ಅರ್ಜಿ ವಿಚಾರಣೆ ನಡೆಸಿದ ನ್ಯಾ.ಯೋಗೇಶ್ ಖನ್ನಾ, ‘ಎಲ್ಲ ವಾಸ್ತವಾಂಶಗಳನ್ನು ಪರಿ ಗಣಿಸಿಯೇ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಪ್ರಕರಣವನ್ನು ವರ್ಗಾಯಿಸಿದ್ದಾರೆ’ ಎಂದರು.
‘ಈ ನಿರ್ಧಾರ ಕೈಗೊಳ್ಳುವ ವೇಳೆ ಕಾನೂನು ಪಾಲನೆಯಾಗಿಲ್ಲ ಎನ್ನಲಾಗದು ಅಥವಾ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯ ಇದೆ ಎಂದು ಹೇಳಲಾಗದು’ ಎಂದೂ ನ್ಯಾ.ಖನ್ನಾ ಹೇಳಿದರು.
ಜೈನ್ ವಿರುದ್ಧದ ಪ್ರಕರಣವನ್ನು ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರಿಂದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ ಅವರಿಗೆ ವರ್ಗಾಯಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿನಯಕುಮಾರ್ ಗುಪ್ತಾ ಸೆ.23ರಂದು ಆದೇಶಿಸಿ ದ್ದರು.