Friday, 20th September 2024

ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನ: ಭಾರತದಲ್ಲಿ ಶೋಕಾಚರಣೆ

ವದೆಹಲಿ: ಸೆ.8ರಂದು ನಿಧನರಾದ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ಗೌರವಾರ್ಥವಾಗಿ ದೇಶದಲ್ಲಿ ಭಾನುವಾರ ಶೋಕಾಚರಣೆ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಭಾನುವಾರ ಕೆಂಪು ಕೋಟೆ ಮತ್ತು ರಾಷ್ಟ್ರಪತಿ ಭವನ ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ವನ್ನು ಅರ್ಧಕ್ಕೆ ಇಳಿಸಲಾಗಿದೆ.

ಶೋಕಾಚರಣೆಯ ದಿನ, ರಾಷ್ಟ್ರಧ್ವಜವನ್ನು ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ದೇಶದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಇದೇ ವೇಳೆ ಯಾವುದೇ ಮನರಂಜನೆ ಇರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏಳು ದಶಕಗಳ ಕಾಲ ಬ್ರಿಟನ್ ರಾಣಿಯಾಗಿದ್ದ ಎರಡನೇ ಎಲಿಜಬೆತ್, ಅತ್ಯಂತ ಸುದೀರ್ಘ ಅವಧಿಯವರೆಗೂ ದೇಶವನ್ನು ಆಳಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. 2015 ರಲ್ಲಿ ದೀರ್ಘ ಸೇವೆ ಸಲ್ಲಿಸಿದ ರಾಣಿ ಎರಡನೇ ಎಲಿಜಬೆತ್ ಅವರಿಗೆ ದೇಶದ ಜನರು ಗೌರವ ಸಲ್ಲಿಸಿದ್ದರು.ಒಂದು ದಿನದ ರಾಜ್ಯ ಶೋಕಾಚರಣೆಯನ್ನು ಆಚರಿಸಿದ್ದಕ್ಕಾಗಿ ಮೋದಿ ಸರ್ಕಾರವನ್ನು ಹಲವು ಮಂದಿ ಶ್ಲಾಘಿಸಿದರು.

ರಾಣಿ 2ನೇ ಎಲಿಜಬೆತ್ ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರಾಗಿದ್ದರು. ಇಡೀ ಜಗತ್ತು ಅವರನ್ನು ಮಾತೃವಿನಂತೆ ನೋಡಿದೆ ಎಂದು ನಾಗರಿಕರೊಬ್ಬರು ಹೇಳಿದರು.

ಮೋದಿ ತನ್ನ ರಾಷ್ಟ್ರ ಮತ್ತು ಜನರಿಗೆ ಸ್ಪೂರ್ತಿದಾಯಕ ನಾಯಕತ್ವವನ್ನು ಒದಗಿಸಿದ್ದಾರೆ ಮತ್ತು ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯನ್ನು ವ್ಯಕ್ತಿಗತಗೊಳಿಸಿದ್ದಾರೆ ಎಂದಿದ್ದಾರೆ.

ಸೆಪ್ಟೆಂಬರ್ 8ರಂದು ಅವರ ವೈದ್ಯಕೀಯ ಸ್ಥಿತಿ ಹದಗೆಟ್ಟಿದೆ ಎಂದು ವರದಿಯಾದ ಕೆಲವೇ ಗಂಟೆಗಳಲ್ಲಿ ಯುಕೆ ರಾಜಮನೆತನವು ರಾಣಿ 2ನೇ ಎಲಿಜಬೆತ್ ಸಾವಿನ ಸುದ್ದಿಯನ್ನು ಪ್ರಕಟಿಸಿತ್ತು.

ರಾಣಿಯ ಅಂತ್ಯಕ್ರಿಯೆಯು ಆಕೆಯ ಮರಣದ 10 ದಿನಗಳ ನಂತರ ನಡೆಯಲಿದೆ.