ಬುಧವಾರ ಮಾತನಾಡಿ, ಪಿಎಫ್‌ಐ ಸಂಘಟನೆ ಕಾನೂನು ಬಾಹಿರ ಚಟುವಟಿಕೆ, ಉಗ್ರರ ಜೊತೆ ಸಂಬಂಧ, ಹತ್ಯೆ, ಹವಾಲ ದಂಧೆ, ಯುವಕರಿಗೆ ದಾರಿ ತಪ್ಪಿಸುವ ಕೆಲಸ ಮಾಡು ತ್ತಿತ್ತು. ಇವುಗಳ ಜೊತೆಗೆ ಸಾಕಷ್ಟು ಹಿಂದೂ ಯುವಕರ ಹತ್ಯೆ ಮಾಡುತ್ತಿದ್ದರು. ಈ ಸಂಘಟನೆಯನ್ನು ನಿಷೇಧ ಮಾಡಿರುವುದು ಎಲ್ಲಾ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ವಾಗಿದೆ ಎಂದು ತಿಳಿಸಿದರು.
“ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಆಗ ನಾನು ಪರಿಷತ್ತಿನ ವಿಪಕ್ಷ ನಾಯಕನಾಗಿದ್ದೆ. ವಿಧಾನ ಪರಿಷತ್ತಿನಲ್ಲಿ ಪಿಎಫ್‌ಐ ನಿಷೇಧದ ವಿಚಾರ ಪ್ರಸ್ತಾಪವಾಗಿತ್ತು. ಆಗ ಸಿದ್ದರಾಮಯ್ಯ, ಕೇಂದ್ರದಲ್ಲಿ ನಿಮ್ಮದೆ ಸರಕಾರವಿದೆ. ಪಿಎಫ್‌ಐ ಸಂಘಟನೆ ಯನ್ನು ನಿಷೇಧ ಮಾಡಿಸಿ ಎಂದಿದ್ದರು. ಈಗ ನಮ್ಮ ರಾಜ್ಯ ಸರಕಾರ ಪ್ರಸ್ತಾವನೆ ಕಳುಹಿಸಿದ್ದು ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ” ಎಂದರು.