Saturday, 14th December 2024

ಆಯ್.ಎಲ್.ಸಿ ಕಾಲುವೆಗೆ ಸ್ಕಾಡಾ ಗೇಟ್ ಅಳವಡಿಸಬೇಕು: ಶಾಸಕ ಪಾಟೀಲ

ಇಂಡಿ: ಗುತ್ತಿ ಬಸವಣ್ಣ ಏತನೀರಾವರಿ ಕಿ.ಮೀ ದಿಂದ ೨೦೩ ರವರೆಗೆ ಕಾಲುವೆಯ ಕಾಮಗಾರಿಯು ಸಂಪೂರ್ಣ ಗೋಳಿಸುವುದು ಸರಕಾರದ ಗಮನಕ್ಕೆ ಬಂದಿದೆಯೇ.ಹಾಗಾದರೆ ಸದರಿ ಕಾಲುವೆಯ ೯೭.೦೦ ಕಿ.ಮೀ ರವರೆಗೆ ಮಾತ್ರ ನೀರು ಹರಿಯುತ್ತಿದ್ದು ನಾಲೆಯ ಮುಂದಿನ ಭಾಗದವರೆಗೆ ನೀರು ಹರಿಯದೆ ಇರುವುದರಿಂದ ಜನ -ಜಾನುವಾರು ಗಳು ಹಾಗೂ ರೈತರು ಕುಡಿಯುವ ನೀರಿಗಾಗಿ ತೀವೃ ಕಷ್ಟಕರ ಪರಸ್ಥಿತಿಯನ್ನು ಎದುರಿಸುತ್ತಿರುವುದನ್ನು ಸರಕಾರ ಗಮನಿಸಿದೆಯೇ.

ಸದರಿ ಕಾಲುವೆಯಲ್ಲಿ ೯೭.೦೦ ರಿಂದ ೨೦೩ .೦೦ ಕಿಮೀ ರವರೆಗೆ ನೀರು ಹರಿಸದಿರಲು ಕಾರಣಗಳೇನು ? ಇಂಡಿ ಶಾಖಾ ಕಾಲುವೆಗೆ ಐ.ಬಿ.ಸಿ ಸ್ಕಾಡಾಗೇಟ್ ಅಳವಡಿಸಿರುವ ಮಾದರಿ ಯಲ್ಲಿ ಗುತ್ತಿಬಸವಣ್ಣ ಏತನೀರಾವರಿ ಕಾಲುವೆಗೆ ಸ್ಕಾಡಾ ಗೇಟ್ ಅಳವಡಿಸು ವದರಿಂದ ನೀರು ಪೋಲಾಗದೇ ನಾಲೆಯ ಕೊನೆಯ ಭಾಗದವರೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯ ವಾಗುವುದು ಎಂಬ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ.

ಬಂದಿದ್ದರೆ ಸದರಿ ಕಾಲುವೆ ನಾಲೆಯ ಕೊನೆಯ ಭಾಗದವರೆಗೆ ಸಮರ್ಪಕ ನೀರು ಪೋಲಾಗ ದಂತೆ ನೀರು ಹರಿಸಲು ಸ್ಕಾಡಾ ಗೇಟ್ ಅವಡಿಸುವ ಬಗ್ಗೆ ಸರಕಾರದ ನಿಲುವೇನು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸದನದಲ್ಲಿ ಜಲಸಂಪನ್ಮೋಲ ಸಚಿವ ಗೋವಿಂದ ಕಾರಜೋಳ ಇವರಿಗೆ ಗಮನ ಸೆಳೆದರು.

ಗುತ್ತಿ ಬಸವಣ್ಣ ಏತನಿರಾವರಿ ಯೋಜನೆ ೨೦೦೬ರಲ್ಲಿ ಪ್ರಾರಂಭವಾಗಿರುವುದು ಸತ್ಯ, ೨೮೧೫ ಎಚ್.ಪಿ ೮ ಪಂಪ್‌ಗಳು ಹಾಳಾ ಗಿದ್ದವು. ೫ ಪಂಪ್‌ಗಳು ೨೦೧೫-೧೬ ರಿಂದ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ೭ ಕೋಟಿ ೭೫ ಲಕ್ಷ ರೂ ಖರ್ಚು ಮಾಡಿ ೭ ಪಂಪ್ ರಿಪೇರಿ ಮಾಡಿದೆ. ೫ ವರ್ಷ ಕಂಪನಿಯವರೆ ಮೆಂಟೇನೇನ್ಸ್ ಮಾಡಬೇಕು ಈ ಗಾಗಲೆ ೪ ಪಂಪ್ ಪ್ರಾರಂಭವಾಗಿವೆ ಒಟ್ಟಾರೆ ೭ ಪಂಪಗಳು ಇದೇ ಹಂಗಾಮಿನಲ್ಲಿ ಪ್ರಾರಂಭಿಸುತ್ತೇವೆ.ಒAದು ಸ್ಟಾö್ಯಂಡ ಬಾಯಲ್ ಪಂಪು ಕಾಯ್ದೀರಿಸಲಾಗು ವುದು.

೧೪೭ ರವೆಗೆ ನೀರು ಹರಿಸಬೇಕು ಎಂಬುದು ಶಾಸಕರ ಆಗ್ರಹ ಆದರೆ ಇದಕ್ಕೇಲ್ಲ ಅನೇಕ ತಾಂತ್ರೀಕ ತೊಂದರೆಗಳಿವೆ ಇದನ್ನು ಕೂಡಾ ಗೌಡ್ರೀಗೆ ಗೊತ್ತು, ೯೭ ರವರೆಗೆ ಈಗಾಗಲೆ ನೀರು ಕೊಡಲಾಗಿದೆ ೪೨ ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರಾವರಿಯಾಗಿದೆ. ೩೦೦ ವರ್ಷದ ಬರಗಾಲದ ಇತಿಹಾಸ ಹೊಂದಿರುವ ವಿಜಯಪೂರ ಜಿಲ್ಲೆ ರಾಜಸ್ಥಾನ ನಂತರ ವಿಜಯಪೂರ ಜಿಲ್ಲೆಯಾಗಿದ್ದು ಸ್ಕಾಡಾ ಗೇಟ್ ಆಲೋಚನೆ ಮಾಡುವುದಾಗಿ ಜಲಸಂಪನ್ಮೋಲ ಸಚಿವ ಗೋವಿಂದ ಕಾರಜೋಳ ಶಾಸಕ ಯಶವಂತರಾಯಗೌಡ ಪಾಟೀಲರ ಪ್ರಶ್ನೆಗೆ ಉತ್ತರಿಸಿದರು.