ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರದ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ 16 ರನ್ಗಳಿಂದ ದಕ್ಷಿಣ ಆಫ್ರಿಕಾವನ್ನ ಮಣಿಸಿತು.
ಐತಿಹಾಸಿಕ ಗೆಲುವಿನಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಮಾಜಿ ನಾಯಕ 28 ಎಸೆತ ಗಳಲ್ಲಿ 49 ರನ್ ಗಳಿಸಿದರು.
ಕೊಹ್ಲಿ ತಮ್ಮ ದಾಖಲೆಯ ಅರ್ಧ ಶತಕವನ್ನು ಗಳಿಸುವುದನ್ನ ತಪ್ಪಿಸಿಕೊಂಡರೆ, ಪ್ರಮುಖ ಬ್ಯಾಟ್ಸ್ಮನ್ಗಳಾದ ಕೆಎಲ್ ರಾಹುಲ್ (57) ಮತ್ತು ಸೂರ್ಯಕುಮಾರ್ ಯಾದವ್ (61) ನಿರ್ಣಾ ಯಕ ಅರ್ಧಶತಕಗಳನ್ನ ಸಿಡಿಸಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾದ ಮೊದಲ ಟಿ20ಐ ಸರಣಿಯನ್ನ ಗೆದ್ದರು.