Friday, 29th November 2024

ವಿಶ್ವವಾಣಿ ಕ್ಲಬ್‌ಹೌಸ್‌ ಪ್ರಥಮ ವಾರ್ಷಿಕ ಸಂಭ್ರಮದಲ್ಲಿ ಮಿಂದೆದ್ದ ಶ್ರೋತೃ ವೃಂದ

ಬೆಂಗಳೂರು: ಸಂಜೆ 7 ಗಂಟೆಯಾಗುತ್ತಿದ್ದಂತೆ ಯಾವುದಾದರೊಂದು ವಿಷಯದ ಕುರಿತು ಅರಿವಿನ ಉಪನ್ಯಾಸ ಇಲ್ಲವೇ ಗಾನಸುಧೆ ಶುರುವಾಗುತ್ತದೆ. ಅದೂ ಭಾನುವಾರ ಹೊರತುಪಡಿಸಿ ವಾರದ ಉಳಿದ ಆರು ದಿನ ನಿಗದಿತ ಸಮಯದಲ್ಲಿ ನಿರಂತರ ವಾಗಿ ಒಂದು ವರ್ಷ ಕಾಲ ನಡೆಯುತ್ತದೆ. ಜತೆಗೆ ಇನ್ನಷ್ಟು ಸಮಯ ನಿರಂತರವಾಗಿ ಮುಂದುವರಿಯುತ್ತದೆ ಎಂಬ ಭರವಸೆ ಯನ್ನೂ ಮೂಡಿಸುತ್ತದೆ.

ಹೌದು, ಕ್ಲಬ್‌ಹೌಸ್‌ನಲ್ಲಿ ದಾಖಲೆ ಮೂಡಿಸಿದ ವಿಶ್ವವಾಣಿ ಕ್ಲಬ್‌ಹೌಸ್‌ಗೆ ಸೋಮವಾರ ವರ್ಷದ ಸಂಭ್ರಮ. ಈ ಕ್ಲಬ್‌ಹೌಸ್ ಯಶಸ್ಸಿಗೆ ಕಾರಣರಾದ ಶ್ರೋತೃಗಳು ಮತ್ತು ಗಣ್ಯರೊಂದಿಗೆ ಈ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುವ ಮೂಲಕ ಮತ್ತಷ್ಟು
ಹುರುಪಿನೊಂದಿಗೆ, ಹೊಸ ವಿಷಯಗಳೊಂದಿಗೆ ಎರಡನೇ ವರ್ಷದಲ್ಲಿ ಮುಂದುವರಿಯುವ ಘೋಷಣೆ ಮಾಡಲಾಯಿತು.

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಸಾರಥ್ಯದಲ್ಲಿ ಪತ್ರಿಕೆಯ ಸಂಪಾ ದಕೀಯ ಸಲಹೆಗಾರ ನಂಜನಗೂಡು ಮೋಹನ್ ಹಾಗೂ ನಿರೂಪಕಿ ರೂಪಾ ನಾಗರಾಜ್ ಅವರ ನೇತೃತ್ವದಲ್ಲಿ ಸತತ ಒಂದು ವರ್ಷದಿಂದ ಭಾನುವಾರವನ್ನು ಹೊರತುಪಡಿಸಿ ವಾರ ಉಳಿದ ೬ ದಿನವೂ ನಡೆಯುವ ವಿಶ್ವವಾಣಿ ಕ್ಲಬ್‌ಹೌಸ್ ತನ್ನ ವರ್ಷದ ಸಂಭ್ರಮದ ಜತೆಗೆ ನಿರೂಪಕಿ ರೂಪಾ ಗುರುರಾಜ್ ಅವರ ಒಂದೊಳ್ಳೆ ಮಾತು ಕೃತಿಯನ್ನು ಬಿಡುಗಡೆ ಮಾಡುವ ಮೂಲಕ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು.

ವಿಶ್ವವಾಣಿಯ ಶ್ರೋತೃಗಳು ಸಂಭ್ರಮದಲ್ಲಿ ಮಿಂದೆದ್ದರು. ಗಣ್ಯರೊಂದಿಗೆ ಸಂವಾದ ನಡೆಸಿದರು. ಸಮಯಕ್ಕೆ ಸರಿಯಾಗಿ ಸಂಜೆ 7 ಗಂಟೆಗೆ ತಪ್ಪದೆ ಆರಂಭವಾಗುತ್ತಿದ್ದ ವಿಶ್ವವಾಣಿ ಕ್ಲಬ್‌ಹೌಸ್‌ನಿಂದಾಗಿ ಆ ವೇಳೆ ಕ್ಲಬ್‌ಹೌಸ್ ಆರಂಭಿಸುತ್ತಿದ್ದವರು ಸಮಯ
ಬದಲಾವಣೆ ಮಾಡಿಕೊಂಡ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಹಾಗೂ ಲೇಖಕ ಜೋಗಿ ಮಾತನಾಡಿ, ವಿಶ್ವೇಶ್ವರ ಭಟ್ಟರು ಕೊಳ್ಳುವಷ್ಟು ಪುಸ್ತಕಗಳನ್ನು ಬೇರಾರು ಕೊಂಡದ್ದು ನಾನು ಕಂಡಿಲ್ಲ.
ಅಷ್ಟು ಮಾತ್ರವಲ್ಲ, ಅವರು ಪರಿಚಯಿಸಿದಷ್ಟು ಪುಸ್ತಕಗಳನ್ನು ಬೇರಾರೂ ಪರಿಚಯಿಸಿಲ್ಲ.

ಭಟ್ಟರ ಓದು ಮತ್ತು ಬರೆಯವ ಪಂಗಡಕ್ಕೆ ಈಗ ರೂಪಾಗುರುರಾಜ್ ಕೂಡ ಸೇರಿಕೊಂಡಿದ್ದಾರೆ ಎಂದು ಹೇಳಿದರು. ಪ್ರತಿನಿತ್ಯ ಬರೆಯುವುದು ಕಷ್ಟದ ಕೆಲಸ. ಗೃಹಿಣಿಯಾಗಿ ಮನೆ ಕೆಲಸ, ಕ್ಲಬ್‌ಹೌಸ್‌ನ ಸಿದ್ಧತೆ, ನಿರೂಪಣೆಗಳ ನಡುವೆಯೂ ರೂಪಾ ಗುರು ರಾಜ್ ಬರೆದಿರುವುದು ಮೆಚ್ಚುವ ವಿಚಾರ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುತ್ತಿದ್ದ ಪಂಚತಂತ್ರ ಕಥೆಯಂತೆ, ಒಂದೊಳ್ಳೆ ಮಾತು ಪುಸ್ತಕ ಇಂದಿನ ಕಾಲದ ಮಕ್ಕಳನ್ನು ಬುದ್ಧಿವಂತರನಾಗಿಸುತ್ತದೆ. ಇಂದಿನ ಕಾಲದ ಓದುಗರ ಮನಸ್ಥಿತಿಯನ್ನು ರೂಪಾ ತಿಳಿದಿದ್ದಾರೆ. ಇವರ ಪುಸ್ತಕದಲ್ಲಿ ಇರುವ ಕಥೆಗಳನ್ನು ನಾವು ಕೇಳಿರಬಹುದು. ಆದರೆ, ಅದನ್ನು ಜೀವನಕ್ಕೆ ಸಂಬಂಧಿಸಿ ದಂತೆ ನಿರೂಪಿಸುವ ಕೆಲಸವನ್ನು ಅಂಕಣದ ಮೂಲಕ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ರೂಪಾ ಗುರುರಾಜ್ ಮಾತನಾಡಿ, ವಿಶ್ವೇಶ್ವರ ಭಟ್ಟರ ಗರಡಿಯಲ್ಲಿ ಇನ್ನೂ ಪಳಗುತ್ತಿದ್ದೇನೆ. ನೀನು ಒಬ್ಬ ಅಂಕಣಗಾರ್ತಿ ಯಾಗಬಹುದು ಎಂದು ಗುರುತಿಸಿ ಪ್ರೋತ್ಸಾಹಿಸಿದವರು ಅವರು. ಕ್ರಿಯಾತ್ಮಕ ಜೀವನ ವಿಶ್ವೇಶ್ವರ ಭಟ್ ಅವರದ್ದು. ಹೀಗಾಗಿ
ಅವರಿಂದ ಕಲಿಕೆಯಲ್ಲಿ ನನ್ನನ್ನು ನಾನು ಮತ್ತೆ ತೊಡಗಿಸಿಕೊಳ್ಳುವಂತಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಪದೇ ಪದೆ ಗುರು ಮತ್ತು ದಿಕ್ಕು ತೋರಿಸುವವರು ಸಿಗುವುದಿಲ್ಲ. ಆದರೆ, ನನ್ನ ಜೀವನದುದ್ದಕ್ಕೂ ಸಿಕ್ಕಿರುವುದು ನನ್ನ ಪುಣ್ಯ. ಇವರೆಲ್ಲರ ನಿರಂತರ ಪ್ರೋತ್ಸಾಹ, ಬೆಂಬಲದಿಂದ ಅಂಕಣ, ಪುಸ್ತಕ ಬರೆಯಲು ಸಾಧ್ಯವಾಗಿದೆ ಎಂದರು.

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಉದ್ಯಮಿ ಹಾಗೂ ಅಂಕಣಕಾರ ಎಸ್.ಷಡಕ್ಷರಿ, ಉದ್ಯಮಿ ವೀರೇಂದ್ರ ಷಡಕ್ಷರಿ, ನೇತೃತಜ್ಞ ಡಾ.ಭುಜಂಗ ಶೆಟ್ಟಿ, ಹಿರಿಯ ವಕೀಲ ಚಂದ್ರಮೌಳಿ, ವೈದ್ಯ ಬಿ.ಟಿ.ರುದ್ರೇಶ್, ಸಾಹಿತಿ ಕೆ.ಪಿ.ಪುತ್ತೂರಾಯ, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಸೇರಿದಂತೆ ನೂರಾರು ಶ್ರೋತೃಗಳು ಭಾಗವಹಿಸಿದ್ದರು.

***

ಬರವಣಿಗೆಗೆ ಪ್ರೋತ್ಸಾಹ ನೀಡುವವರು ವಿಶ್ವೇಶ್ವರ ಭಟ್. ಉದ್ಯಮಿಯಾಗಿದ್ದ ನನ್ನನ್ನು ಅಂಕಣಕಾರರಾಗಿ ಬದಲಾಯಿಸಿದರು. ನನ್ನಿಂದ ಅಂಕಣ ಬರೆಸುವ ಆರಂಭದಲ್ಲಿ, ಹತ್ತು ಅಂಕಣ ಬರೆದುಕೊಡಿ ಎಂದಿದ್ದರು. ಹಾಗೆ ಬರೆಯಲು ಆರಂಭಿಸಿದ ನನ್ನ
ಅಂಕಣಗಳು ಹತ್ತು ಹತ್ತೇ ಹೆಚ್ಚಾಗಿ ೩೦೦೦ ಅಂಕಣಗಳಾಗಿದೆ. ಹೀಗೆ 15 ವರ್ಷ ಬರೆಸಿದ್ದಾರೆ. ಒಮ್ಮೆಯೂ ಹೀಗೆಯೇ ಬರೆಯಬೇಕು ಎಂದು ಹೇಳಿಲ್ಲ. ರೂಪಾಗುರು ರಾಜ್ ಬರೆದಿರುವ ಒಂದೊಳ್ಳೆ ಮಾತು ಪುಸ್ತಕ ಉತ್ತಮವಾಗಿದೆ.
– ಎಸ್.ಷಡಕ್ಷರಿ ಉದ್ಯಮಿ, ಅಂಕಣಕಾರ
ಪ್ರತಿದಿನ ಅಂಕಣ ಬರೆಯುವುದಕ್ಕೆ ಫಿಕ್ಸ್ ಆಗುವುದು ಕಷ್ಟ.

ಓದುಗರಿಗೆ ನೀರೀಕ್ಷೆ ಪ್ರತಿ ದಿನ ಇರುತ್ತದೆ. ಹೀಗಾಗಿ ಯಾರೂ ಆ ಕೆಲಸಕ್ಕೆ ಮುಂದೆ ಬರುವುದಿಲ್ಲ. ಹಾಗೆ ಮುಂದೆ ಬಂದವರು ಎಸ್.
ಷಡಕ್ಷರಿ ಮತ್ತು ರೂಪಾ ಗುರುರಾಜ್. ಎಸ್.ಷಡಕ್ಷರಿ ಅವರ ಕ್ಷಣ ಹೊತ್ತು ಆಣಿ ಮುತ್ತು ಹೃದಯಕ್ಕೆ ಹತ್ತಿರವಾದ ಪುಸ್ತಕ. ೪ ಲಕ್ಷ ಪ್ರತಿಗಳು ಮಾರಾಟವಾಗಿವೆ. ಯಾರಾದರು ಬರೆಯುವ ಮೂಲಕ ಕೋಟಿ ಸಂಪಾದನೆ ಮಾಡಿದ್ದಾರೆ ಎಂದರೆ ಅದು ಷಡಕ್ಷರಿ ಯವರು. ಅವರಂತೆ ಬರವಣಿಗೆ ಕಂಡದ್ದು, ಆ ಜಾಗಕ್ಕೆ ಸಿಕ್ಕಿದವರು ರೂಪಾ ಗುರುರಾಜ್. 2 ವರ್ಷದಿಂದ ಅಂಕಣ ಬರೆದು ಕೊಂಡು ಬರುತ್ತಿದ್ದಾರೆ. ಒಳ್ಳೆಯ ಅಂಕಣಗಾರ್ತಿ. ಅವರ ಮೊದಲ ಪುಸ್ತಕ ಒಂದೊಳ್ಳೆ ಮಾತು ಹೊರತರಲಾಗಿದೆ. ಆ ಮೂಲಕ ಮೊದಲ ಪರೀಕ್ಷೆಯಲ್ಲಿ ಅವರು ತೇರ್ಗಡೆಯಾಗಿದ್ದಾರೆ. ಹೀಗೆಯೇ ಬರವಣಿಗೆ ಮುಂದುವರಿಸಲಿ. ಓದುಗರ ನಿರೀಕ್ಷೆ ತಲುಪು ವಂತಹ ಸತತ ಪರಿಶ್ರಮವನ್ನು ಆವರು ಮಾಡಿದ್ದಾರೆ. ಮುಂದಕ್ಕೂ ಮಾಡುತ್ತಾರೆ ಎಂದು ಭಾವಿಸಿದ್ದೇನೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ

ಜ್ಞಾನದಲ್ಲಿ ಹಣ್ಣು ಮುದುಕರು ವಿಶ್ವೇಶ್ವರ ಭಟ್. ಸದಾ ಪಾಸಿಟಿವ್ ಬಿಹೇವಿಯರ್ ಹೊಂದಿರುವ ವ್ಯಕ್ತಿ. ವಿಶ್ವವಾಣಿ ಪತ್ರಿಕೆ ಜತೆಗೆ ವಿಶ್ವವಾಣಿ ಕ್ಲಬ್ ಹೌಸ್ ಪ್ರಾರಂಭಿಸುವ ಮೂಲಕ ದೊಡ್ಡ ಆಂದೋಲನವನ್ನೇ ಪ್ರಾರಂಭಿಸಿದ್ದಾರೆ.

– ಡಾ.ಕೆ.ಪಿ.ಪುತ್ತೂರಾಯ ಸಾಹಿತಿ

ಇಲ್ಲಿಯವರೆಗೆ ವಿಶ್ವವಾಣಿ ಕ್ಲಬ್‌ಹೌಸ್ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ನೀಡಿದೆ. ವಿಶ್ವೇಶ್ವರ
ಭಟ್ ಮತ್ತು ಶ್ರೋತೃಗಳಿಂದಾಗಿ ಸತತವಾಗಿ ಒಂದು ವರ್ಷ ನಿರಂತರವಾಗಿ ನಡೆದು ವರ್ಷ ಪೂರೈಸಿದೆ. ಇನ್ನು ಮುಂದಕ್ಕೂ ನಿಮ್ಮೆಲ್ಲರ ಸಹಕಾರದಿಂದ ಸುದೀರ್ಘವಾಗಿ ನಡೆಯುತ್ತದೆ.

– ನಂಜನಗೂಡು ಮೋಹನ್ ಸಂಪಾದಕೀಯ ಸಲಹೆಗಾರ, ವಿಶ್ವವಾಣಿ

ಬೆಂಗಳೂರು ಮಾತ್ರವಲ್ಲದೆ, ವಿವಿಧ ಸ್ಥಳಗಳಿಂದ ಬಂದಿದ್ದ ವಿಶ್ವವಾಣಿ ಕ್ಲಬ್‌ಹೌಸ್‌ನ ಶ್ರೋತೃಗಳು ಆಸಕ್ತಿ ಮತ್ತು ಪ್ರೀತಿಯಿಂದ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಲಬ್‌ಹೌಸ್ ಶ್ರೋತೃಗಳು ಗಣ್ಯರೊಂದಿಗೆ ಸಂವಾದ ನಡೆಸಿದರಲ್ಲದೆ, ವಿಶ್ವವಾಣಿ
ಕ್ಲಬ್‌ಹೌಸ್‌ನ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ, ತಾವೇಕೆ ಇದರಲ್ಲಿ ತಪ್ಪದೆ ಪಾಲ್ಗೊಳ್ಳುತ್ತೇವೆ ಎಂಬುದನ್ನು ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಲಗು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ವಿಶ್ವವಾಣಿ ಕ್ಲಬ್‌ಹೌಸ್‌ನಿಂದಾಗಿ ಕ್ಲಬ್ ಹೌಸ್‌ನ ಮನೋಭಾವನೆಯನ್ನೇ ಬದಲಾಯಿಸಿದ್ದಾರೆ ವಿಶ್ವೇಶ್ವರ ಭಟ್. ಇದರಿಂದ ಒಳ್ಳೆಯ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆ. ಇದೊಂದು ಸರ್ವಜನಾಂಗದ ಶಾಂತಿಯ ತೋಟ.
– ಚಂದ್ರಮೌಳಿ ಹಿರಿಯ ವಕೀಲ

ಪ್ರತಿದಿನ ಅಂಕಣ ಬರೆಯುವುದಕ್ಕೆ ಫಿಕ್ಸ್ ಆಗುವುದು ಕಷ್ಟ. ಓದುಗರಿಗೆ ನೀರೀಕ್ಷೆ ಪ್ರತಿ ದಿನ ಇರುತ್ತದೆ. ಹೀಗಾಗಿ ಯಾರೂ ಆ
ಕೆಲಸಕ್ಕೆ ಮುಂದೆ ಬರುವುದಿಲ್ಲ. ಹಾಗೆ ಮುಂದೆ ಬಂದವರು ಎಸ್.ಷಡಕ್ಷರಿ ಮತ್ತು ರೂಪಾ ಗುರುರಾಜ್. ಎಸ್.ಷಡಕ್ಷರಿ ಅವರ ಕ್ಷಣಹೊತ್ತು ಆಣಿ ಮುತ್ತು ಹೃದಯಕ್ಕೆ ಹತ್ತಿರವಾದ ಪುಸ್ತಕ. 4 ಲಕ್ಷ ಪ್ರತಿಗಳು ಮಾರಾಟವಾಗಿವೆ.

ಯಾರಾದರು ಬರೆಯುವ ಮೂಲಕ ಕೋಟಿ ಸಂಪಾದನೆ ಮಾಡಿದ್ದಾರೆ ಎಂದರೆ ಅದು ಷಡಕ್ಷರಿಯವರು. ಅವರಂತೆ ಬರವಣಿಗೆ
ಕಂಡದ್ದು, ಆ ಜಾಗಕ್ಕೆ ಸಿಕ್ಕಿದವರು ರೂಪಾ ಗುರುರಾಜ್. 2 ವರ್ಷದಿಂದ ಅಂಕಣ ಬರೆದುಕೊಂಡು ಬರುತ್ತಿದ್ದಾರೆ. ಒಳ್ಳೆಯ ಅಂಕಣಗಾರ್ತಿ. ಅವರ ಮೊದಲ ಪುಸ್ತಕ ಒಂದೊಳ್ಳೆ ಮಾತು ಹೊರತರಲಾಗಿದೆ. ಆ ಮೂಲಕ ಮೊದಲ ಪರೀಕ್ಷೆಯಲ್ಲಿ ಅವರು ತೇರ್ಗಡೆಯಾಗಿದ್ದಾರೆ. ಹೀಗೆಯೇ ಬರವಣಿಗೆ ಮುಂದುವರಿಸಲಿ. ಓದುಗರ ನಿರೀಕ್ಷೆ ತಲುಪುವಂತಹ ಸತತ ಪರಿಶ್ರಮವನ್ನು ಆವರು ಮಾಡಿದ್ದಾರೆ. ಮುಂದಕ್ಕೂ ಮಾಡುತ್ತಾರೆ ಎಂದು ಭಾವಿಸಿದ್ದೇನೆ.

– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ

ವಿಶ್ವವಾಣಿ ಕ್ಲಬ್‌ಹೌಸ್ ವಾರ್ಷಿಕೋತ್ಸವ ವಿದ್ಯಾರ್ಥಿಗಳ ರೀ ಯೂನಿಯನ್ ಅದಂತಿದೆ. ವಿಶ್ವವಾಣಿ ಕ್ಲಬ್‌ಹೌಸ್ ಪ್ರಾರಂಭವಾಗಿ ಅದಕ್ಕೆ ನಾನು ಸೇರ್ಪಡೆಯಾದಾಗಿನಿಂದ ನನ್ನ ಸಂಜೆಯ ದಿನಚರಿಯೇ ಬದಲಾಗಿದೆ. ವಿಶ್ವೇಶ್ವರ ಭಟ್ಟರು ಕ್ಲಬ್‌ಹೌಸ್ ಕಾರ್ಯ ಕ್ರಮಗಳನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಕಾರ್ಯಕ್ರಮಗಳನ್ನು ರೂಪಿಸುವ ಹಿಂದಿನ ಪರಿಶ್ರಮ ತಿಳಿಯುತ್ತದೆ. ವಿಶ್ವೇಶ್ವರ ಭಟ್ ಅವರ ಗರಡಿಯಲ್ಲಿ ಅನೇಕ ವ್ಯಕ್ತಿಗಳು ಪಳಗಿ ಉತ್ತಮ ಸ್ಥಾನ ಮಾನ ಪಡೆದಿದ್ದಾರೆ. ಈಗ ಅದೇ ಹಾದಿಯಲ್ಲಿ ರೂಪಾ ಗುರುರಾಜ್ ಕೂಡ ಬಂದಿದ್ದಾರೆ. ನಾನು ಬದಲಾದರೆ ಎಲ್ಲಾ ಬದಲಾಗುತ್ತದೆ ಎಂಬುದು ರೂಪಾ ಅವರು ರಚಿಸಿರುವ ಒಂದೊಳ್ಳೆ ಮಾತು ಪುಸ್ತತಿಳಿಸುತ್ತದೆ. ಅದನ್ನು ಓದಿದರೆ ಮಾತ್ರ ಸಾಲದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
– ಡಾ.ಭುಜಂಗ ಶೆಟ್ಟಿ ಖ್ಯಾತ ನೇತ್ರತಜ್ಞ

ಜ್ಞಾನದಲ್ಲಿ ಹಣ್ಣು ಮುದುಕರು ವಿಶ್ವೇಶ್ವರ ಭಟ್. ಸದಾ ಪಾಸಿಟಿವ್ ಬಿಹೇವಿಯರ್ ಹೊಂದಿರುವ ವ್ಯಕ್ತಿ. ವಿಶ್ವವಾಣಿ ಪತ್ರಿಕೆ ಜತೆಗೆ ವಿಶ್ವವಾಣಿ ಕ್ಲಬ್ ಹೌಸ್ ಪ್ರಾರಂಭಿಸುವ ಮೂಲಕ ದೊಡ್ಡ ಆಂದೋಲನವನ್ನೇ ಪ್ರಾರಂಭಿಸಿದ್ದಾರೆ.

– ಡಾ.ಕೆ.ಪಿ.ಪುತ್ತೂರಾಯ ಸಾಹಿತಿ

***

ಬೆಂಗಳೂರು ಮಾತ್ರವಲ್ಲದೆ, ವಿವಿಧ ಸ್ಥಳಗಳಿಂದ ಬಂದಿದ್ದ ವಿಶ್ವವಾಣಿ ಕ್ಲಬ್‌ಹೌಸ್‌ನ ಶ್ರೋತೃಗಳು ಆಸಕ್ತಿ ಮತ್ತು ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಲಬ್‌ಹೌಸ್ ಶ್ರೋತೃಗಳು ಗಣ್ಯರೊಂದಿಗೆ ಸಂವಾದ ನಡೆಸಿದರಲ್ಲದೆ, ವಿಶ್ವವಾಣಿ
ಕ್ಲಬ್‌ಹೌಸ್‌ನ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ, ತಾವೇಕೆ ಇದರಲ್ಲಿ ತಪ್ಪದೆ ಪಾಲ್ಗೊಳ್ಳುತ್ತೇವೆ ಎಂಬುದನ್ನು ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಲಗು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.