ಈ ಹೆಜ್ಜೆಗಳು ನಿಲ್ಲುವುದಿಲ್ಲ. ಭಾರತವನ್ನು ಪುನರ್ ಜೋಡಣೆ ಮಾಡಲಿದೆ ಎಂದು ಕಾಂಗ್ರೆಸ್ ಟ್ವಿಟ್‍ನಲ್ಲಿ ತಿಳಿಸಿದೆ. ಗಾಂಧೀಜಿ ವೇಷಧಾರಿಯೊಬ್ಬರು ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿದ್ದು, ದೇಶದ ಭಾವೈಕ್ಯತೆಗೆ ಧಕ್ಕೆಯಾದಾಗಲೆಲ್ಲ ಗಾಂಧೀಜಿ ಮರು ಸಂಪರ್ಕಿಸುವ ಕೆಲಸ ಮಾಡುತ್ತಾರೆ ಎಂದು ಟ್ವೀಟ್‍ನಲ್ಲಿ ತಿಳಿಸಲಾಗಿದೆ.
ಹಾದಿ ಮಧ್ಯೆ ಯುವಕ ತಂಡವೊಂದು ಸಾಂಸ್ಕøತಿಕ ನೃತ್ಯ ಹಾಗೂ ಬೀದಿನಾಟಕಗಳ ಮೂಲಕ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ಪ್ರದರ್ಶನ ನೀಡಿತ್ತು. ಇದನ್ನು ರಾಹುಲ್ ಗಾಂಧಿ ಖುದ್ದಾಗಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದರು.
ಎಂದಿನಂತೆ ಭಾರತ್ ಜೋಡೊ ಯಾತ್ರೆಗೆ ಅಪಾರ ಪ್ರಮಾಣದ ಜನಸ್ತೋಮದ ಬೆಂಬಲ ದೊರೆತಿದೆ.