ಭೋಪಾಲ್: ದ್ವಾರಕಾನಾಥ ಶಾರದಾ ಪೀಠದ ಶಂಕರಾ ಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ (99) ವಿಧಿವಶ ರಾಗಿದ್ದಾರೆ.
ಅವರು ಭಾನುವಾರ ಮಧ್ಯಪ್ರದೇಶದ ನರಸಿಂಗ್‌ಪುರದ ಶ್ರೀಧಾಮ ಜೋತೇಶ್ವರ ಆಶ್ರಮದಲ್ಲಿ ಮಧ್ಯಾಹ್ನ ಕೊನೆಯು ಸಿರೆಳೆ ದಿದ್ದಾರೆ ಎಂದು ತಿಳಿದುಬಂದಿದೆ.
ಅದಿಗುರು ಶಂಕರಾಚಾರ್ಯ ಸ್ಥಾಪಿತ ನಾಲ್ಕು ಪೀಠಗಳ ಪೈಕಿ ದ್ವಾರಕ ಪೀಠದ ಜಗದ್ಗುರುಗಳಾಗಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.
ಹರಿಯಾಲಿ ತೀಜ್ ಶುಭದಿನದಂದು ತಮ್ಮ 99ನೇ ಜನ್ಮದಿನ ವನ್ನು ಆಚರಿಸಿಕೊಂಡಿದ್ದ ಸ್ವರೂಪನಂದ ಸರಸ್ವತಿ ಅವರು ತಮ್ಮ ಪೂರ್ವಾಶ್ರಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ದವರಾಗಿದ್ದಾರೆ. ತಮ್ಮ 9ನೇ ವಯಸ್ಸಿನಲ್ಲಿ ಮನೆ ತೊರೆದು ಸನ್ಯಾಸ ಜೀವನ ಪಥದತ್ತ ತೆರಳಿದರು. ವಾರಣಾಸಿಯ ಸ್ವಾಮಿ ಕರ್ಪತ್ರಿ ಮಹಾರಾಜ್ ಬಳಿ ವೇದ ಅಧ್ಯಯನ ಮಾಡಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿ ಸಾಧುಗಳ ಜೊತೆಗೂಡಿ ಹೋರಾಟ ನಡೆಸಿ ಜೈಲುವಾಸವನ್ನು ಅನುಭವಿಸಿದ್ದರು.
2013ರಲ್ಲಿ ಐದು ಸಾವಿರ ಯಾತ್ರಾರ್ಥಿಗಳನ್ನು ಬಲಿ ತೆಗೆದುಕೊಂಡ ಕೇದಾರನಾಥದ ಮೇಘ ಸ್ಫೋಟಕ್ಕೆ ಸ್ವಾಮೀಜಿ ತಿಳಿಸಿದ್ದ ಕಾರಣ ಚರ್ಚೆಗೀಡಾಗಿತ್ತು.
“ಮಧುಚಂದ್ರಕ್ಕೆ ತೆರಳಿದ್ದ ಜೋಡಿಗಳು, ಪಿಕ್‌ನಿಕ್ ಪ್ರಿಯರು “ದೇವಭೂಮಿ’ಯಲ್ಲಿ ಮಜಾ ಮಾಡಿದ್ದೆ ನಿಸರ್ಗದ ಮುನಿಸಿಗೆ ಕಾರಣ” ಎಂದು ಹೇಳಿಕೆ ನೀಡಿದ್ದರು.
”ಪೂಜೆಗೆ ಅರ್ಹರಲ್ಲದ ಶಿರಡಿ ಸಾಯಿ ಬಾಬಾರನ್ನು ಪೂಜೆ ಮಾಡಿದ್ದೆ ಮಹಾರಾಷ್ಟ್ರಕ್ಕೆ ಬರ ಪರಿಸ್ಥಿತಿ ಬರಲು ಕಾರಣ, ಬಾಬಾಗೆ ದೇವಾಲಯ ಕಟ್ಟುವುದರಲ್ಲಿ ಅರ್ಥವಿಲ್ಲ” ಎಂದು ಸ್ವಾಮೀಜಿ ಮಾತು ಹರಿಯಬಿಟ್ಟಿದ್ದರು.