Thursday, 12th December 2024

ನೀಟ್ ಪರೀಕ್ಷೆಯಲ್ಲಿ ಸ್ವಾಲೀಯಾ ಅಮೋಘ ಸಾಧನೆ

ಕೊಲ್ಹಾರ: 2022 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಪಟ್ಟಣದ ಸ್ವಾಲೀಯಾ ಜಮಖಂಡಿ 680 ಅಂಕಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾಳೆ.

ಅಜ್ಜ ಅಜ್ಜಿಯರ ಆಶ್ರಯದಲ್ಲಿ ಬೆಳೆಯುತ್ತಿರುವ ಸ್ವಾಲೀಯಾ ಓದಿನಲ್ಲಿ ಮೊದಲಿ ನಿಂದಲೂ ಚುರುಕು ಈ ಯಶಸ್ಸಿನ ಶ್ರೇಯಸ್ಸು ಸಾಲೀಯಾಳ ಪರಿಶ್ರಮಕ್ಕೆ ಸಲ್ಲುತ್ತದೆ ಎಂದು ಅಜ್ಜ ಇಸ್ಮಾಯಿಲಸಾಬ್ ತಹಶಿಲ್ದಾರ ತಮ್ಮ ಸಂತಸವನ್ನು ವಿಶ್ವವಾಣಿ ಪತ್ರಿಕೆಯೊಂದಿಗೆ ಹಂಚಿಕೊಂಡರು.

ಮಗಳು ಸ್ವಾಲೀಯಾ ಪಟ್ಟಣಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ ಅವಳ ಸಾಧನೆ ನಮಗೆಲ್ಲ ಹರ್ಷವನ್ನುಂಟು ಮಾಡಿದೆ ಎಂದು ಸ್ವಾಲೀಯಾಳ ತಾಯಿ ಶಮಾ ಹರ್ಷವ್ಯಕ್ತಪಡಿಸಿದ್ದಾರೆ.

ಸ್ವಾಲೀಯಾಳಿಗೆ ತಂದೆ ಇಲ್ಲದ ಕೊರಗನ್ನು ನೀಗಿಸಿ ಅಜ್ಜ, ಅಜ್ಜಿ, ತಾಯಿ ಹಾಗೂ ಮಾವಂದಿರು ಬೆನ್ನೆಲುಬುಬಾಗಿ ನಿಂತು ಶಿಕ್ಷಣ ಕೊಡಿಸಿದ್ದಾರೆ. ಉತ್ತಮ ಸಾಧನೆ ಮಾಡುವ ಮೂಲಕ ಸಾಲೀಯಾ ತನ್ನ ಅಜ್ಜ, ಅಜ್ಜಿ, ತಾಯಿಯ ಹಾಗೂ ಮಾವಂದಿರ ಶ್ರಮವನ್ನು ಸಾರ್ಥಕಗೊಳಿಸಿದ್ದಾಳೆ.

ಮೊದಲಿನಿಂದಲೂ ಓದು ಮತ್ತು ಬರಹದಲ್ಲಿ ಚುರುಕಾಗಿದ್ದ ಸ್ವಾಲೀಯಾ ಪ್ರಾಥಮಿಕ ಶಾಲಾ ಹಂತದಲ್ಲಿಯೇ ವೈದ್ಯಳಾಗುವ ಕನಸು ಕಂಡಿದ್ದಳು ಅವಳ ಕನಸಿಗೆ ತಾಯಿ ಶಮಾ ನೀರೆರೆಯುತ್ತಾ ಸದಾ ಓದುವಂತೆ ಪ್ರೇರೇಪಿಸಿ, ಅವರ ಕನಸು ನನಸಾ ಗಿಸಲು ಹಗಲಿರುಳು ಶ್ರಮಿಸಿದ್ದಾರೆ. ಅವರ ಪರಿಶ್ರಮದ ಫಲವಾಗಿ ಸಾಲೀಯಾ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆಯಾಗಿದ್ದಾಳೆ.