Saturday, 23rd November 2024

ಶಿರೋಮಣಿ ಅಕಾಲಿದಳದಿಂದ ಒಂದು ಕುಟುಂಬ, ಒಂದು ಟಿಕೆಟ್ ನೀತಿ

ಚಂಡೀಗಢ: ಪಂಜಾಬ್ ನ ರಾಜಕೀಯ ಪಕ್ಷ ಶಿರೋಮಣಿ ಅಕಾಲಿದಳವು ‘ಒಂದು ಕುಟುಂಬ, ಒಂದು ಟಿಕೆಟ್’ ತತ್ವವನ್ನು ಅನುಸರಿಸಲು ಶನಿವಾರ ನಿರ್ಧರಿಸಿದೆ.

ಅಕಾಲಿದಳ ಸಂಘಟನೆಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗುತ್ತಿದ್ದು, ಒಂದು ಕುಟುಂಬ-ಒಂದು ಟಿಕೆಟ್ ನೀತಿಯನ್ನು ತರಲಾಗುತ್ತಿದೆ. ಯುವಕರು, ಮಹಿಳೆಯರಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ ಎಂದು ಅಧ್ಯಕ್ಷ ಎಸ್.ಎಸ್.ಬಾದಲ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಜಿಲ್ಲಾ ಅಧ್ಯಕ್ಷರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೇ.50ರಷ್ಟು ಸ್ಥಾನ ಗಳನ್ನು 50 ವರ್ಷದೊಳಗಿನ ಪಕ್ಷದ ಕಾರ್ಯಕರ್ತ ರಿಗೆ ಮೀಸಲಿಡಲಾಗುವುದು ಎಂದು  ಹೇಳಿದ್ದಾರೆ.

ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡಿರುವ ಅಕಾಲಿದಳ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ ಕೇವಲ 3 ರಲ್ಲಿ ಮಾತ್ರ ಗೆಲುವು ಸಾಧಿಸಿ ಹೀನಾಯ ಸೋಲು ಅನುಭವಿಸಿತ್ತು.