Sunday, 24th November 2024

ಟೈಟಲ್‌ ರಿಪೀಟ್‌ ಆದ್ರೆ, ಹಿಸ್ಟರಿನೂ ರಿಪೀಟ್‌ ಆಗುತ್ತಾ ?

ತುಂಟರಗಾಳಿ

ಸಿನಿ ಗನ್ನಡ

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ರಿಪೀಟ್ ಟೈಟಲ್ ಇರೋ ಸಿನಿಮಾ ಬಿಡುಗಡೆ ಆಗಿದೆ. ಈ ರಿಪೀಟ್ ಟೈಟಲ್ ಇಡೋ ಮನಸ್ಥಿತಿ ಇರೋ ಸಿನಿಮಾ ಮಂದಿಯದ್ದು ಪಾಪ, ಟೈಟಲ್ ರಿಪೀಟ್ ಆದ್ರೆ, ಹಿಸ್ಟರಿ ಕೂಡಾ ರಿಪೀಟ್ ಆಗುತ್ತೆ ಅನ್ನೋ ನಂಬಿಕೆ.

ಆಗಿನ ಕಾಲದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ ಸಿನಿಮಾಗಳ ಹೆಸರನ್ನು ರಿಮೇಕ್ ಮಾಡಿದ್ರೆ ಈಗಲೂ ಹಿಸ್ಟರಿ ರಿಪೀಟ್ ಆಗುತ್ತೆ ಅನ್ನೋ ಸಣ್ಣ ಆಸೆ ಅವರದ್ದು. ಅದೇ ಧಾಟಿಯಲ್ಲಿ ಗುರುಗಳು ಹಾಕಿಕೊಟ್ಟ ದಾರಿಯಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಇರೋ ಶಿಷ್ಯರು, ಗುರು ಶಿಷ್ಯರು ಸಿನಿಮಾದ ಟೈಟಲ್ ಅನ್ನು ಈಗ ಬಳಸಿಕೊಂಡಿದ್ದಾರೆ. ಶರಣ್ ಮತ್ತು ನಂದ ಕಿಶೋರ್ ಬಳಗದ ಈ ಚಿತ್ರದ ನಿರ್ದೇಶಕ ಜಡೇಶ್ ಹಂಪಿ.

ಅಂದಹಾಗೆ ಈ ಹಳೇ ಟೈಟಲ್ ಬಳಸೋ ಸಂಪ್ರದಾಯ ಹೊಸದೇನೂ ಅಲ್ಲ. ಇದೂ ತುಂಬಾ ಹಳೆಯ ಟ್ರೆಂಡೇ. ಅದರಲ್ಲೂ ಡಾ. ರಾಜ್ ಕುಮಾರ್ ಅವರ ಸಿನಿಮಾಗಳ ಹೆಸರನ್ನು ಬಹಳಷ್ಟು ಮಂದಿ ಬಳಸಿಕೊಂಡಿದ್ದಾರೆ. ಅದು ಯಾವ ಮಟ್ಟಕ್ಕೆ ಹೋಯ್ತು ಅಂದ್ರೆ ಸತ್ಯ ಹರಿಶ್ಚಂದ್ರದಂಥ ಸಿನಿಮಾ ಹೆಸರನ್ನು ಬಳಸಿ ಅದರ ಹೆಸರು ಹಾಳು ಮಾಡಿ ದ್ದಾರೆ ಅಂತ ಅಭಿಮಾನಿಗಳು ಅಸಮಾಧನಗೊಂಡಿದ್ದರು.

ಅಲ್ಲದೆ, ಇನ್ಮೇಲೆ ಅಣ್ಣಾವ್ರ ಸಿನಿಮಾಗಳ ಹೆಸರನ್ನು ಯಾರೂ ದುರ್ಬಳಕೆ ಮಾಡಬಾರದು ಅಂತ ಪ್ರತಿಭಟನೆ ಮಾಡಿ, ಕಸ್ತೂರಿ ನಿವಾಸ ಅನ್ನೋ ಟೈಟಲ್ ದಿನೇಶ್ ಬಾಬು ಅವರ ಪಾಲಾಗುವುದನ್ನು ತಪ್ಪಿಸಿದ್ದರು. ಈ ವಿಷಯದಲ್ಲಿ ಜಾಕಿ, ಗಜೇಂದ್ರ, ಅರ್ಜುನ್, ಗುರು ಮುಂತಾದ ಅಂಬರೀಷ್ ಅವರ ಅನೇಕ ಚಿತ್ರಗಳ ಹೆಸರು ಕೂಡಾ ಗೊತ್ತೋ ಗೊತ್ತಿಲ್ಲದೆಯೋ ಸಾಕಷ್ಟು ಬಾರಿ ರಿಪೀಟ್ ಆಗಿವೆ. ಈಗ ವಿಷ್ಣುವರ್ಧನವ್ ಮತ್ತು ದ್ವಾರಕೀಶ್ ಅವರ ಗುರು ಶಿಷ್ಯರ ಸರದಿ.

ಲೂಸ್ ಟಾಕ್
ಬಸವರಾಜ ಬೊಮ್ಮಾಯಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಕಾಂಗ್ರೆಸ್ ನೋರು ನಿಮ್ಮನ್ನ ಎಲ್ಲೋ ಕಡೆ ಪೇ ಸಿಎಂ ಅಂತ ಫೇಮಸ್ ಮಾಡ್ತಾ ಇದ್ದಾರಲ್ಲ?
-ಅದೇನೋ ಅಂತಾರಲ್ಲ, ಮನೆಯಲ್ಲಿ ಗಾಂಜಾ ಹೊಡೆಯೋ ಮಕ್ಕಳನ್ನಿಟ್ಕೊಂಡು, ಸಿಗರೇಟು ಸೇದೋ ಹುಡುಗರ ಬಗ್ಗೆ ಮಾತಾಡಬಾರದು ಅಂತ ಅದನ್ನ ಕಾಂಗ್ರೆಸ್ ನೋರಿಗೆ ಹೇಳಿಕೊಡೋ ಅವಶ್ಯಕತೆ ಇದೆ.

ಸರಿ, ಊರ್ ತುಂಬಾ ಪೋಸ್ಟರ್ ಹಾಕಿ, ಎಲ್ಲಾ ಕಡೆ ನಿಮ್ಮನ್ನ ಪೂರ್ತಿ ಅವಮಾನ ಮಾಡ್ತಾ ಇದ್ದಾರಲ್ಲ ಸರ್

-ಪೂರ್ತಿ ಏನಿಲ್ಲ ರೀ, ೪೦% ಅವಮಾನ ಅಷ್ಟೇ.,

ಸರಿ ಹೋಯ್ತು, ಹೋಗ್ಲಿ, ನೀವು ಅವರಿಗೆ ಏನೂ ಹೇಳಲಿಲ್ಲವಾ?
-ಹೇಳಿದೆ, ಸಿ ಎಂ ಅಂದ್ರೆ ಚೀಫ್ ಮಿನಿಸ್ಟರ್ ಕಣ್ರೋ, ಕಮಿಷನ್ ಮಿನಿಸ್ಟರ್ ಅಲ್ಲ ಅಂತ

ಅಯ್ಯೋ, ಸಾರ್, ಅವರೇನೂ ಹಾಗಂತ ಹೇಳಿಲ್ಲ, ನೀವೇ ಸುಮ್ನೆ ಅವರಿಗೆ ಐಡಿಯಾ ಕೊಡ್ತಾ ಇದ್ದೀರ. ಸರಿ, ಸಿದ್ದರಾಮಯ್ಯ ಅವರ ಬಗ್ಗೆ ನೀವೂ ಒಂದು ಪುಸ್ತಕ ತಂದಿದ್ದೀರಲ್ಲ
-ಅಯ್ಯೋ, ನಮ್ಮದೇ ಸರಕಾರ ಇರೋದು, ಸಿದ್ದರಾಮಯ್ಯ ಮೇಲೆ ಕೇಸ್ ಹಾಕಿ ಬುಕ್ ಮಾಡ್ರೋ ಅಂದ್ರೆ, ನಮ್ಮೋರು ಅವರ ಬಗ್ಗೆ ಬುಕ್ ಮಾಡಿದ್ದಾರೆ ದಡ್ಡ ಮುಂಡೇವು.

ಓಹೋ ಹಂಗೆ ವಿಷ್ಯ, ಆದ್ರೂ ನಿಮ್ ಇಮೇಜ್ ಎಲ್ಲಾ ಹಾಳು ಮಾಡಿಬಿಟ್ರಲ್ಲ ಸರ್
-ಹೌದು, ನಂಗೂ ಹಂಗೇ ಅನ್ನಿಸ್ತು. ಗೋಡೆ ಮೇಲೆ ಹಾಕಿರೋ ಪೋಸ್ಟರ್‌ಗಳಲ್ಲಿ ನನ್ನ ಇಮೇಜ್ ಕ್ವಾಲಿಟಿ ಸರಿ ಇಲ್ಲ, ತುಂಬಾ ಬ್ಲರ್ ಆಗಿದೆ. 

ನೆಟ್ ಪಿಕ್ಸ್
ಖೇಮು ಹುಟ್ಟಾ ಕುರುಡ. ಆದ್ರೆ ಜೊತೆಗೆ ಹುಟ್ಟಾ ಕುಡುಕ. ಊರಲ್ಲಿರೋ ಎಲ್ಲಾ ಬಾರುಗಳು, ಪಬ್ಬುಗಳು ಅವನಿಗೆ ಚೆನ್ನಾಗಿ ಗೊತ್ತಿದ್ದವು. ಕುರುಡನಾದ್ರೂ ಹೋದ ಕಡೆಯ ಹುಡುಗಿಯರನ್ನ ಪಟಾಯಿಸಿ ಪ್ಲೇ ಬಾಯ್ ಎನಿಸಿಕೊಂಡಿದ್ದ. ಹೀಗಿದ್ದ ಖೇಮು ಒಂದಿನ ಒಂದು ಹೊಸ ಪಬ್ಬಿಗೆ ಹೋದ. ಖೇಮುಗೆ ಒಂದು ಸ್ಪೆಷಲ್ ಕಲೆ ಇತ್ತು.

ಏನಂದ್ರೆ ಅಲ್ಲಿ ಕುಡಿಯುವಾಗ ತಿನ್ನೋಕೆ ಅಂತ ಫುಡ್ ತರಿಸುವಾಗ ಅವನು ಆ ಡಿಷ್‌ನಲ್ಲಿ ಅದ್ದಿ ತೆಗೆದ ಸ್ಪೂನ್ ಅನ್ನು ಮೂಸಿ ನೋಡಿ ಅದು ಯಾವ ಡಿಷ್ ಎಂದು ಕಂಡು ಹಿಡಿದು ಆಡರ್ರ‍ ಮಾಡುತ್ತಿದ್ದ. ಅಂದು ಕೂಡಾ ಒಂದು ಹೊಸ ಪಬ್ಬಿಗೆ ಹೋಗಿದ್ದ ರಿಂದ ವೈಟರ್‌ನ ಕರೆದು, ಡ್ರಿಂಕ್ಸ್ ಹೇಳಿದ. ಸೈಡ್ ಡಿಶ್ ಏನು ಕೊಡ್ಲಿ ಅಂತ ಅವನು ಕೇಳಿದಾಗ, ಖೇಮು ಹೇಳಿದ, ನೀವು ತಯಾರಿಸಿದ ಡಿಶ್‌ನಲ್ಲಿ ಇಟ್ಟಿರೋ ಸ್ಪೂನ್ ತಗೊಂಡ್ ಬಾ. ಸ್ಮೆಲ್ ನೋಡಿ ಹೇಳ್ತೀನಿ ಅಂದ. ವೈಟರ್‌ಗೆ ಆಶ್ಚರ್ಯ ಆದ್ರೂ,. ಸರಿ ಅಂತ ಒಳಗೆ ಹೋಗಿ ಒಂದು ಸ್ಪೂನ್ ತಗೊಂಡ್ ಬಂದು ಕೊಟ್ಟ.

ಖೇಮು ಅದನ್ನು ಮೂಸಿ ನೋಡಿ, ಸರಿ ಈ ಚೈನೀಸ್ ಶೆಜ್ವಾನ್ ಫುಡ್ ಚಿಕನ್ ಚೆನ್ನಾಗಿರುತ್ತೆ, ಒಂದ್ ಪ್ಲೇಟ್ ತಗೊಂಡ್ ಬಾ ಅಂದ. ವೈಟರ್‌ಗೆ ಆಶ್ಚರ್ಯ ಆಯ್ತು. ಸರಿ ಒಂದು ಪ್ಲೇಟ್ ಅದೇ ಚಿಕನ್ ತಂದುಕೊಟ್ಟ. ಖೇಮು ಮುಂದಿನ ಬಾರಿ ಇನ್ನೊಂದು ಡಿಷ್ ಆರ್ಡರ್ ಮಾಡುವಾಗ ಮತ್ತೆ ಸ್ಪೂನ್ ತಗೊಂಡ್ ಬಾ ಅಂದ. ಈ ಬಾರಿ ಅವನನ್ನು ಆಟ ಆಡಿಸಬೇಕು ಅಂತ ಡಿಸೈಡ್ ಮಾಡಿದ ವೈಟರ್, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಹೆಂಡತಿಯನ್ನು ಕರೆದು, ಈ ಸ್ಪೂನ್ ಅನ್ನು ನಿನ್ನ ಬಾಯಲ್ಲಿ ಒಂದು ಸಲ ಚೀಪಿ, ಆಮೇಲೆ ಅದನ್ನು ನಿನ್ನ ಲಿಪ್‌ಸ್ಟಿಕ್‌ಗೆ ಒರೆಸಿ ಕೊಡು ಅಂದ.

ಹೆಂಡ್ತಿ ಯಾಕೆ ಅಂದ್ಳು. ಸುಮ್ನೆ ಹೇಳಿದಷ್ಟು ಮಾಡು ಅಂತ ಮಾಡಿಸಿ ಆ ಸ್ಪೂನ್ ಅನ್ನು ತಗೊಂಡ್ ಬಂದು ಖೇಮುಗೆ ಕೊಟ್ಟ. ಖೇಮು ಅದನ್ನು ಮೂಸಿ ನೋಡಿ ಹೇಳಿದ ಓ, ಲಿಂಡಾ ಈವಾಗ ನಿಮ್ ಹೋಟ್ಲಲ್ಲಿ ಕೆಲ್ಸ ಮಾಡ್ತಾ ಇದ್ದಾಳಾ?

ಲೈನ್ ಮ್ಯಾನ್
ಮಕ್ಕಳ ಭಾಷೆ

ಖೇಮು- ಕೊಳಿ ಕೊಯ್ದ್ರೇನೋ?

ಮರಿಖೇಮು- ಇನ್ನೂ ಇ ಪಪ್ಪಾ, ಬರೀ ಡ್ರೆಸ್ ಬಿಚ್ಚವ್ರೇ

ಆಟೋ ಗ್ಯಾಸ್ ರೇಟ್ ಜಾಸ್ತಿ ಆದ್ರೆ ಮೋದಿ ಏನ್ ಮಾಡ್ತಾರೆ?

-ಪರೀಕ್ಷಾ ಪೇ ಚರ್ಚಾ ಬಿಟ್ಟು ರಿಕ್ಷಾ ಪೇ ಚರ್ಚಾ ಮಾಡ್ತಾರೆ

ಐಫೋನ್ ಎಷ್ಟೇ ಫೇಮಸ್ ಇದ್ರೂ ಇದು ನನ್ನ ಮೊಬೈಲ್ ಅಂತ ಹೆಮ್ಮೆಯಿಂದ ಹೇಳಿಕೊಳ್ಳೋಕೆ ಸಾಧ್ಯ ಆಗೋ ಬ್ರ್ಯಾಂಡ್

’MI’’ ಪೋನ್ Paycm ಪೋಸ್ಟರ್‌ಗೆ ಆಪ್ ನವರು ಕಾಂಗ್ರೆಸ್‌ಗೆ ಕೌಂಟರ್ ಕೊಟ್ಟಿದ್ದಾರಂತೆ
-‘ಯಾರು? Paytm ಆಪ್ ನವರಾ?’

ಸ್ಮೋಕಿಂಗ್ ಸ್ಟೋರಿ
ತುಂಬಾ ಸಿಗರೇಟ್ ಸೇದುತ್ತಿದ್ದ ಹುಡುಗನಿಗೆ ಕ್ಯಾನ್ಸರ್ ಬಂತು. ಡಾಕ್ಟರು, ಇನ್ನು ಮುಗೀತು, ನಮ್ ಕೈಲಿ ಏನೂ  ಮಾಡೋ ಕಾಗಲ್ಲ, ಬೇಕಿದ್ರೆ ಚಿಕಿತ್ಸೆ ಮಾಡ್ತೀವಿ, ಆದ್ರೆ ಪ್ರಯೋಜನ ಇಲ್ಲ ಅಂದ್ರು. ಆದ್ರೆ ಆ ಹುಡುಗ, ಹಠ ಬಿಡಲಿಲ್ಲ, ನನಗೆ ಬದುಕಬೇಕು
ಅನ್ನೋ ಜೀವನೋತ್ಸಾಹ, ಆತ್ಮ ಸ್ಥೈರ್ಯ ತುಂಬಾ ಇದೆ. ಅದಕ್ಕಿಂತ ಹೆಚ್ಚಾಗಿ ಇಚ್ಚಾ ಶಕ್ತಿ ಇದೆ. ನೀವು ಚಿಕಿತ್ಸೆ ಮುಂದುವರಿಸಿ, ನಾನು ಬದುಕೇ ಬದುಕ್ತೀನಿ ಅಂದ. ಡಾಕ್ಟರಿಗೂ ಹೊಸ ಹುಮ್ಮಸ್ಸು ಬಂತು. ಅದೇ ಹುರುಪಿನಿಂದ ಚಿಕಿತ್ಸೆ ಮುಂದುವರಿಸಿದ್ರು. ಆದ್ರೆ, ಮರುದಿನವೇ ಆ ಹುಡುಗ ಸತ್ತು ಹೋದ.

Moral of the story – ವಿಲ್ ಪವರ್‌ಗಿಂತ ‘ವಿಲ್ಸ’ ಪವರ್ ದೊಡ್ದು ಎಡ ಬಲ ಜಗಳ ಬಿಜೆಪಿಯವ್ರು ‘ಇ ದಿನ ರಾಮ ಅಂತಿದ್ರು. ಈಗ ಸೀತಾ ಅಂತಿದ್ದಾರೆ’ -‘ಲೋ, ಸುಮ್ನೆ ಮೋದಿ ಕಾಲೆಳಿಬೇಕು ಅಂತ ಏನೇನೋ ಹೇಳ್ಬೇಡ, ಅದು ಸೀತಾ ಅಲ್ಲ, ಚೀತಾ ಕಣ್ಲಾ’ ಐಪೋನ್ ಆಸಾಮಿ ಕೈಯಲ್ಲಿ ಹೊಸ ಐಫೋನ್ ಹಿಡ್ಕೊಂಡು ಒಬ್ಬ ಹುಡುಗ ಗೂಡಂಗಡಿಗೆ ಬಂದ.

ಐಫೋನ್ ಇಟ್ಕೊಂಡು ಇಂಥ ಅಂಗಡಿಗೆ ಬಂದಿದಾನಲ್ಲ ಅಂತ ನೋಡ್ತಾ ಇದ್ರೆ, ಸೀದಾ ಬಂದು ಅಣ್ಣಾ 2 ಫೇಕ್ ಕೊಡಿ ಅನ್ನೋದಾ?

-ಎಲ್ರೂ ಐಫೋನ್ ತಗೋಳ್ಳೋಕಂತ ಕಿಡ್ನಿನೇ ಮಾರಲ್ಲ, ಕೆಲವರು, ಲಂUನೂ ಮಾರ್ಕೊತಾರೆ.