ಸಂದರ್ಶನ: ವೆಂಕಟೇಶ್ ಆರ್.ದಾಸ್
ದಸರಾ ಎಂದರೆ ರಾಜ್ಯಕ್ಕೆ ಬಹುದೊಡ್ಡ ಸಂಭ್ರಮದ ಹಬ್ಬ. ಜತೆಗೆ ರಾಜ್ಯದ ಮತ್ತು ದೇಶದ ಘನತೆಯ ಪ್ರತೀಕವಾಗಿ ಪ್ರತಿ ವರ್ಷ ಆಚರಣೆಯಾಗುತ್ತಿದೆ. ಕರೋನಾ ಸಂದರ್ಭದಲ್ಲಿ ಕಳೆದೆರೆಡು ವರ್ಷಗಳಿಂದ ಸರಳವಾಗಿ ನಡೆಯುತ್ತಿದ್ದ ದಸರಾಗೆ ಈ ಬಾರಿ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ. ಹೀಗಾಗಿ, ಈ ಬಾರಿಯ ದಸರಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ದಸರಾದ ಉಸ್ತುವಾರಿ ಹೊತ್ತಿರುವ ಮೈಸೂರು ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಿದ್ಧತೆ ಮತ್ತಿತರ ಅಂಶಗಳ ಕುರಿತು ‘ವಿಶ್ವವಾಣಿ’ ಜತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
? ನಾಡಹಬ್ಬ ಆಚರಣೆಯ ಸಿದ್ಧತೆಗಳು ಹೇಗೆ ನಡೆದಿವೆ?
ದಸರಾ ಎಂಬುದೇ ನಮ್ಮ ರಾಜ್ಯದ ಹೆಮ್ಮಯ ಆಚರಣೆ. ನಾಡಹಬ್ಬ ಎಂದೇ ಖ್ಯಾತವಾದ ದಸರಾಗೆ ಸಹಜವಾಗಿಯೇ ಸಿದ್ಧತೆ ಭರ್ಜರಿಯಾಗಿರುತ್ತದೆ. ಕರೋನಾ ಕಾರಣದಿಂದಾಗಿ ಕಳೆದೆರೆಡು ವರ್ಷಗಳಲ್ಲಿ ಸರಳವಾಗಿ ದಸರಾವನ್ನು ಆಚರಣೆ ಮಾಡಲಾಗಿತ್ತು. ಈ ಭಾರಿ ಅದ್ದೂರಿಯಾಗಿ ಆಚರಣೆ ಮಾಡಲು ಸರಕಾರ ತೀರ್ಮಾನಿಸಿದೆ. ಮೊಟ್ಟಮೊದಲ ಬಾರಿಗೆ ದೇಶದ ಅತ್ಯುನ್ನತ ಹುದ್ದೆಗೆ ಏರಿದ ಬುಡಕಟ್ಟು ಸಮುದಾಯದ ಮಹಿಳೆಗೆ ಗೌರವ ಸಲ್ಲಿಸುವುದಕ್ಕಾಗಿ ರಾಷ್ಟ್ರಪತಿ ಅವರನ್ನು ದಸರಾ ಉದ್ಘಾಟನೆಗೆ ಅಹ್ವಾನ ಮಾಡಲಾ ಗಿದೆ. ಹೀಗಾಗಿ, ಈ ಬಾರಿಯ ದಸರಾವನ್ನು ವಿಶೇಷ ಎಂದೇ ಹೇಳಬಹುದು. ಈಗಾಗಲೇ ಸಿಎಂ ಬೊಮ್ಮಾಯಿ ಅವರು ಆಗಮಿಸಿದ್ದು, ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಗಮಿಸಿ ರಾಷ್ಟ್ರಪತಿ ಅವರ ಆಗಮನದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ಧತೆಗಳನ್ನು ವೀಕ್ಷಿಸಿದ್ದಾರೆ.
ನಮ್ಮ ಸರಕಾರದ ಎಲ್ಲ ಸಚಿವರು ದಸರಾ ಸಿದ್ಧತೆಗಳ ಬಗ್ಗೆ ಗಮನಹರಿಸಿದ್ದಾರೆ.
? ರಾಷ್ಟ್ರಪತಿಗಳ ಆಗಮನದಿಂದ ವಿಶೇಷ ಮೆರುಗು ಬಂದಿದೆಯೇ?
ಖಂಡಿತವಾಗಿಯೂ ವಿಶೇಷ ಮೆರುಗು ಬಂದಿದೆ. ಪ್ರತಿ ವರ್ಷ ರಾಷ್ಟ್ರಕ್ಕೆ ಅತ್ಯುನ್ನತ ಸೇವೆ ಸಲ್ಲಿಸಿದ ನಾಡಿನ ಗಣ್ಯರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿತ್ತು. ಈ ಬಾರಿ ನಮ್ಮ ಸರಕಾರ ದೇಶದ ಪ್ರಥಮ ಪ್ರಜೆಗೆ ಉದ್ಘಾಟನೆಯ ಅವಕಾಶ ನೀಡಿದೆ. ಅವರು ಬುಡಕಟ್ಟು ಸಮುದಾಯದಿಂದ ಬಂದು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವುದು ದೇಶವೇ ಹೆಮ್ಮೆ ಪಡುವ
ಸಂಗತಿ. ಹೀಗಾಗಿ, ಅವರಿಗೆ ನಾಡಹಬ್ಬ ಉದ್ಘಾಟನೆಯ ಗೌರವ ನೀಡಲಾಗುತ್ತಿದೆ. ರಾಷ್ಟ್ರಪತಿಯವರ ಆಗಮನದಿಂದಾಗಿ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಮೈಸೂರು ದಸರಾದ ಕಳೆ ಮತ್ತಷ್ಟು ಹೆಚ್ಚಾಗಲಿದೆ.
? ರಾಷ್ಟ್ರಪತಿಯವರ ಆಗಮನ, ಸ್ವಾಗತಕ್ಕೆ ಸಿದ್ಧತೆ ಹೇಗೆ ನಡೆದಿದೆ?
ರಾಷ್ಟ್ರಪತಿಗಳು ಮೊದಲಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅವರನ್ನು ಮುಖ್ಯಮಂತ್ರಿಗಳು, ಕೇಂದ್ರ ಸಚಿವರು,
ರಾಜ್ಯದ ಸಚಿವರು ಹಾಗೂ ಸ್ಥಳೀಯ ಸಂಸದರು ಮತ್ತು ಶಾಸಕರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ತೆರಳಲಾಗುತ್ತದೆ.
ಅಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ಅವರಿಗೆ ಪೂಜೆ ಸಲ್ಲಿಸಲಿರುವ ರಾಷ್ಟ್ರಪತಿಯವರು ನಂತರ ಬೆಟ್ಟದಿಂದ ಅರಮನೆ
ಮೈದಾನಕ್ಕೆ ತೆರಳಿದ್ದಾರೆ. ನಂತರ ನಾಡಹಬ್ಬದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವೇದಿಕೆಯ ಕಾರ್ಯ ಕ್ರಮದಲ್ಲಿ ಆರು ಜನ ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ೫ ಜನ ರಾಜ್ಯದ ಮಂತ್ರಿಗಳು ಮಾತ್ರವೇ ಭಾ ಗವಹಿಸಲಿದ್ದಾರೆ. ರಾಷ್ಟ್ರಪತಿಗಳ ಜತೆಗೆ ಬುಡಕಟ್ಟು ಸಮುದಾಯದ ಕೆಲವು ಜನ ಭಾಗವಹಿಸಲು ಅವಕಾಶ ನೀಡಲಾಗಿದೆ. ೧೪ ಜನರು ಅವರೊಂದಿಗೆ ಫೋಟೋ ಸೆಷನ್ನಲ್ಲಿ ಭಾಗವಹಿಸಲಿದ್ದಾರೆ.
? ಸರಕಾರಕ್ಕೆ ರಾಜವಂಶಸ್ಥರ ಸಹಕಾರ ಹೇಗಿದೆ?
ಇದು ನಾಡಿನ ಹೆಮ್ಮೆಯ ಆಚರಣೆ. ಇಲ್ಲಿ ಯಾವುದೇ ವೈಯಕ್ತಿಯ ಹಿತಾಸಕ್ತಿಯಾಗಲೀ, ವೈಯಕ್ತಿಕ ಅಭಿಪ್ರಾಯವಾಗಲಿ
ಇಲ್ಲ. ಪ್ರತಿ ಸಲವೂ ರಾಜಮನೆತನ ಸರಕಾರದೊಂದಿಗೆ ಕೈಜೋಡಿಸಿ ಅದ್ದೂರಿಯ ನಾಡಹಬ್ಬ ಆಚರಣೆಗೆ ಸಹಕರಿಸಿದೆ. ಅದೇ ರೀತಿ ಈ ವರ್ಷವೂ ಸರಕಾರದೊಂದಿಗೆ ಸಹಕರಿಸಿದ್ದಾರೆ. ಎಂದಿನಂತೆ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ಅದಾಗ್ಯೂ ಸರಕಾರದ ಅಧಿಕೃತ ಕಾರ್ಯಕ್ರಮಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ನಾನು ಖುದ್ದಾಗಿ ತೆರಳಿ ಅಧಿಕೃತ ಆಹ್ವಾನ ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿಕೊಂಡಿದ್ದೇವೆ.
ರಾಷ್ಟ್ರಪತಿಯವರು ಆಗಮಿಸುವ ಕಾರ್ಯಕ್ರಮವಾದ್ದರಿಂದ ಹೆಚ್ಚಿನ ಸಂತಸದಿಂದ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸರಕಾರದ ಜತೆಗೆ ಎಲ್ಲ ರೀತಿಯ ಸಹಕಾರದಿಂದ ಅದ್ದೂರಿ ಆಚರಣೆಗೆ ಸಿದ್ಧ ಎಂದು ತಿಳಿಸಿದ್ದಾರೆ. ಸ್ವಾಗತ ಸಮಿತಿಯ ಜತೆಗೆ ರಾಷ್ಟ್ರಪತಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಇನ್ನಿತರ ಗಣ್ಯರಿಗೆ ಆಹ್ವಾನ ನೀಡಿದ್ದೇವೆ.
? ಅಹಿತಕರ ಘಟನೆ ನಡೆಯದಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?
ನಾಡಹಬ್ಬದಲ್ಲಿ ಎಂದೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಅಂತಹ ಸಂಪ್ರದಾಯವೂ ಇಲ್ಲಿಲ್ಲ. ಆದರೂ, ಸುರಕ್ಷಿತ,
ದೃಷ್ಟಿಯಿಂದ ಅಗತ್ಯ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ನಗರದ ೧,೨೫೫, ಹೊರ ಜಿಗಳಿಂದ
೩,೫೮೦ ಪೊಲೀಸ್ ಅಽಕಾರಿ ಮತ್ತು ಸಿಬ್ಬಂದಿ, ೬೫೦ ಗೃಹ ರಕ್ಷಕ ಸಿಬ್ಬಂದಿ ಸೇರಿ ಒಟ್ಟು ೫,೪೮೫ ಪೊಲೀಸರನ್ನು ಭದ್ರತೆಗೆ
ನಿಯೋಜಿಸಲಾಗಿದೆ. ಮೊಬೈಲ್ ಕಮಾಂಡ್ ಸೆಂಟರ್ ಬಸ್ ಬಳಸಲಾಗುತ್ತಿದೆ. ಇದರಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇದೆ.
ಅರಮನೆ ಮತ್ತು ಬನ್ನಿಮಂಟಪದ ಎ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಽಕಾರಿಗಳಿಗೆ ಬಾಡಿ ವೋರ್ನ್ ಕ್ಯಾಮೆರಾ
ನೀಡಲಾಗಿದೆ. ಪ್ರಮುಖ ಕಾರ್ಯಕ್ರಮದ ಸ್ಥಳಗಳಲ್ಲಿ ಡ್ರೋಣ್ ಕ್ಯಾಮೆರಾಗಳ ಕಣ್ಗಾವಲು ಇರಿಸಲಾಗಿದೆ. ಕಾರ್ಯಕ್ರಮದ
ಸ್ಥಳಗಳಲ್ಲಿ ಪೊಲೀಸರು ಎದ್ದು ಕಾಣುವ ರೀತಿ ಎತ್ತರದ ಅಂಕಣ ನಿರ್ಮಿಸಲಾಗಿದೆ. ೧೨ ಅಗ್ನಿಶಾಮಕ ದಳ ಮತ್ತು ೮ ಆಂಬ್ಯು ಲೆನ್ಸ್ ನಿಯೋಜಿಸಲಾಗಿದೆ. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ೧೩,೧೪೦ ಸಿಸಿ ಟಿವಿ ಕ್ಯಾಮೆರಾಗಳಿವೆ. ಅರಮನೆ, ಬನ್ನಿ ಮಂಟಪದ ಮೈದಾನ ಮೆರವಣಿಗೆ ಮಾರ್ಗ ಮತ್ತು ಪ್ರಮುಖ ಸ್ಥಳಗಳಲ್ಲಿ ೧೧೦ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಇವುಗಳಲ್ಲಿ ದಿನದ ೨೪ ಗಂಟೆಯೂ ರೆಕಾರ್ಡ್ ಆಗುವಂತೆ ವ್ಯವಸ್ಥೆ ಮಾಡಲಾಗಿದೆ.
? ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾವ ರೀತಿ ಅವಕಾಶ ಮಾಡಿಕೊಡಲಾಗಿದೆ?
ಪ್ರತಿ ವರ್ಷದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯುವ ದಸರಾಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಇಲ್ಲಿ
ನೂರಾರು ಕಲಾವಿದರನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಮೈದಾನದಲ್ಲಿ ಸೆ.೨೬ರಿಂದ ಅ.೨ರವರೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಕಲಾಭವನದಲ್ಲಿ
ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಜಿಲ್ಲಾಡಳಿತ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಿದೆ. ಎಲ್ಲಿಯೂ
ವಿವಾದಕ್ಕೆ ಅವಕಾಶವಾಗದಂತೆ ಕಲಾವಿದರ ಆಯ್ಕೆ ಮಾಡಲಾಗಿದೆ.ಪ್ರತಿ ಬಾರಿಗಿಂತ ಉತ್ತಮವಾಗಿ ಕಾರ್ಯಕ್ರಮಗಳು ನಡೆ ಯಲು ಅಗತ್ಯವಾದ ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಕಾರ್ಯಕ್ರಮದ ನಿರ್ವಹಣೆಗಾಗಿ ಜಿಲ್ಲಾಡಳಿತದ ಅಧಿಕಾರಿಗಳು,
ಸಿಬ್ಬಂದಿ ಮತ್ತು ಸ್ವಯಂ ಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ.