2021ರಲ್ಲಿ 20 ಟಿ20 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕಿಸ್ತಾನ ವಿಶ್ವ ದಾಖಲೆ ಮಾಡಿತ್ತು. ಭಾರತವು ತವರು ನೆಲದಲ್ಲೇ 10 ಟಿ20 ಪಂದ್ಯಗಳನ್ನು ಗೆದ್ದಿದೆ.
2019 ರಲ್ಲಿ 21 ಗೆಲುವು ಮತ್ತು ನಾಲ್ಕು ಸೋಲುಗಳನ್ನು ದಾಖಲಿಸಿದ ಥಾಯ್ಲೆಂಡ್ ಮಹಿಳಾ ತಂಡದೊಂದಿಗೆ ಭಾರತ ಸಮಬಲ ಸಾಧಿಸಿದೆ.
ಭಾನುವಾರ ಆಸ್ಟ್ರೇಲಿಯಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮಿಂಚಿನಾಟ (69) ಹಾಗೂ ವಿರಾಟ್ ಕೊಹ್ಲಿ (63) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಭಾರತ ತಂಡವು ರೋಚಕ ಜಯ ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಆಸ್ಟ್ರೇಲಿಯಾವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 186 ರನ್ ಗಳಿಸಿ ಕಠಿಣ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಆತಿಥೇಯ ತಂಡವು ಪಂದ್ಯದಲ್ಲಿ ಇನ್ನೂ ಒಂದು ಎಸೆತ ಬಾಕಿಯಿರುವಾಗಲೇ 6 ವಿಕೆಟ್‌ಗಳಿಂದ ಜಯಿಸಿತು.
ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಇಲ್ಲಿ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಕೊಹ್ಲಿ ಚೆಂದದ ಹೊಡೆತಗಳನ್ನೂ ಪ್ರಯೋಗಿಸಿದರು. ಸೂರ್ಯಕುಮಾರ್ ಮಾತ್ರ ವಿರಾಟ್‌ಗಿಂತಲೂ ವೇಗವಾಗಿ ರನ್ ಗಳಿಸಿದರು.