Saturday, 23rd November 2024

ಅಗ್ನಿವೀರ್ ನೇಮಕಾತಿ ರ‍್ಯಾಲಿ ಮೇಲೆ ದಾಳಿ ಸಂಚು: ಉಗ್ರರ ಹತ್ಯೆ

ನವದೆಹಲಿ: ಕೇಂದ್ರ ಸರ್ಕಾರದ ಯೋಜನೆ ಅಗ್ನಿವೀರ್ ನೇಮಕಾತಿ ರ‍್ಯಾಲಿ ಮೇಲೆ ದಾಳಿ ಮಾಡಲು ಉಗ್ರರು ಸಂಚು ಹಾಕಿದ್ದು, ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.

ಜಮ್ಮು ಕಾಶ್ಮೀರದ ಬರಾಮುಲ್ಲಾದಲ್ಲಿ ಜೈಶ್ ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ. ರ‍್ಯಾಲಿ ಮೇಲೆ ದಾಳಿ ನಡೆಸುವ ಸಂಚು ಹಾಕಿದ್ದರು. ಯಡಿಪೋರಾ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದ್ದು, ದಾಳಿ ವೇಳೆ ಎರಡು ಮನೆಗಳು ಧ್ವಂಸವಾಗಿವೆ.

ಉಗ್ರರು ಅಡಗಿರುವ ಖಚಿತ ಮಾಹಿತಿ ಮೇಲೆ ಎಸ್‌ಎಸ್‌ಬಿ ಮತ್ತು ಭಾರತೀಯ ಸೇನೆಯು ಶೋಧ ಕಾರ್ಯ ನಡೆಸಿದೆ. ಉಗ್ರರು ಗುಂಡು ಹಾರಿಸಿದ್ದು, ಸೇನೆ ಪ್ರತಿದಾಳಿ ಮಾಡಿದೆ.