Friday, 22nd November 2024

ಸುದೀರ್ಘ ಅವಧಿಗೆ ರೈಲ್ವೆ ಭೂಮಿ ಗುತ್ತಿಗೆ ನೀಡುವ ನೀತಿಗೆ ಅನುಮೋದನೆ

ವದೆಹಲಿ: ಗತಿ ಶಕ್ತಿ ಕಾರ್ಯಕ್ರಮಕ್ಕಾಗಿ ರೈಲ್ವೆ ಭೂಮಿಯನ್ನು ಸುದೀರ್ಘ ಅವಧಿಗೆ ಗುತ್ತಿಗೆ ನೀಡುವ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬುಧ ವಾರ ಒಪ್ಪಿಗೆ ದೊರೆತಿದೆ.

ದೇಶದ ವಿವಿಧೆಡೆ 300 ‘ಕಾರ್ಗೊ ಟರ್ಮಿನಲ್‌’ಗಳನ್ನು ನಿರ್ಮಿಸುವ ಮೂಲಕ 1.25 ಲಕ್ಷ ಉದ್ಯೋಗ ಸೃಷ್ಟಿಸಲು ಇದರಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘ಸದ್ಯ 5 ವರ್ಷದವರೆಗೆ ಭೂಮಿ ಗುತ್ತಿಗೆ ನೀಡುವ ವ್ಯವಸ್ಥೆ ಇತ್ತು. ಹೊಸ ನೀತಿಯ ಪ್ರಕಾರ ರೈಲ್ವೆ ಭೂಮಿಯನ್ನು 35 ವರ್ಷ ದವರೆಗೂ ಗುತ್ತಿಗೆ ಪಡೆಯಬಹುದಾಗಿದೆ’ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

‘ಮುಂದಿನ ಐದು ವರ್ಷಗಳಲ್ಲಿ 300 ಕಾರ್ಗೊ ಟರ್ಮಿನಲ್‌ಗಳನ್ನು ನಿರ್ಮಿಸುವ ಹಾಗೂ ಅಭಿವೃದ್ಧಿಪಡಿಸುವ ಗುರಿ ಹೊಂದ ಲಾಗಿದೆ. ಈ ನೀತಿಯಿಂದ ರೈಲ್ವೆ ಇಲಾಖೆಗೂ ಹೆಚ್ಚು ಆದಾಯ ದೊರೆಯಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಹಾಗೂ ಅನುರಾಗ್‌ ಠಾಕೂರ್‌, ‘ಈ ಯೋಜನೆ ಯಡಿ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳನ್ನು ಬಲಪಡಿಸಲಾಗುತ್ತದೆ. ಐದು ವರ್ಷಗಳಲ್ಲಿ ನಿಗದಿತ ಸಂಖ್ಯೆಯ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಇದಕ್ಕೆ ₹27,360 ಕೋಟಿ ವೆಚ್ಚವಾಗಲಿದೆ. ಈ ಪೈಕಿ ಕೇಂದ್ರ ಸರ್ಕಾರವು ₹18,128 ಕೋಟಿ ಭರಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.