ಬಸವನಬಾಗೇವಾಡಿ: ಪಟ್ಟಣದ ನಿವಾಸಿಯೊಬ್ಬರಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಕ್ಕಾಗಿ ಸಿದ್ದಪ್ಪ ಮುದೂರ ಎಂಬ ದಲ್ಲಾಳಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು ಪರಿಶೀಲನೆಗಾಗಿ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಬಂದಿದ್ದು ಗ್ರಾಮ ಲೆಕ್ಕಾಧಿಕಾರಿ ಸಂತೋಷ ಕುಂಟೋಜಿ ತಮ್ಮ ಸಹಾಯಕ ಅಧಿಕಾರಿ ಅಲ್ಲಾಬಕ್ಷ ಕೊರಬುನೊಂದಿಗೆ ಸ್ಥಾನಿಕ ಚೌಕಾಸಿಗೆಂದು ಅರ್ಜಿದಾರರ ಮನೆಗೆ ತೆರಳಿದಾಗ ದಲ್ಲಾಳಿ ನಕಲಿ ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ.
ಪಟ್ಟಣದ ನಿವಾಸಿಯಾದ 43 ವಯಸ್ಸಿನ ಮಹಾದೇವಿ ಶಿವಾನಂದ ಚವ್ಹಾಣ ಅವಳನ್ನು 60 ವಯಸ್ಸು ಎಂದು ಆದರ್ ಕಾರ್ಡ. ಒಟರ್ ಐಡಿ. ರೇಶನ್ ಕಾರ್ಡನಲ್ಲಿ ತಿದ್ದುಪಡಿ ಮಾಡುವ ಮೊಲಕ ನಕಲಿ ದಾಖಲಾತಿಯನ್ನು ಸೃಷ್ಟಿಸಿದ್ದಾನೆ ಅಷ್ಟೇ ಅಲ್ಲದೆ ಅರ್ಜಿದಾರಳ ಹೆಸರಿನಲ್ಲಿ ಬಾಂಡ್ ಪಡೆದು ತಾನೆ ಹೆಬ್ಬಟ್ಟಿನ ಗುರುತಿನ ಸಹಿ ಮಾಡಿ ರೋಟರಿ ಮಾಡಿಸಿ ದ್ದಾನೆ. ರೋಟರಿ ಮಾಡುವ ವಕೀಲರು ಪರಿಶೀಲಿಸದೆ ರೋಟರಿ ಮಾಡಿರುವುದು ವಿಪರ್ಯಾಸವೆ ಸರಿ.
ಅರ್ಜಿದಾರಳಾದ ಮಹಾದೇವಿ ಶಿವಾನಂದ ಚವ್ಹಾಣ ಅವರನ್ನು ಅಧಿಕಾರಿಗಳು ವಿಚಾರಿಸಿ ದಾಗ ನನಗೆ ಅಪಘಾತದಲ್ಲಿ ಕೈ ಮುರಿದಿದೆ ಸರ್ಕಾರದಿಂದ ಸಹಾಯ ಕಲ್ಪಿಸುವಂತೆ ಪರಿಚಯಸ್ಥರೊಬ್ಬರಿಗೆ ನನ್ನ ಆಸ್ಪತ್ರೆಯ ದಾಖಲೆ ಸೇರಿದಂತೆ ವಿವಿಧ ದಾಖಲೆ ನೀಡಿದ್ದೆ ಆದರೆ ಈ ದಲ್ಲಾಳಿ ನಮ್ಮ ದಾಖಲಾತಿಯನ್ನು ನಮಗೆ ಗೊತ್ತಿಲ್ಲದ ಹಾಗೆ ತಿದ್ದು ಪಡೆ ಮಾಡಿದ್ದಾನೆ ಎಂದು ತಿಳಿಸಿದರು.
ದಲ್ಲಾಳಿಯನ್ನು ಪೊಲೀಸ್ ಠಾಣೆಗೆ ತಂದು ವಿಚಾರಿಸಿದಾಗ ಲಾಲಸಾಬ ಮುದ್ದಾಪೂರ ಎಂಬ ಯುವಕ ಕಂಪ್ಯೂಟರ ಮೂಲಕ ದಾಖಲಾತಿಯಲ್ಲಿ ತಿದ್ದು ಪಡೆ ಮಾಡಿರುವುದಾಗಿ ತಿಳಿದುಬಂದಿದೆ.
ಆರೋಪಿಗಳಿಬ್ಬರು ಪೊಲೀಸ್ ರ ವಶದಲ್ಲಿದ್ದು ಪಟ್ಟಣದ ಮಿನಿ ವಿಧಾನಸೌಧದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಸಂಭಂದಿ ಸಿದ ಅಧಿಕಾರಿಗಳು ದಲ್ಲಾಳಿಗಳ ಹಾವಳಿ ತಪ್ಪಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.