Thursday, 19th September 2024

ಐಟಿ ಕಂಪನಿಗಳಿಂದ ಉದ್ಯೋಗ ನಿರಾಕರಣೆ: ಫ್ರೆಷರ್ಸ್’ಗಳಿಗೆ ಶಾಕ್‌

ನವದೆಹಲಿ: ಅಂತಿಮ ವರ್ಷದಲ್ಲಿದ್ದಾಗಲೇ ಸಂದರ್ಶನದ ಮೂಲಕ ಫ್ರೆಷರ್ಸ್ ಗಳನ್ನು ಆಯ್ಕೆ ಮಾಡಿ ಕೊಂಡು ಉದ್ಯೋಗದ ಆಫರ್ ಲೆಟರ್ ಗಳನ್ನು ಸಹ ನೀಡಿದ್ದ ಹೆಸರಾಂತ ಐಟಿ ಕಂಪನಿಗಳು ಇದೀಗ ಆಯ್ಕೆಯಾದ ನೂರಾರು ಮಂದಿಗೆ ಉದ್ಯೋಗ ರದ್ದುಗೊಳಿಸಿ ರುವ ಮಾಹಿತಿಯನ್ನು ನೀಡಿವೆ.

ತಾವು ಹೆಸರಾಂತ ಐಟಿ ಕಂಪನಿಗಳಿಗೆ ಆಯ್ಕೆಯಾದ ಸಂತಸದಲ್ಲಿದ್ದ ಫ್ರೆಶರ್ಸ್ ಗಳು ಈಗ ಉದ್ಯೋಗ ನಿರಾಕರಣೆಯ ಮಾಹಿತಿ ಸಿಗುತ್ತಿದ್ದಂತೆ ಕಂಗಾಲಾಗಿದ್ದಾರೆ. ಕಂಪನಿಗಳಲ್ಲಿ ಉದ್ಯೋಗ ಸಿಕ್ಕ ಕಾರಣ ಇತರೆ ಕಂಪನಿಗಳಿಗೂ ಸಹ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿರ ಲಿಲ್ಲವೆಂದು ಹೇಳಲಾಗಿದ್ದು, ಇದೀಗ ಅತಂತ್ರರಾಗಿದ್ದಾರೆ. ಉದ್ಯೋಗ ನಿರಾಕರಣೆ ಇ-ಮೇಲ್ ಕಳಿಸುವ ವೇಳೆ ನಿಮ್ಮ ಶೈಕ್ಷಣಿಕ ಅರ್ಹತೆ ನಾವು ನಿಗದಿಪಡಿಸಿದ ಮಟ್ಟದಲ್ಲಿಲ್ಲ ಎಂದು ತಿಳಿಸಲಾಗಿದೆ ಎನ್ನಲಾಗಿದೆ.

ಬಹುತೇಕ ಫ್ರೆಶರ್ಸ್ ಗಳಿಗೆ ಏಳೆಂಟು ತಿಂಗಳ ಹಿಂದೆಯೇ ಆಫರ್ ಲೆಟರ್ ಸಿಕ್ಕಿದೆ ಎನ್ನಲಾ ಗಿದ್ದು, ಇದೀಗ ಇಂಜಿನಿಯರಿಂಗ್ ಅಂತಿಮ ವರ್ಷದ ಫಲಿತಾಂಶವೂ ಹೊರ ಬಿದ್ದಿದೆ. ಹೀಗಾಗಿ ಇನ್ನೇನು ಕೆಲ ದಿನಗಳಲ್ಲೇ ಉದ್ಯೋಗಕ್ಕೆ ಹೋಗಬಹುದೆಂಬ ಕನಸು ಕಂಡಿದ್ದ ಇವರುಗಳು ಇದೀಗ ನಿರಾಕರಣೆ ಇ-ಮೇಲ್ ಬರುತ್ತಿರುವ ಕಾರಣ ನಿರಾಸೆಗೊಂಡಿದ್ದಾರೆ.

ವಿಶ್ವ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದೆಂಬ ಕಾರಣಕ್ಕೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಐಟಿ ಕಂಪನಿಗಳು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ.