Saturday, 23rd November 2024

ಗ್ರೀನ್, ವೇಡ್‌ ಸ್ಫೋಟಕ ಬ್ಯಾಟಿಂಗ್: ಆಸೀಸ್‌ ಶುಭಾರಂಭ

ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್.ರಾಹುಲ್​ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್​ ನಲ್ಲಿ 6 ವಿಕೆಟ್​ ನಷ್ಟಕ್ಕೆ 208 ರನ್ ಗಳಿಸಿತು.

ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 19.2 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 211 ರನ್​ ಗಳಿಸುವ ಮೂಲಕ 4 ವಿಕೆಟ್​ಗಳ ಜಯ ದಾಖಲಿಸಿ ಸರಣಿಯಲ್ಲಿ  1-0 ಅಂತರದ ಮುನ್ನಡೆ ಸಾಧಿಸಿತು.
ಆಸ್ಟ್ರೇಲಿಯಾ 19.2 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 211 ರನ್​ ಗಳಿಸುವ ಮೂಲಕ 4 ವಿಕೆಟ್​ಗಳ ಜಯ ದಾಖಲಿಸಿತು.
ಆರೋನ್ ಫಿಂಚ್ 22 ರನ್, ಕ್ಯಾಮೆರಾನ್ ಗ್ರೀನ್ 61 ರನ್, ಸ್ಟೀವನ್ ಸ್ಮಿತ್ 35 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 1 ರನ್, ಜೋಶ್ ಇಂಗ್ಲಿಸ್ 17 ರನ್, ಟಿಮ್ ಡೇವಿಡ್ 18 ರನ್, ಮ್ಯಾಥ್ಯೂ ವೇಡ್ 45 ರನ್ ಮತ್ತು ಪ್ಯಾಟ್ ಕಮ್ಮಿನ್ಸ್ 4 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಜಡೇಜಾ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಯ್ಕೆ ಆಗಿದ್ದ ಅಕ್ಷರ್ ಪಟೇಲ್​ ಇಂದು ಆಸೀಸ್​ ವಿರುದ್ಧ ಉತ್ತಮ ಬೌಲಿಂಗ್​ ದಾಳಿ ಮಾಡಿದರು. ಅವರು, 4 ಓವರ್ ಮಾಡಿ 17 ರನ್ ನೀಡಿ 3 ವಿಕೆಟ್ ಪಡೆದರು.

ಅಬ್ಬರಿಸಿದ ಪಾಂಡ್ಯ-ರಾಹುಲ್​: ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡದ ಪರ ಇಂದು ಕೆಎಲ್ ರಾಹುಲ್​ ಮತ್ತು ಆಲ್​ ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದರು. ರಾಹುಲ್​ 35 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೋರ್​ ನೆರವಿ ನಿಂದ 55 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 7 ಫೋರ್​ ಮತ್ತು 5 ಸಿಕ್ಸ್ ನೆರವಿನಿಂದ ಬರೋಬ್ಬರಿ 71 ರನ್ ಗಳಿಸಿ ಅಜೇಯರಾಗಿ ಉಳಿದರು.

ಉಳಿದಂತೆ ನಾಯಕ ರೋಹಿತ್​ ಶರ್ಮಾ 1 ಸಿಕ್ಸ್ 1 ಫೋರ್​ ನೆರವಿನಿಂದ ಕೇವಲ 11 ರನ್, ವಿರಾಟ್​ ಕೊಹ್ಲಿ 7 ಬೌಲ್​ ಆಡಿ ಕೇವಲ 2 ರನ್, ಸೂರ್ಯ ಕುಮಾರ್ ಯಾದವ್ 4 ಸಿಕ್ಸ್ ಮತ್ತು 2 ಬೌಂಡರಿ ನೆರವಿನಿಂದ 46 ರನ್. ಉಳಿದಂತೆ ಅಕ್ಷರ್ ಪಟೇಲ್​ 6 ರನ್, ದಿನೇಶ್​ ಕಾರ್ತಿಕ್​ 6 ರನ್, ಹರ್ಷಲ್ ಪಟೇಲ್​ 7 ರನ್ ಗಳಿಸಿದರು.

ಭಾರತ ಮತ್ತು ಆಸೀಸ್​ ನಡುವಿನ ಮುಂದಿನ ಪಂದ್ಯ 2ನೇ ಟಿ20 ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೆ.23ರಂದು ಶುಕ್ರವಾರ ನಡೆಯಲಿದೆ.