ತುಮಕೂರು : ತುಮಕೂರು ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ನರ‍್ಮಿಸುವಂತೆ ಈಗಾಗಲೇ ಮಾಜಿ ಪ್ರಧಾನಮಂತ್ರಿ ಗಳಾದ ಎಚ್ ಡಿ ದೇವೇಗೌಡ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪ್ರತಿಮೆ ನರ‍್ಮಾಣಕರ‍್ಯಕ್ಕೆ ವೈಯಕ್ತಿಕವಾಗಿ ೧೦ ಲಕ್ಷ ರು. ಗಳ ದೇಣಿಗೆ ನೀಡಲು ಸಿದ್ದನಿದ್ದು ಎಲ್ಲಾ ಪದಾಧಿಕಾರಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಡಿಸಿ ಗೌರಿಶಂಕರ್ ತಿಳಿಸಿದರು.
ಗ್ರಾಮಾಂತರ ನಾಗವಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತುಮಕೂರು ಜಿಲ್ಲಾ ಆದಿ ಜಾಂಬವ ಶಕ್ತಿ ಸೇನೆ ಗ್ರಾಮೀಣಾಭಿವೃದ್ಧಿ ಸಂಘದ ಉದ್ಘಾಟನಾ ಕರ‍್ಯಕ್ರಮ ನೇರವೆರಿಸಿ ಮಾತನಾಡಿ, ಕರ‍್ಯಕ್ರಮದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ೫೦೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯರ‍್ಥಿಗಳಿಗೆ ಪ್ರತಿಭಾ ಪುರಸ್ಕಾರವಾಗಿ ವೈಯಕ್ತಿಕವಾಗಿ ೧೦ ಸಾವಿರ ರು.ಗಳನ್ನು ನೀಡಿ ಸನ್ಮಾನಿಸಿದರು.
ಕರ‍್ಯಕ್ರಮದಲ್ಲಿ ಭಾಗವಹಿಸಿದ ೫೦೦೦ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಸೀರೆ ನೀಡುವ ಮೂಲಕ ಬಾಗಿನ ನೀಡಲಾಯಿತು. ಸಮಾರಂಭದಲ್ಲಿ ಆದಿ ಜಾಂಬವ ಶಕ್ತಿ ಸೇನೆ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ಬೆಳಗುಂಬ ವೆಂಕಟೇಶ್, ಕರ‍್ಯಾಧ್ಯಕ್ಷ ಅರಳೂರು ಸುರೇಶ್ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.