Monday, 16th September 2024

ಗೋವಾದ ಅಂಜುನಾದಲ್ಲಿರುವ ವಿವಾದಿತ ರೆಸ್ಟೋರೆಂಟ್ ನೆಲಸಮ

ಣಜಿ: ಹರ್ಯಾಣ ಭಾರತೀಯ ಜನತಾ ಪಕ್ಷದ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಮೊದಲು ಪಾರ್ಟಿ ಮಾಡಿದ್ದ ಉತ್ತರ ಗೋವಾದ ಅಂಜುನಾದಲ್ಲಿರುವ ವಿವಾದಿತ ರೆಸ್ಟೋರೆಂಟ್ ಅನ್ನು ಗೋವಾ ಸರಕಾರ ಶುಕ್ರವಾರ ಬೆಳಿಗ್ಗೆ ಕೆಡವಲು ಆರಂಭಿಸಿದೆ.

ಗೋವಾದ ಅಂಜುನಾ ಬೀಚ್‌ನಲ್ಲಿರುವ ‘ಕರ್ಲೀಸ್’ ಎಂಬ ರೆಸ್ಟೋರೆಂಟ್ ಇತ್ತೀಚೆಗೆ ಸುದ್ದಿಯಲ್ಲಿತ್ತು. ಫೋಗಟ್ ಸಾಯುವ ಕೆಲವು ಗಂಟೆಗಳ ಮೊದಲು ಔಟ್‌ಲೆಟ್‌ನಲ್ಲಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿತ್ತು. ಪ್ರಕರಣದಲ್ಲಿ ಬಂಧಿತರಾದ ಐವರಲ್ಲಿ ಅದರ ಮಾಲೀಕ ಎಡ್ವಿನ್ ನೂನ್ಸ್ ಕೂಡ ಸೇರಿದ್ದಾರೆ ಹಾಗೂ ನಂತರ ಅವರಿಗೆ ಜಾಮೀನು ನೀಡಲಾಯಿತು.

‘ಜಿಲ್ಲಾಡಳಿತದ ಕಟ್ಟಡ ಧ್ವಂಸ ತಂಡವು ಅಂಜುನಾ ಪೊಲೀಸ್ ಸಿಬ್ಬಂದಿಯೊಂದಿಗೆ ಬೀಚ್‌ಗೆ ಆಗಮಿಸಿ ಸಿಆರ್‌ಝಡ್ ನಿಯಮಾ ವಳಿಗಳನ್ನು ಉಲ್ಲಂಘಿಸಿ ‘ನೋ ಡೆವಲಪ್‌ ಮೆಂಟ್ ಝೋನ್’ನಲ್ಲಿ ನಿರ್ಮಿಸಲಾಗಿದ್ದ ರೆಸ್ಟೊರೆಂಟ್ ಅನ್ನು ಕೆಡವಿದರು,’ ಎಂದು ಅಧಿಕಾರಿ ತಿಳಿಸಿದರು.