Sunday, 15th December 2024

ವಿಶ್ವ ಶುದ್ಧ ಗಾಳಿಯ ದಿನ: ನಿಮ್ಮ ಮನೆಯಲ್ಲಿರುವ ಇರಲಿ ಈ ಏರ್‌ ಪೂರಿಫೈಯರ್‌

ಈ ತಿಂಗಳಲ್ಲಿ ವಿಶ್ವ ಶುದ್ಧ ಗಾಳಿಯ ದಿನವನ್ನು ಆಚರಿಸಲಾಗುತ್ತದೆ. ಇಂದಿನ ಯುಗದಲ್ಲಿ ಶುದ್ಧಗಾಳಿ ಸಿಗುವುದೇ ಅಪರೂಪ ವಾಗಿದೆ.

ಹೆಚ್ಚುತ್ತಿರುವ ವಾಯು ಮಾಲಿನ್ಯ, ಪರಿಸರ ಮಾಲಿನ್ಯದಿಂದ ಹೊಗೆರಹಿತ ಗಾಳಿ ಸೇವನೆ ಮಾನವರಿಗೆ ಅಸಾಧ್ಯವಾಗಿದೆ. ಮನೆ ಯೊಳಗೆ ಏಸಿ ಹಾಕಿಸಿಕೊಂಡರೂ ಸಹ ಶುದ್ಧಗಾಳಿ ಸಿಗುವ ಭರವಸೆ ಇಲ್ಲದ ಸ್ಥಿತಿಯಲ್ಲಿದ್ದೇವೆ. ಸಾಕಷ್ಟು ಹಣ ವ್ಯಹಿಸಿದರೂ ಶುದ್ಧ ಹಾಗೂ ತಾಜಾ ಗಾಳಿ ಸಿಗುವುದೇ ಅಪರೂಪವಾಗಿದೆ. ಕೆಲವು ಪಾರ್ಕ್‌ ಅಥವಾ ಅರಣ್ಯದಂಥ ಜಾಗಗಳಿಗೆ ತೆರಳಿದಾಗ ಮಾತ್ರ ಕೆಲವರಿಗೆ ತಾಜಾ ಗಾಳಿ ಸಿಗಲಿದೆ. ಆದರೆ ಮನೆಯ ವಾತಾವರಣದಲ್ಲಿ ಕಲುಶಿತ ಗಾಳಿಯಿಂದ ಜನರು ಹೈರಾಣಾಗಿದ್ದಾರೆ. ಇದರಿಂದ ಅಸ್ತಮ, ಶ್ವಾಸಕೋಶ ಸಮಸ್ಯೆ ಸೇರಿದಂತೆ ಹಲವು ರೀತಿಯ ಉಸಿರಾಟದ ಸಮಸ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ ಮನೆಯಲ್ಲಿ ಶುದ್ಧಗಾಳಿ ಪಡೆಯುವ ವ್ಯವಸ್ಥೆ ಮಾಡಿಕೊಳ್ಳುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಈ ನಿಟ್ಟಿನಲ್ಲಿ ಕ್ಯೂನೆಟ್‌ ಸಂಸ್ಥೆಯು ತಮ್ಮ ಮನೆಗಳಲ್ಲಿ ಫ್ರೆಶ್‌ ಏರ್‌ಗಾಗಿ ಹೋಮ್‌ ಪ್ಯೂರ್‌ ಸೈನ್‌ ನನ್ನು ಪರಿಚಯಿಸಿದೆ. ಈ ಏರ್‌ ಪ್ಯೂರಿಫೈಯರ್‌ ಶೇ. 99.8 ರಷ್ಟು ವೈರಸ್‌ ಹಾಗೂ ಬ್ಯಾಕ್ಟೀರಿಯಾಗಳನ್ನು ಫಿಲ್ಟರ್‌ ಮಾಡುವ ಮೂಲಕ ಕೇವಲ ತಂಪಾದ ಗಾಳಿಯಷ್ಟೇ ಅಲ್ಲ, ತಾಜಾ ಹಾಗೂ ಶುದ್ದಗಾಳಿಯನ್ನು ನೀಡುತ್ತದೆ.

ಅಷ್ಟೇ ಅಲ್ಲದೆ, ಅಲರ್ಜಿ ಉಂಟು ಮಾಡುವ ಗಾಳಿ, ಮಾಲಿನ್ಯಕಾರಕಗಳು, ಕೆಟ್ಟ ವಾಸನೆಗಳನ್ನು ತೆಗೆದು ಹಾಕುತ್ತದೆ. ಇದು 36 ಚದರ ಮೀಟರ್ ಇದ್ದು, ಪೋರ್ಟಬಲ್ ಆಗಿದೆ. ಅಂದ್ರೆ, ಈ ಉಪಕರಣವನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯುವಷ್ಟು ತೂಕರಹಿತವಾಗಿದೆ. ಹೋಮ್‌ ಪ್ಯೂರ್‌ ಸೈನ್‌ ನವೀನ ತಂತ್ರಜ್ಞಾನವು HPP+ ಸ್ಥಾಯೀವಿದ್ಯುತ್ತಿನ, ಪ್ಲಾಸ್ಮಾ ಅಯಾನ್ ಫಿಲ್ಟರ್ ತಂತ್ರಜ್ಞಾನ ಮತ್ತು ಯುವಿ ಪ್ರೊಟೆಕ್ಷನ್‌ ಹೊಂದಿದೆ.

ಹೀಗಾಗಿ ಪ್ರತಿಯೊಬ್ಬರೂ ತಮ್ಮ ಉಸಿರಾಟದ ಗುಣಮಟ್ಟವನ್ನು ಶುದ್ಧೀಕರಿಸಿಕೊಳ್ಳಲು ಈ ಉಪಕರಣ ಅತ್ಯಗತ್ಯ. ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿ. https://www.qnetindia.co/homepurezayn/