Thursday, 19th September 2024

ಗುಜರಾತ್‌ನಲ್ಲಿ ಮೊದಲ ಸೆಮಿಕಂಡಕ್ಟರ್‌ ಚಿಪ್‌ ಉತ್ಪಾದನಾ ಘಟಕ ಸ್ಥಾಪನೆ

ಗಾಂಧಿನಗರ: ಮೊದಲ ಸೆಮಿಕಂಡಕ್ಟರ್‌ ಚಿಪ್‌ ಉತ್ಪಾದನಾ ಘಟಕವನ್ನು ಗುಜರಾತ್‌ನಲ್ಲಿ ನಿರ್ಮಿಸಲು “ವೇದಾಂತ’ ಸಂಸ್ಥೆ ಸಿದ್ಧವಾಗಿದೆ. ಇದಕ್ಕಾಗಿ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 1.54 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಸಜ್ಜಾಗಿದೆ.

ಅಹಮದಾಬಾದ್‌ನಲ್ಲಿ 1000 ಎಕರೆ ಜಾಗದಲ್ಲಿ ಈ ಘಟಕ ಸ್ಥಾಪನೆಯಾಗ ಲಿದ್ದು, ಅದರಲ್ಲಿ ಡಿಸ್ಪೆ ಹಬ್‌ ಘಟಕ, ಸೆಮಿಕಂಡಕ್ಟರ್‌ ಜೋಡಣೆ ಮತ್ತು ಪರೀಕ್ಷಾ ಘಟಕಗಳೂ ಇರಲಿವೆ.

ಇದರಿಂದ ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ವೇದಾಂತ ಸಂಸ್ಥೆ ಮುಖ್ಯಸ್ಥ ಅನಿಲ್‌ ಅಗರ್ವಾಲ್‌ ತಿಳಿಸಿದ್ದಾರೆ.

ಭಾರತದಲ್ಲಿ ಸೆಮಿಕಂಡಕ್ಟರ್‌ಗೆ ಬೇಡಿಕೆ ಹೆಚ್ಚಿದೆ. 2021ರಲ್ಲಿ 27.2 ಶತಕೋಟಿ ಡಾಲರ್‌ ಮೌಲ್ಯದ ಸೆಮಿಕಂಡಕ್ಟರ್‌ ಅನ್ನು ಭಾರತ ಆಮದು ಮಾಡಿಕೊಂಡಿದೆ. ಇದು 2026ರ ವೇಳೆಗೆ 64 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ.

ವಿದೇಶಿ ಸಂಸ್ಥೆಗಳಾದ ಐಎಸ್‌ಎಂಎಸ್‌ ಅಂತಾರಾಷ್ಟ್ರೀಯ ಒಕ್ಕೂಟ ಹಾಗೂ ಐಜಿಎಸ್‌ಎಸ್‌ ವೆಂಚರ್ಸ್‌ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸೆಮಿಕಂಡಕ್ಟರ್‌ ಘಟಕ ನಿರ್ಮಿಸುವುದಾಗಿ ಘೋಷಿಸಿವೆ.

ಭಾರತ ಮೂಲದ ಸಂಸ್ಥೆ ಸೆಮಿಕಂಡಕ್ಟರ್‌ ತಯಾರಿಗೆ ಮುಂದಾಗುತ್ತಿರುವುದು ಇದೇ ಮೊದಲು.