ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಘೋಷಣೆಗಳೊಂದಿಗೆ ಪಾದಯಾತ್ರೆ ಆರಂಭಿಸಿ ದ್ದಾರೆ. ಈ ಅಭಿಯಾನದ ಅಡಿಯಲ್ಲಿ ಪ್ರಶಾಂತ್ ಕಿಶೋರ್ ಅವರು 3,500 ಕಿಮೀ ಪಾದಯಾತ್ರೆ ನಡೆಸಲಿದ್ದಾರೆ. ಪಾದಯಾತ್ರೆಯ ಸಮಯದಲ್ಲಿ, ಬಿಹಾರದ ಪ್ರತಿ ಪಂಚಾ ಯತ್ ಮತ್ತು ಬ್ಲಾಕ್ ಅನ್ನು ತಲುಪಲು ಪ್ರಶಾಂತ್ ಕಿಶೋರ್ ಪ್ರಯತ್ನಿಸುತ್ತಾರೆ ಎಂದು ತಿಳಿಸಲಾಗಿದೆ.
1917ರಲ್ಲಿ ರಾಷ್ಟ್ರಪಿತ ತನ್ನ ಮೊದಲ ಸತ್ಯಾಗ್ರಹ ಚಳವಳಿಯನ್ನು ಪ್ರಾರಂಭಿಸಿದ ಪಶ್ಚಿಮ ಚಂಪಾರಣ್ನ ಭಿತಿಹರ್ವಾದಲ್ಲಿರುವ ಗಾಂಧಿ ಆಶ್ರಮದಿಂದ ಪ್ರಯಾಣವು ಪ್ರಾರಂಭವಾಗಿದೆ.
ಈ ಪಾದಯಾತ್ರೆ ಪೂರ್ಣಗೊಳ್ಳಲು ಸುಮಾರು ಒಂದರಿಂದ ಒಂದೂವರೆ ವರ್ಷ ಬೇಕಾಗಬಹುದೆಂದು ಅಂದಾಜಿಸಲಾಗಿದೆ.
ದೇಶದ ಅತ್ಯಂತ ಬಡ ಮತ್ತು ಹಿಂದುಳಿದ ರಾಜ್ಯವಾದ ಬಿಹಾರದಲ್ಲಿ ವ್ಯವಸ್ಥೆಯನ್ನು ಬದಲಾಯಿಸುವ ಸಂಕಲ್ಪ ಇದು ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ. ಸಮಾಜದ ಸಹಾಯದಿಂದ ಹೊಸ ಮತ್ತು ಉತ್ತಮ ರಾಜಕೀಯ ವ್ಯವಸ್ಥೆ ರಚಿಸಲು ಮುಂದಿನ 12-15 ತಿಂಗಳುಗಳಲ್ಲಿ ಬಿಹಾರದ ನಗರಗಳು, ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಪಾದಯಾತ್ರೆ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.