ಸ್ಪೋನ್ ಲೇನ್‌ನಲ್ಲಿರುವ ದುರ್ಗಾ ಭವನ ಹಿಂದೂ ಕೇಂದ್ರದ ಕಡೆಗೆ ಹೆಚ್ಚಿನ ಸಂಖ್ಯೆಯ ಜನರ ಮೆರವಣಿಗೆಯ ಮೂಲಕ ಸಾಗುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳು ತೋರಿಸಿವೆ. ಈ ವೇಳೆ ಅನೇಕರು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ.
ಬರ್ಮಿಂಗ್‌ಹ್ಯಾಮ್ ವರ್ಲ್ಡ್‌ನ ವರದಿಯ ಪ್ರಕಾರ, ಅಪ್ನಾ ಮುಸ್ಲಿಮ್ಸ್ ಎಂಬ ಸಾಮಾಜಿಕ ಮಾಧ್ಯಮ ಖಾತೆ ದುರ್ಗಾ ಭವನದ ದೇವಸ್ಥಾನದ ಹೊರಗೆ “ಶಾಂತಿಯುತ ಪ್ರತಿಭಟನೆ” ಗೆ ಕರೆ ನೀಡಿದೆ.
ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಪೂರ್ವ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಯ ಬೆನ್ನಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ. ನಗರದಲ್ಲಿನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಮತ್ತು ಅದರ ಹೊರಗಿನ ಕೇಸರಿ ಧ್ವಜವನ್ನು ಅಪರಿಚಿತ ವ್ಯಕ್ತಿಗಳು ಎಳೆದಿದ್ದಾರೆ ಎಂಬ ವರದಿಗಳೂ ಕೇಳಿ ಬಂದಿವೆ.
ಆಗಸ್ಟ್ ಅಂತ್ಯದಲ್ಲಿ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ದ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಇದನ್ನು ಅಲ್ಲಿನ ಪೋಲೀಸರು ಆಕ್ರಮಣಶೀಲತೆ ಎಂದು ಗುರುತು ಮಾಡಿ ದ್ದರು.
ಇದರ ನಂತರ, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಭಾರತೀಯ ಸಮುದಾ ಯದ ವಿರುದ್ಧದ ಹಿಂಸಾಚಾರ ಖಂಡಿಸಿ ಮತ್ತು ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಬಲವಾಗಿ ಆಗ್ರಹಿಸಿ ಹೇಳಿಕೆ ನೀಡಿತ್ತು
ಲೀಸೆಸ್ಟರ್ ಗಲಭೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ.