ಚಂಡೀಗಢ: ಪಂಜಾಬ್ ವಿಧಾನಸಭೆ ಅಧಿವೇಶನವನ್ನು ಸೆ.27ರಂದು ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಭಗವಂತ ಮಾನ್ ಗುರುವಾರ ಹೇಳಿದ್ದಾರೆ.
ವಿಶ್ವಾಸಮತ ಸಾಬೀತುಪಡಿಸಲು ಪಂಜಾಬ್‌ನ ಆಡಳಿತರೂಢ ಎಎಪಿ ಸರ್ಕಾರವು ಕರೆದಿದ್ದ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಬುಧವಾರ ಅನುಮತಿ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಪಂಜಾಬ್ ಸಿಎಂ ಭಗವಂತ ಮಾನ್, ವಿವಿಧ ವಿಷಯಗಳ ಕುರಿತು ಚರ್ಚಿಸಲು ವಿಧಾನಸಭಾ ಅಧಿವೇಶನ ಕರೆಯಲು ನಿರ್ಧ ರಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಸೆಪ್ಟೆಂಬರ್ 27ರಂದು ವಿಧಾನಸಭಾ ಅಧಿವೇಶನ ಕರೆಯಲು ಸರ್ವಾನುಮತದಿಂದ ನಿರ್ಧರಿಸ ಲಾಗಿದೆ ಎಂದು ಮಾನ್ ಹೇಳಿದ್ದಾರೆ.
ಅಧಿವೇಶನದಲ್ಲಿ ವಿದ್ಯುತ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಅದೇ ಹೊತ್ತಿಗೆ ವಿಶೇಷ ಅಧಿವೇಶನ ಕರೆಯುವ ಆದೇಶವನ್ನು ರಾಜ್ಯಪಾಲರು ರದ್ದುಗೊಳಿಸಿರುವ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿ ಸ್ಪಷ್ಟಪಡಿಸಿದರು.