ಬೆಳಗಿನ ಜಾವ ಯಾತ್ರೆಯು ಸುಮಾರು 14 ಕಿ.ಮೀ ದೂರವನ್ನು ಕ್ರಮಿಸಿ ಕೇರಳದ ಕುಥಿಯಾಥೋಡು ಎಂಬಲ್ಲಿ ಮುಕ್ತಾಯ ಗೊಳ್ಳಲಿದೆ.
12 ದಿನಗಳಲ್ಲಿ 255 ಕಿ.ಮೀ ದೂರವನ್ನು ಯಾತ್ರೆ ಕ್ರಮಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.” ಮಂಗಳವಾರ ಭಾರತ್ ಯಾತ್ರಿಗಳು ಬೆಳಗಿನ ಅವಧಿಯಲ್ಲಿ ಚೇರ್ತಲಾ ದಿಂದ ಅಲಪ್ಪುಳ ಜಿಲ್ಲೆಯ ಕುಥಿಯಾ ಥೋಡುವರೆಗೆ 15 ಕಿ.ಮೀ ದೂರ ಕ್ರಮಿಸಲಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕರಾದ ಕೆ ಮುರಳೀಧರನ್, ಪವನ್ ಖೇರಾ, ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮತ್ತು ಶಾನಿಮೋಲ್ ಉಸ್ಮಾನ್ ಸೇರಿದಂತೆ ಇತರರು ಬೆಳಿಗ್ಗೆ ಗಾಂಧಿ ಅವರೊಂದಿಗೆ ವಾಕ್ ಮಾಡಿದರು.
ಪುರುಷರು, ಮಹಿಳೆಯರು ಮತ್ತು ಮಕ್ಕಳು ಹೆದ್ದಾರಿಯ ಉದ್ದಕ್ಕೂ ರಾಹುಲ್ ನೋಡಲು ಕಾಯುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು ಸೆ.10ರಂದು ಸಂಜೆ ಕೇರಳ ಪ್ರವೇಶಿಸಿದ ಯಾತ್ರೆ ಅಕ್ಟೋಬರ್ 1ರಂದು ಕರ್ನಾಟಕ ಪ್ರವೇಶಿಸುವ ಮುನ್ನ 19 ದಿನಗಳ ಕಾಲ ಏಳು ಜಿಲ್ಲೆಗಳಲ್ಲಿ ಹಾದು ಹೋಗಲಿದೆ.