Sunday, 15th December 2024

ಒರಿಯನ್ ಮಾಲ್‌ಗಳ ಹಬ್ಬದ ಶಾಪಿಂಗ್ ಬೊನಾಂಜಾದಲ್ಲಿ ಬಹುಮಾನ ಗೆಲ್ಲಿರಿ

ಬೆಂಗಳೂರು: ಬ್ರಿಗೇಡ್‌ನ ಒರಿಯನ್ ಮಾಲ್‌ಗಳು ಮಂಗಳಕರವಾದ ಹಬ್ಬದ ಋತುವಿಗೆ ನಾಂದಿ ಹಾಡಲು ಸಿದ್ಧವಾಗಿವೆ.

ಹಬ್ಬದ ಋತುವಿನ ಮೆರಗು ಮತ್ತು ವೈಭವವನ್ನು ಕಣ್ಮನ ಸೆಳೆಯುವ ಬಣ್ಣಗಳಲ್ಲಿ ಭವ್ಯವಾದ ಅಲಂಕಾರದೊ೦ದಿಗೆ ಹರಡುವ ಯೋಜನೆಗಳು ಶಾಪಿಂಗ್ ಫೆಸ್ಟಿವಲ್ ಬೊನಾಂಜಾಗೆ ಹೆಚ್ಚಿನ ಸ್ವಾದ ತುಂಬಿವೆ. ಮಾಲ್‌ಗಳಲ್ಲಿನ ಅಲಂಕಾರ ವಿವಿಧ ರೀತಿಯಲ್ಲಿವೆ.

ಓರಿಯನ್ ಮಾಲ್ @ ಬ್ರಿಗೇಡ್ ಗೇಟ್‌ವೇನಲ್ಲಿ ಅಲಂಕಾರ ವರ್ಣರಂಜಿತ ಡಯಾ-ಪ್ರೇರಿತ ಕಮಾನು ಮತ್ತು ಬಹು-ಬಣ್ಣದ ಆನೆಗಳನ್ನು ಒಳಗೊಂಡಿದೆ. ವೈಟ್‌ಫೀಲ್ಡ್-ಹೊಸಕೋಟೆ ಕ್ರಾಸಿಂಗ್‌ನಲ್ಲಿರುವ ಓರಿಯನ್ ಅಪ್‌ಟೌನ್ ಮಾಲ್‌ನಲ್ಲಿ ಪ್ರದರ್ಶನ ಗಳು ಮತ್ತು ಕುಕ್ ಟೌನ್‌ನಲ್ಲಿರುವ ಓರಿಯನ್ ಅವೆನ್ಯೂ ಮಾಲ್, ಕಮಲದ ಕೊಳದಲ್ಲಿನ ಸೊಗಸಾದ ಅವಳಿ ನವಿಲುಗಳನ್ನು ಹಾಗೂ ಲೈಟ್ ರೆಫ್ರಾಕ್ಷನ್ ವೈರ್ ಫೌಂಟೇನ್‌ಗಳನ್ನು ಒಳಗೊಂಡಿದೆ. ಎಲ್ಲಾ ಪ್ರದರ್ಶನಗಳು ಉತ್ಸವದ ಬೆಳಕಿನ ವ್ಯವಸ್ಥೆ ಗಳೊಂದಿಗೆ ಸುಸಜ್ಜಿತವಾಗಿದ್ದು, ಇದು ವಿಶೇಷ ದೃಶ್ಯ ಸೃಷ್ಟಿಸುತ್ತದೆ.

ಹಬ್ಬದ ಆಚರಣೆಗೆ ತಕ್ಕಂತೆ ಓರಿಯನ್ ಮಾಲ್‌ಗಳು ತನ್ನ ಪೋಷಕರಿಗಾಗಿ ಶಾಪಿಂಗ್ ಉತ್ಸವ ಕೂಡ ಆಯೋಜಿಸುತ್ತಿದೆ. ಮಾಲ್‌ನಲ್ಲಿರುವ ಯಾವುದೇ ಚಿಲ್ಲರೆ ಅಂಗಡಿಯಲ್ಲಿ 3000ರೂ.ಗಳಿಗೂ ಹೆಚ್ಚಿನ ಶಾಪಿಂಗ್ ಮಾಡುವ ಗ್ರಾಹಕರು, ಸ್ಕೋಡಾ ಸ್ಲಾವಿಯಾದ ಬಂಪರ್ ಬಹುಮಾನ ಮತ್ತು ಬ್ರಿಗೇಡ್ ಗೇಟ್‌ವೇನಲ್ಲಿರುವ ಓರಿಯನ್ ಮಾಲ್‌ನಲ್ಲಿ ಐಫೋನ್ 14 ನ ಸಾಪ್ತಾಹಿಕ ಬಹುಮಾನಗಳು ಸೇರಿದಂತೆ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿರುತ್ತದೆ.

ಓರಿಯನ್ ಅವೆನ್ಯೂ ಮಾಲ್ ಮತ್ತು ಓರಿಯನ್ ಅಪ್‌ಟೌನ್ ಮಾಲ್‌ನಲ್ಲಿ, ಬಂಪರ್ ಬಹುಮಾನವು ಹ್ಯುಂಡೈ ಗ್ರ‍್ಯಾಂಡ್ ಐ10 ನಿಯೋಸ್ ಆಗಿರುತ್ತದೆ, ವಾರದ ಬಹುಮಾನಗಳಲ್ಲಿ ಐಫೋನ್ 14 ಜೊತೆಗೆ 5000 ರೂ ಮೌಲ್ಯದ ದೈನಂದಿನ ಬಹುಮಾನದ ಉಡುಗೊರೆ ವೋಚರ್‌ಗಳನ್ನು ನೀಡಲಾಗುತ್ತಿದೆ. ಓರಿಯನ್ ಹಬ್ಬದ ಋತುವಿನ ಅಲಂಕಾರ ಮತ್ತು ಶಾಪಿಂಗ್ ಉತ್ಸವ ಅ.30, 2022 ರವರೆಗೆ ಮುಂದುವರಿಯಲಿದೆ.

“ಹಬ್ಬದ ಋತುವಿನ ಭಾವನೆಯನ್ನು ಬಿಂಬಿಸುವ ಬೃಹತ್ ರಚನೆಗಳು ಮತ್ತು ಗ್ರಾಹಕರಿಗೆ ಅದ್ಭುತ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡುವ ಶಾಪಿಂಗ್ ಉತ್ಸವದೊಂದಿಗೆ, ಒರಿಯನ್ ಮಾಲ್‌ಗಳಲ್ಲಿ, ನಮ್ಮ ಗ್ರಾಹಕರಿಗೆ ಅತ್ಯುತ್ತಮ ಹಬ್ಬದ ಅನುಭವದ ಖಾತ್ರಿ ನೀಡಲು ಹೊಂದಲು ನಾವು ಸಜ್ಜಾಗುತ್ತಿದ್ದೇವೆ” ಎಂದು ಬ್ರಿಗೇಡ್ ಗ್ರೂಪ್‌ನ ಓರಿಯನ್ ಮಾಲ್‌ಗಳ ರಿಟೇಲ್ ವಿಭಾಗದ ಉಪಾಧ್ಯಕ್ಷ ಸುನಿಲ್ ಮುನ್ಷಿ ಹೇಳಿದರು.