ಮಾನ್ವಿ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿ ಅಂತರಾಜ್ಯ ಕುರಿ ಕಳ್ಳರನ್ನು ಹಿಡಿಯು ವಲ್ಲಿ ಯಶಸ್ವಿಯಾಗಿದ್ದು ಆರೋಪಿತರಿಂದ ಕದ್ದ ಕುರಿ ಮಾರಾಟ ಮಾಡಿದ ಒಂದು ಲಕ್ಷ ಹತ್ತು ಸಾವಿರ ನಗದು ಹಣವನ್ನು ವಶಪಡಿಸಿಕೊಂಡು ಕಾನೂನುಕ್ರಮ ಕೈಗೊಳ್ಳಲಾಗಿದೆ ಎಂದು ಪಿ.ಐ.ಮಹಾದೇವಪ್ಪ ಪಂಚಮುಖಿ ತಿಳಿಸಿದರು
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ಮಾತನಾಡಿ ದದ್ದಲ ಗ್ರಾಮದ ಶೇಖರಪ್ಪನವರ ಜಮೀನಿ ನಲ್ಲಿ ಇದ್ದ ೫೦ ಕುರಿಗಳು ಕಳ್ಳತನ ವಾಗಿರುವ ಬಗ್ಗೆ ದೂರು ನೀಡಿದ್ದರಿಂದ ತನಿಖೆ ನಡೆಸಲಾಗಿ ಅಂತರಾಜ್ಯ ಗಳಲ್ಲಿ ಕುರಿಗಳ ವ್ಯಾಪಾರ ಮಾಡುವ ವೃತ್ತಿಯಲ್ಲಿರುವ ಆರೋಪಿಗಳಾದ ಸೀಮಾಂಧ್ರ ಪ್ರದೇಶದಲ್ಲಿನ ಸೂಗೂರು ಗ್ರಾಮದ ಕುರಿವ್ಯಾಪಾರ ಮಾಡುವ ವೃತ್ತಿಯ ಮಲ್ಲಿಕಾರ್ಜುನ, ಕಡಿವೇಲು ಗ್ರಾಮದ ಹನುಮಂತ, ಎನ್ನುವವರು ರಾಜ್ಯದಲ್ಲಿನ ಗಡಿ ಭಾಗದಲ್ಲಿನ ಗ್ರಾಮಗಳಲ್ಲಿ ಸಂಚಾರಿ ಕುರಿಗಾಯಿಗಳು ಹಾಗೂ ರೈತರು ಜಮೀನುಗಳಲ್ಲಿ ಕುಡಿಹಾಕಿರುವ ಕುರಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಪಡೆದು ಆರೋಪಿಗಳನ್ನು ದಸ್ತಿಗಿರಿ ಮಾಡಿ ಅವರಿಂದ ಕದ್ದ ಕುರಿಗಳನ್ನು ಮಾರಿದ ೧ಲಕ್ಷ ಹತ್ತುಸಾವಿರ ರೂಗಳನ್ನು ವಶಪಡಿಸಿಕೊಂಡು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಚಾರಣೆಯಲ್ಲಿ ಪಿ.ಎಸ್.ಐ ಎಂ. ವೆಂಕಟೇಶ,ಪೊಲೀಸ್ ಸಿಬ್ಬಂದಿಗಳಾದ ದೇವರಾಜ, ಹುಸೇನ್ ಸಾಬ್, ಬಸವರಾಜ್, ರಮೇಶ, ಲಕ್ಷö್ಮಣ, ಸೂಗಪ್ಪ, ಬಸವನಗೌಡ ಭಾಗವಹಿಸಿದ್ದರು.