ಇದೇ ವೇಳೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಗಳಿಸಿದ ಕಟ್ಟಡ ಕಾರ್ಮಿ ಕರ ಮಕ್ಕಳಿಗೆ ಪ್ರೋತ್ಸಾಹಧನ ಸಹ ವಿತರಿಸಲಾಗುತ್ತಿದೆ. ಜೊತೆಗೆ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೂತನ ತಂತ್ರಾಂಶ (ವೆಬ್‌ಸೈಟ್) ಲೋಕಾರ್ಪಣೆಗೊಳ್ಳಲಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಅರ್ಹ ಫಲಾನು ಭವಿಗಳಿಗೆ ಉಚಿತವಾಗಿ ಕೆಎಸ್‌ಆರ್ ಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಪಾಸ್‌ಗಳನ್ನು ವಿತರಿಸಲಾಗುತ್ತಿದೆ. ಪಾಸ್ ಪಡೆದ ಕಾರ್ಮಿಕರು ತಮ್ಮ ವಾಸ ಸ್ಥಳದಿಂದ 40 ಕಿ.ಮೀ ವ್ಯಾಪ್ತಿಯೊಳಗೆ ಪ್ರಯಾಣ ಮಾಡ ಬಹುದು.
ಪ್ರತಿ ಬಸ್ ಪಾಸ್‌ನ ಮಾನ್ಯತಾ ಅವಧಿ 3 ತಿಂಗಳು ಇರಲಿದ್ದು, ಮಾಸಿಕ ವೆಚ್ಚ 1,400 ರೂ. ಆಗಲಿದೆ. ಈ ವೆಚ್ಚವನ್ನು ಸಂಪೂರ್ಣ ವಾಗಿ ಮಂಡಳಿಯೇ ಭರಿಸಲಿದೆ. 30 ಸಾವಿರ ಕಾರ್ಮಿಕರಿಗೆ ಬಿಎಂಟಿಸಿ ಉಚಿತ ಬಸ್ ಪಾಸ್ ಸಹ ನೀಡಲಾಗುತ್ತಿದ್ದು, ಮಾಸಿಕ ಪಾಸ್ ವೆಚ್ಚ 1,050 ರೂ. ಆಗಲಿದ್ದು, ತಿಂಗಳಿಗೆ 9.45 ಕೋಟಿ ರೂ, ವರ್ಷಕ್ಕೆ 113 ಕೋಟಿ ರೂ. ವೆಚ್ಚ ತಗಲಿದ್ದು, ಇದನ್ನು ಮಂಡಳಿ ಭರಿಸಲಿದೆ.