Saturday, 14th December 2024

ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿಯೆತ್ತಲು ಕ್ರಿಕೆಟಿಗ ಆರ್ಚರ್ ಕರೆ

ಲಂಡನ್,
ಜೀವನದಲ್ಲಿ ತಾವು ಅನುಭವಿಸಿದ ಜನಾಂಗೀಯ ತಾರತಮ್ಯದ ವಿರುದ್ಧ ವ್ಯಕ್ತಿಗಳು ಮುಕ್ತವಾಗಿ ಮಾತನಾಡಬೇಕು ಎಂದು ಇಂಗ್ಲೆಂಡ್ ತಂಡದ ಯುವ ವೇಗಿ ಜೋಫ್ರಾ ಆರ್ಚರ್ ಕರೆ ನೀಡಿದ್ದಾರೆ.
ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಕಪ್ಪು ಬಣ್ಣದ ಜನಾಂಗದ ವ್ಯಕ್ತಿ ಜಾರ್ಜ್ ಫ್ಲಾಯ್ಡ್  ಸಾವು ಖಂಡಿಸಿ ವಿಶ್ವಾದ್ಯಂತ ನಡೆಯುತ್ತಿರುವ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನಕ್ಕೆ ಆರ್ಚರ್ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬ್ಲ್ಯಾಕ್ ಲೈವ್ಸ್ ಮ್ಯಾಟರ್ ತೀವ್ರಗೊಂಡಿರುವುದು ಸಂತಸ ನೀಡಿದೆ. ನಾನು ಯಾವುದಾದರೂ ವಿಷಯ ಕುರಿತು ಚಿಂತಕ್ರಾಂತನಾದರೆ  ಅದರ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತೇನೆ.ವರ್ಣಭೇದ ನೀತಿ ಸರಿಯಲ್ಲ. ನಿಮಗೆ ಅನಿಸಿದ್ದನ್ನು ಹೇಳಬೇಕು, ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬೆಳೆಯಲು ಬಿಡಬಾರದು ಎಂದು ಡೇಲ್ ಮೇಲ್ ಗೆ ಬರೆದಿರುವ ಅಂಕಣದಲ್ಲಿ ಆರ್ಚರ್ ಹೇಳಿದ್ದಾರೆ.