿದೆ.
ಒಬ್ಬಾತ ಸಂನ್ಯಾಸಿಯಾಗುತ್ತೇನೆಂದರೆ ಮೊದಲು ಕಾಮವನ್ನು ಗೆಲ್ಲುವ ಕಠೋರ ಪರೀಕ್ಷೆಗಳಿಗೆ ಅವನನ್ನು ಒಳಪಡಿಸಬೇಕು. ದೈಹಿಕವಾಗಿ ದಂಡಿಸಿ ಎಲ್ಲ ರೀತಿಯ ಸುಖಭೋಗಗಳಿಂದ ದೂರವಿರಿಸಿ ಆತನ ದೈಹಿಕ-ಮಾನಸಿಕ ಶಕ್ತಿಯನ್ನು ಪರೀಕ್ಷಿಸಿ ಪಕ್ವಗೊಳಿಸಬೇಕು. ಹಸಿವು, ನಿದ್ರೆ, ಕಣ್ಣಾಸೆ, ಮನದಾಸೆ, ದೈಹಿಕ ತುಮುಲ, ವಾಂಛೆಗಳನ್ನು ನಿಗ್ರಹಿಸುವಂಥ ಘೋರ ದಂಡನೆಗಳಿಗೆ ಒಳಪಡಿಸಬೇಕು. ಚಳಿ, ಮಳೆ, ರಣಬಿಸಿಲು, ಕಾಡುಮೇಡು, ಗುಡ್ಡಪರ್ವತಗಳಲ್ಲದೆ ಅಘೋರಿಗಳೊಂದಿಗೆ ಕೆಲ ತಿಂಗಳು ಇರಿಸಿ, ಸಮಾಜದಲ್ಲಿ ಕೆಲ ತಿಂಗಳು ಭಿಕ್ಷೆ ಬೇಡಿ ತಿನ್ನುವಂತೆ ಮಾಡಿ ಆತನ ತಾಕತ್ತನ್ನು ಸಮಾಜಕ್ಕೆ ತೋರಿಸಬೇಕು.
ಅದೆಂಥ ಸಂದರ್ಭ ಬಂದರೂ ತನ್ನ ಬಲಹೀನತೆ ಹೊರಗೆಡವದಂತೆ ಅರಿಷಡ್ವರ್ಗಗಳ ‘ಗಂಡ’ನಂತಾಗಿಸಬೇಕು. ಪರಮ ಬೌದ್ಧಿಕ ತಾತ್ವಿಕ eನವನ್ನುತಲೆಗೂಡಿಸಿಕೊಳ್ಳುವಂತೆ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆ ಯಾಗಲಿ ಅಥವಾ ಆಧುನಿಕ ದಾಸರು, ಶರಣರು ನೀಡಿರುವಂಥ ಕೃತಿ ಗಳನ್ನು ಅಧ್ಯಯನ ಮಾಡಿಸಿ ವೇದಾಂತಿ
ಯನ್ನಾಗಿಸಬೇಕು.
ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ಮನೋವೈದ್ಯರು, ನರ ನಾಡಿ ಶಾಸ್ತ್ರಜ್ಞರು, ಹಿರಿಯ ಸೇನಾಧಿಕಾರಿಗಳನ್ನೊಳಗೊಂಡ ಒಂದು ಆಯೋಗವನ್ನು ರಚಿಸಬೇಕು. ಸಮಾಜದ ಯಾವುದೇ ಮಠವಾಗಲಿ ಸಂನ್ಯಾಸತ್ವ
ಸ್ವೀಕರಿಸುತ್ತೇನೆಂದು ಅದ್ಯಾವನೇ ನಿರ್ಧರಿಸಿದರೂ, ಮೊದಲು ಈ ಆಯೋಗಕ್ಕೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡು ಇಂಥ ಅಗ್ನಿಪರೀಕ್ಷೆಗಳನ್ನುಎದುರಿಸಿ ಉತ್ತೀರ್ಣನಾಗಿ ತನ್ನ ಮಠಕ್ಕೆ ಪ್ರಮಾಣಪತ್ರ ಸಲ್ಲಿಸಿ ಸಂನ್ಯಾಸತ್ವ ಸ್ವೀಕರಿಸುವ ಒಂದು ಕಠಿಣ ನಿಯಮವನ್ನು ಜಾರಿಗೆ ತರಬೇಕಿದೆ.
ಅದರಲ್ಲೂ ಅವನಲ್ಲಿ ಕಾಮನಿಗ್ರಹ ಹೇಗಿರಬೇಕೆಂದರೆ ಆತನಲ್ಲಿರುವ ಕಾಮತೃಷೆಯನ್ನುಒಂದೇ ಏಟಿಗೆ ತುಂಡರಿಸಿ ‘ಜಟ್ಕಾ ಕಟ್’ ಮಾಡಿದಂತಿರಬೇಕು. ಈ ಎಲ್ಲ ಅಗ್ನಿಪರೀಕ್ಷೆಗಳಿಗೆ ಒಂದೈದು ವರ್ಷ ಸಮಯ ನಿಗದಿಪಡಿಸಿ ಪೂರ್ಣಗೊಳಿಸ ಬೇಕು. ಇದೆಲ್ಲವೂ ಸಾರ್ವಜನಿಕರಿಗೆ ತಿಳಿಯುವಂತೆ ಪಾರದರ್ಶಕವಾಗಿ ನಡೆಯಬೇಕು. ಇದೆಲ್ಲದರಲ್ಲಿ ಗೆದ್ದುಬಂದರೆ ಮಾತ್ರ
ಅಂಥವನಿಗೆ ಕಾವಿ ತೊಟ್ಟು ಸಂನ್ಯಾಸಿಯಾಗುವ ಅವಕಾಶ ನೀಡಬೇಕು.
ಆತನನ್ನು ಕಂಡ ಜನ ‘ಕಾಮದ ವಿಷಯದಲ್ಲಿ ಆತ ಗಂಡಸೇ ಅಲ್ಲ’ ಎಂದು ಅಚಲವಾಗಿ ನಂಬುವಂತಿರಬೇಕು. ಒಂದೊಮ್ಮೆ ನಂತರವೂ ಕಳಂಕ ತರುವಂಥ ಕೆಲಸ ಮಾಡಿದರೆ ಆ ಪೀಠದಿಂದ ಎಳೆದೊಯ್ದು ಹಿಮಾಲಯದ ತಪ್ಪಲಿಗೆ ಗಡಿಪಾರು ಮಾಡಬೇಕು. ಇಂಥ ‘ಸಂತಯಂತ್ರ’ವನ್ನುಸ್ಥಾಪಿಸಿ ನೋಡಿ, ಆಗ ಸಿಕ್ಕಸಿಕ್ಕ ಅಯೋಗ್ಯರೆ ತಾನು ಸ್ವಾಮೀಜಿ ಎಂದು
ಹೇಳಿಕೊಂಡು ಅಭಯಹಸ್ತವೆತ್ತಿ ಪೋಸುಕೊಡುವಂಥ ದರಿದ್ರಗಳು ಕಣ್ಮರೆಯಾಗುತ್ತವೆ. ಮುಖ್ಯವಾಗಿ ಇಂಥ ‘ಸಂತಯಂತ್ರ’ ದಿಂದ ದೇಶದ ಸಂತ ಪರಂಪರೆ ಮತ್ತೊಮ್ಮೆ ವಿಶ್ವಕ್ಕೆ ಮಾದರಿಯಾಗುತ್ತದೆ.
ಅದನ್ನು ಬಿಟ್ಟು ಲಕ್ಷಾಂತರ ಜನಗಳಿಂದ ಆರಿಸಿ ಬಂದ ಸಂಸದರಿಗೆ ‘ಚಡ್ಡಿಬಿಚ್ಚಿ ಹೊಡೆಯುತ್ತೇನೆ’ ಎನ್ನುವ ಬಾಯಿಹರುಕರೆಲ್ಲ ಕಾವಿಧಾರಿಗಳಾದರೆ ದೇಶದ ಸಂತ ಪರಂಪರೆಯ ಗತಿಯೇನು? ಇಷ್ಟಕ್ಕೂ ಸಂಸದರಿಗೆ ಹೊಡೆಯಲು ಇಂಥ ಸ್ವಾಮೀಜಿಯೇಕೆ
ತನ್ನಚಡ್ಡಿ ಬಿಚ್ಚಬೇಕು ಎಂಬುದೇ ತಲೆಕೆಟ್ಟ ಪ್ರಶ್ನೆ! ಪುಟಗೋಸಿ, ತನ್ನ ನುಡಿಗಳನ್ನೇ ಅಂಕೆಯಲ್ಲಿಟ್ಟುಕೊಳ್ಳಲಾಗದ ಕಾವಿಧಾರಿಗಳು ಉಳಿದದ್ದನ್ನು ಹೇಗೆ ನಿಗ್ರಹಿಸಿಕೊಳ್ಳುತ್ತಾರೆ? ಇನ್ನೂ ಕೆಲ ಸ್ವಾಮೀಜಿಗಳಿರುತ್ತಾರೆ, ಅವರ ಪಾಡಿಗೆ ಅವರು ಪವಿತ್ರವಾಗಿ ದ್ದರೂ ಕುತಂತ್ರಿಗಳು ಸಂಚುಮಾಡಿ ಅವರ ಕಚ್ಚೆ ಎಳೆದು ಪದೇಪದೆ ಹಿಂದೂಧರ್ಮದ ಸಂತ ಪರಂಪರೆಗೆ ಕಳಂಕ ಹಚ್ಚುತ್ತಾರೆ.
ಈಗ ನೋಡಿ, ಲೈಂಗಿಕ ಕಿರುಕುಳದ ಆರೋಪದ ಮೇಲೆ ಮುರುಘಾ ಮಠದ ಸ್ವಾಮೀಜಿಗಳು ಬಂಧಿತರಾಗಿದ್ದಾರೆ. ಆದಷ್ಟು ಬೇಗ ಅವರು ಅದರಿಂದ ಹೊರಬರಲಿ. ಆದರೆ ಇಂಥ ಸಂದರ್ಭವನ್ನೇ ಬಳಸಿಕೊಂಡ ಅವರ ವಿರೋಧಿಗಳು ಅವರ
ಕ್ರಮಗಳಾದ, ಮಠದ ವ್ಯಾಪ್ತಿಯಲ್ಲಿ ನಮಾಜ್‌ಗೆ ಜೀಸಸ್‌ಗೆ ಅವಕಾಶ ನೀಡಿ ಹಿಂದೂಧರ್ಮದ ಕೆಲ ನಂಬಿಕೆ ಆಚರಣೆಗಳನ್ನೇ ಮೌಢ್ಯವೆಂದದ್ದನ್ನು, ಗೋಮಾತೆಯನ್ನು ಗಣಪತಿಯನ್ನು ಅವಹೇಳನ ಮಾಡಿದ್ದನ್ನು, ಅಲ್ಲದೆ ಇನ್ನಿತರ ಹಿಂದೂವಿರೋಧಿ
ನಡೆಗಳ ಕುರಿತು ಈಗ ಸ್ವಾಮೀಜಿಯನ್ನು ಪ್ರಶ್ನಿಸುತ್ತಿದ್ದಾರೆ.
ಸ್ವಾಮೀಜಿಗಳಿಂದ ವಿಭೂತಿಪಟ್ಟೆ ಎಳೆಸಿಕೊಂಡು ಲಿಂಗಧಾರಣೆ ಮಾಡಿಸಿಕೊಂಡ ಕೌಲ್ ಬ್ರಾಹ್ಮಣ (?!) ರಾಹುಲ್ ಗಾಂಽ, ‘ಇಂಥವರಿಂದ ಇಂಥ ಕೆಲಸ ಮಾಡಿಸಿದಿರ’ ಎಂದು ಡಿ.ಕೆ. ಶಿವಕುಮಾರ್ ಅವರ ಮೇಲೆ ಮುನಿಸಿಕೊಂಡಿರುವುದಾಗಿ ವರದಿಯಾಗಿದೆ. ಇನ್ನು ಈ ಪ್ರಕರಣ ನಿರೀಕ್ಷೆಯಂತೆ ಬೇರೊಂದು ಆಯಾಮ ಪಡೆದುಕೊಂಡಿದ್ದು ಸ್ವಾಮೀಜಿ ಮೇಲಿನ ಆರೋಪಕ್ಕಿಂತ ಜಾತಿ ಮತ್ತು ಮಠದ ಪ್ರತಿಷ್ಠೆಯೇ ಭೂತಾಕಾರವಾಗಿದೆ.
ಹೀಗಾಗಿ ಎಲ್ಲ ಪಕ್ಷಗಳಲ್ಲೂ ಪ್ರಬಲ ಲಿಂಗಾಯತ ರಾಜಕಾರಣಿಗಳಿರುವುದರಿಂದ ಎಲ್ಲರಿಗೂ ಸ್ವಾಮೀಜಿಯನ್ನು ರಕ್ಷಿಸಿ ಕೊಳ್ಳಲೇಬೇಕಾದ ಅನಿವಾರ್ಯವಿದ್ದು ಯಥಾಪ್ರಕಾರ ‘ಬಿ ರಿಪೋರ್ಟ್’ ಪಕ್ಕಾ ಎಂದು ಜನಸಾಮಾನ್ಯರು ಮಾತನಾಡಿ ಕೊಳ್ಳುತ್ತಿದ್ದಾರೆ. ಲೋಕಸಭಾ ಸದಸ್ಯ ಲೆಹರ್ ಸಿಂಗ್ ಈ ಪ್ರಕರಣವನ್ನು ಬೇರೆ ರಾಜ್ಯದ ನ್ಯಾಯಾಂಗದಲ್ಲಿ ತನಿಖೆ
ನಡೆಸಬೇಕೆಂದು ಸಲಹೆ ನೀಡಿದ್ದಾರೆ. ಮುರುಘಾ ಮಠದ ಸ್ವಾಮೀಜಿಗಳು ನಿಜಕ್ಕೂ ಅದೃಷ್ಟವಂತರು. ಅವರ ಮೇಲೆ ಆರೋಪ ಎದುರಾದ ಕೂಡಲೆ ಎಲ್ಲ ಸ್ವಾಮೀಜಿಗಳೂ ಒಂದಾಗಿ ನಿಂತು ಅವರನ್ನು ಬೆಂಬಲಿಸುತ್ತಿದ್ದಾರೆ.
ಆದರೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಎಂಥದ್ದೇ ಆರೋಪ ಮತ್ತು ಕುತಂತ್ರಕ್ಕೆ ಒಳಗಾದಾಗ ಬೇರೆ ಜಾತಿ ಸ್ವಾಮೀಜಿಗಳಿರಲಿ ಸಾಕ್ಷಾತ್ ಬ್ರಾಹ್ಮಣ ಮಠದ ಇತರೆ ಸ್ವಾಮೀಜಿಗಳೇ ಕಿಂಚಿತ್ತೂ ಬೆಂಬಲಿಸದೆ ಸ್ವಾಮೀಜಿಗೆ ಜೈಲುಶಿಕ್ಷೆಯಾಗಲೆಂದೇ ‘ರಣಹೋಮ’ ಮಾಡಿದ್ದೇ ಹೆಚ್ಚು.
ಕೊನೆಯದಾಗಿ, ಕಾವಿ ತೊಟ್ಟು ಸಂತನಾಗಿ ಬದುಕಿದರೆ ಸರ್ವಜ್ಞನಂತೆ ಸರ್ವಜ್ಞ ಹೇಳಿದಂತೆ ಬದುಕಬೇಕು-
ಹೇಲು ಮೈಮೆತ್ತಿದ| ಬಾಲನಂತಿರಬೇಕು |
ಬಾಲೆಯರ ಜಾಲಕೊಳಬೀಳದ eನಿ |
ಶೂಲಿಯಂತಕ್ಕು ಸರ್ವಜ್ಞ||
ಬಿಡಿಸಿ ಹೇಳಬೇಕಿಲ್ಲ, ಅಲ್ಲವೇ?