Saturday, 23rd November 2024

ಸಾರಿಗೆ ಇಲಾಖೆಯ 58 ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯ

ವದೆಹಲಿ: ಇನ್ನು ಆನ್‌ಲೈನ್‌ನಲ್ಲಿ ಡ್ರೈವಿಂಗ್‌ ಲೈಸೆನ್ಸ್‌, ವಾಹನ ನೋಂದಣಿ ಸೇರಿದಂತೆ ಸಾರಿಗೆ ಇಲಾಖೆಯ 58 ಸೇವೆಗಳು  ಲಭ್ಯವಾಗಲಿವೆ. ಸೇವೆಗಳನ್ನು ಪಡೆಯಲು ಆಧಾರ್‌ ಸಂಖ್ಯೆ ನೀಡುವ ಮೂಲಕ ಪಡೆಯಬಹುದು. ಆದರೆ, ಇದು ಕೇವಲ ಆಯ್ಕೆಯ ವಿಚಾರವಾಗಲಿದೆ.

ಇಂಥ ಕ್ರಮದಿಂದ ದೇಶದ ನಾಗರಿಕರಿಗೆ ಕ್ಷಿಪ್ರವಾಗಿ ವಾಹನ ನೋಂದಣಿ, ಮಾಲೀಕತ್ವ ವರ್ಗಾವಣೆ, ಡ್ರೈವಿಂಗ್‌ ಲೈಸೆನ್ಸ್‌, ಲರ್ನರ್ಸ್‌ ಲೈಸೆನ್ಸ್‌, ಡ್ಯುಪ್ಲಿಕೇಟ್‌ ಡ್ರೈವಿಂಗ್‌ ಲೈಸೆನ್ಸ್‌, ವಿಳಾಸ ಬದಲಾವಣೆ, ಅಂತಾರಾಷ್ಟ್ರೀಯ ಡ್ರೈವಿಂಗ್‌ ಲೈಸೆನ್ಸ್‌, ಡ್ರೈವಿಂಗ್‌ ಲೈಸೆನ್ಸ್‌ ಮರು ನವೀಕರಣಕ್ಕೆ ಇದರಿಂದ ಅನುಕೂಲವಾಗಲಿದೆ.

ಹೊಸ ವ್ಯವಸ್ಥೆಯಿಂದ ಸೇವೆಗಳನ್ನು ಕ್ಷಿಪ್ರವಾಗಿ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಹೇಳಿದೆ.

ಆನ್‌ಲೈನ್‌ ವ್ಯವಸ್ಥೆಯಿಂದಾಗಿ ಆರ್‌ಟಿಒ ಕಚೇರಿಗಳಿಗೆ ಹೋಗಿ ಸರತಿ ಸಾಲಲ್ಲಿ ನಿಲ್ಲುವು ದು ತಪ್ಪುತ್ತದೆ, ಸಮಯ ಉಳಿಯುತ್ತದೆ, ಮಧ್ಯವರ್ತಿಗಳ ಹಾವಳಿಯೂ ತಪ್ಪುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಆಧಾರ್‌ ಇಲ್ಲದೇ ಇರುವವರು ಆರ್‌ಟಿಒ ಕಚೇರಿಗಳಿಗೆ ತೆರಳಿ ಹಾಲಿ ಇರುವ ವ್ಯವಸ್ಥೆಯಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ಇದೆ.