Saturday, 23rd November 2024

ಸಚಿವ ರಾಣೆಯ ಅನಧಿಕೃತ ಕಟ್ಟಡ ನೆಲಸಮಕ್ಕೆ ನಿರ್ದೇಶನ

ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಅವರ ಬಂಗಲೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡವನ್ನು ನೆಲಸಮ ಗೊಳಿಸುವಂತೆ ಮುಂಬೈ ನಗರ ಪಾಲಿಕೆಗೆ ಬಾಂಬೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ಇದು ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಉಲ್ಲೇಖಿಸಿದೆ.

ನ್ಯಾಯಮೂರ್ತಿಗಳಾದ ಆರ್. ಡಿ. ಧನುಕಾ ಮತ್ತು ಕಮಲ್ ಖಾತಾ ಅವರ ವಿಭಾಗೀಯ ಪೀಠವು ಎರಡು ವಾರಗಳ ಅವಧಿಯಲ್ಲಿ ಅನಧಿಕೃತ ಭಾಗಗಳನ್ನು ಕೆಡವಲು ಹಾಗೂ ಒಂದು ವಾರದ ನಂತರ ನ್ಯಾಯಾಲಯಕ್ಕೆ ಅನುಸರಣೆ ವರದಿಯನ್ನು ಸಲ್ಲಿಸುವಂತೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗೆ ನಿರ್ದೇಶನ ನೀಡಿದೆ.

ಪೀಠವು ರಾಣೆಗೆ 10 ಲಕ್ಷ ರೂ. ವೆಚ್ಚ ಭರಿಸುವಂತೆ ಸೂಚಿಸಿತು. ಎರಡು ವಾರಗಳಲ್ಲಿ ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮೊತ್ತವನ್ನು ಠೇವಣಿ ಮಾಡು ವಂತೆ ಸೂಚಿಸಿತು.

ರಾಣೆ ಪರ ವಕೀಲ ಶಾರ್ದೂಲ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು ತನ್ನ ಆದೇಶ ವನ್ನು ಆರು ವಾರಗಳವರೆಗೆ ತಡೆ ಹಿಡಿಯಬೇಕೆಂದು ಕೋರಿದರು. ನ್ಯಾಯಪೀಠ ಈ ಮನವಿಯನ್ನು ತಿರಸ್ಕರಿಸಿತು.