ಮಾನವಿ: ತಾಲ್ಲೂಕಿನ ಚೀಕಲಪರ್ವಿ, ಯಡಿವಾಳ, ಜಾಗೀರಪನ್ನೂರು, ನಲ್ಗಂದಿನ್ನಿ, ಮೂಸ್ಟೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ನೆರೆಪೀಡಿತ ಪ್ರದೇಶ ಗಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ವೀಕ್ಷಣೆ ಮಾಡಿದರು.
ನಂತರ ಮಾತನಾಡಿ, ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಬೆಳೆದಿರುವ ಬೆಳೆಗಳಾದ ಹತ್ತಿ, ಮೆಣಸಿನ ಕಾಯಿ, ತೊಗರಿ ಬೆಳೆ,ಸೂರ್ಯ ಪಾನ್ ಬೆಳೆ, ಕೆಲವು ಗ್ರಾಮಗಳಲ್ಲಿ ಭಕ್ತ ಬೆಳೆ ಕೂಡ ಸಂಪೂರ್ಣವಾಗಿ ನಾಶವಾಗಿದೆ. ರೈತರ ಪಂಪ್ ಸಿಟ್ಟುಗಳು ನೀರಿನಲ್ಲಿ ಮುಳುಗಿ ರೈತರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ ಕೂಡಲೇ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ವರದಿ ಒಪ್ಪಿಸುವಂತೆ ಸೂಚನೆ ನೀಡಿದರು..
ಗ್ರಾಮೀಣ ಪ್ರದೇಶದಲ್ಲಿ ಇರುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಈ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ತುಂಗಭದ್ರ ನದಿಯಿಂದ ಹೆಚ್ಚುವರಿಯಾಗಿ ಒಂದು ಲಕ್ಷ ಕ್ಯೂಸೆಕ್ ನೀರು ಹರಿದು ಬಿಟ್ಟಿರುವುದರಿಂದ ಚೀಕಲಪರ್ವಿ ಗ್ರಾಮದ ವಿಜಯದಾಸರ ಕಟ್ಟೆ ಮತ್ತು ಶ್ರೀ ಮಾರಿಕಾಂಬ ದೇವಸ್ಥಾನದ ಸುತ್ತಲೂ ಜಲಾವೃತ್ತ ಗೊಂಡಿದೆ. ಆದ್ದರಿಂದ ಗ್ರಾಮಸ್ಥರು ನದಿಯ ಕಡೆಗೆ ಯಾರು ಹೋಗಬಾರದೆಂದು ಶಾಸಕರು ಹೇಳಿದರು.
ಗ್ರಾಮಗಳಲ್ಲಿನ ರಸ್ತೆಗಳು ಶಾಲೆ ಆವರಣಗಳಲ್ಲಿ ಜಲಾವೈತಗೊಂಡಿರುವ ಕಾರಣ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ತುಂಬಾ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳ ಪರಿಸ್ಥಿತಿ ಅರಿಯಲು ವೀಕ್ಷಣೆ ಮಾಡಿದರು.
ಅಲ್ಲಿನ ಸಮಸ್ಯೆಯನ್ನು ಸಾರ್ವಜನಿಕರೊಂದಿಗೆ ಚರ್ಚಿಸಿ ಸಮಸ್ಯೆ ತಿಳಿದುಕೊಂಡು ಸಂಬಂಧಪಟ್ಟ ತಹಶೀಲ್ದಾರರಿಗೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಂದಾಯ ನಿರೀಕ್ಷಕರಿಗೆ ಗ್ರಾಮ ಲೆಕ್ಕ ಅಧಿಕಾರಿಗಳಿಗೆ ಮಾತನಾಡಿ ಆದಷ್ಟು ಬೇಗನೆ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಕಲ್ಪಸಬೇಕು ಸೇತುವೆಗಳು ನಿರ್ಮಾಣ ಶಾಲೆಯ ಸ್ವಚ್ಛತೆ ರಸ್ತೆಗಳ ದುರಸ್ತಿಯಾಗಬೇಕು ಮಳೆಯ ಸಂದರ್ಭದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿ ಸಾರ್ವಜನಿಕರು ವೃದ್ಧರಿಗೆ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗನೆ ಸೂಕ್ಷ್ಮ ಕ್ರಮಕ್ಕೆ ಮುಂದಾಗಬೇಕೆಂದು ಹೇಳಿದರು.
ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಹಶೀಲ್ದಾರ ಎಲ್ ಡಿ ಚಂದ್ರಕಾಂತ, ಕೃಷಿ ಅಧಿಕಾರಿ ಸೈಯದ್ ಹುಸೇನ್,ಪಿ ಎಸ್ ಐ ವೆಂಕಟೇಶ, ಬಾಲಪ್ಪ ನಾಯಕ, ಮಾಜಿ ಪುರಸಭೆ ಸದಸ್ಯ ಶಕೀಲ್ ಬೇಗ್,ಮದ್ಲಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷರ ಪತಿ ವೆಂಕಟೇಶ ನಾಯಕ,ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶಿವರಾಯ್ಯ, ಶರಣಪ್ಪ ಗೌಡ ಮದ್ಲಾಪೂರ ,ಮರೇಗೌಡ ಬುದ್ದಿನ್ನಿ,ಲಕ್ಷ್ಮಣ ಯಾದವ ರಬ್ಬಣಕಲ,ಹನುಮಪ್ಪ ನಾಯಕ ರಬ್ಬಣಕಲ,ಎಸ್ ಯಕೋಬ,ಪಿ ರವಿಕುಮಾರ್,ಗೋಪಾಲ ನಾಯಕ ಹರವಿ,ಮೈಬೂಬ್ ಖುರೀಷ,ವಿರೂಪಾಕ್ಷಯ್ಯ ಸ್ವಾಮಿ,ಮೌಲಪ್ಪ ನಾಯಕ,ಖಾಸಿಂ ಸಾಬ್,ವಿಶ್ವನಾಥ ಸ್ವಾಮಿ,ಭಾಷಾ ಸಾಬ್,ಲಕ್ಷ್ಮಣ, ಮೌಲ ಸಾಬ್ ಉಪಸ್ಥಿತರಿದ್ದರು.