Friday, 22nd November 2024

ವಿಜಯದಶಮಿ ಉತ್ಸವಕ್ಕೆ ಮುಖ್ಯ ಅತಿಥಿ: ಪರ್ವತಾರೋಹಿ ಸಂತೋಷ್‌ ಯಾದವ್‌ ಆಯ್ಕೆ

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿಜಯದಶಮಿ ಉತ್ಸವಕ್ಕೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಮುಖ್ಯ ಅತಿಥಿ ಯನ್ನಾಗಿ ಆಹ್ವಾನಿಸಲು ಆರೆಸ್ಸೆಸ್‌ ತೀರ್ಮಾನಿಸಿದೆ. ಎರಡು ಬಾರಿ ಹಿಮಾಲಯ ಪರ್ವತಾತೋಹಣ ಮಾಡಿದ ವಿಶ್ವದ ಮೊದಲ ಮಹಿಳೆ ಸಂತೋಷ್‌ ಯಾದವ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಹರ್ಯಾಣದ ಹಳ್ಳಿಯೊಂದರಲ್ಲಿ ಜಯಿಸಿದ ಸಂತೋಷ್‌ ಯಾದವ್‌ 1992 ಹಾಗೂ 1993ರಲ್ಲಿ ಹಿಮಾಲಯ ಏರಿದರು.

1992ರಲ್ಲಿ ತಮ್ಮ ಆಕ್ಸಿಜನ್‌ ಅನ್ನು ಹಂಚಿಕೊಳ್ಳುವ ಮೂಲಕ ಮತ್ತೊಬ್ಬ ಪರ್ವತಾರೋಹಿ ಮೋಹನ್‌ ಸಿಂಗ್‌ರ ಪ್ರಾಣ ಉಳಿಸಿ ದ್ದರು. ಈ ಸಾಹಸ ಮಾಡಿದಾಗ ಅವರಿಗೆ ಕೇವಲ 20 ವರ್ಷ. ಈ ವಯಸ್ಸಿಗೆ ಹಿಮಾಲಯ ಏರಿದ ವಿಶ್ವದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಸಂತೋಷ್‌ ಯಾದವ್‌ ಹೊಂದಿದ್ದಾರೆ.

ಆರ್‌ಎಸ್‌ಎಸ್‌ ಶಾಖೆಗಳು ಕೇವಲ ಪುರುಷರಿಗೆ ನಡೆಯುತ್ತವೆ. ಮಹಿಳೆಯರಿಗೆ ರಾಷ್ಟ್ರ ಸೇವಿಕಾ ಸಮಿತಿ ಹೆಸರಿನಲ್ಲಿ ಶಾಖೆಗಳು ನಡೆಯುತ್ತವೆ. ಅಲ್ಲಿಗೆ ಸಮಾಜದ ಖ್ಯಾತ ಮಹಿಳೆಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗುತ್ತದೆ. ಆದರೆ ಮೊದಲ ಬಾರಿಗೆ ನಾಗ್ಪುರದಲ್ಲಿ ನಡೆಯುವ ವಿಜಯದಶಮಿ ಉತ್ಸವಕ್ಕೆ ಮಹಿಳೆಯೊಬ್ಬರನ್ನು ಆಹ್ವಾನಿಸಲಾಗುತ್ತಿದೆ. ಈ ಬಾರಿ ವಿಜಯದಶಮಿ ಕಾರ್ಯಕ್ರಮ ಅಕ್ಟೋಬರ್‌ 5ರಂದು ನಾಗಪುರದ ರೇಶಿಮ್‌ಬಾಗ್‌ ಮೈದಾನದಲ್ಲಿ ನಡೆಯಲಿದೆ.