Monday, 25th November 2024

ಭಾರೀ ಮಳೆ: ಮೊದಲ ಏಕದಿನ ಪಂದ್ಯಕ್ಕೆ 40 ಓವರ್‌ ಕಡಿತ

ಖನೌ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ಆರಂಭ ಮಳೆಯ ಕಾರಣ ವಿಳಂಬವಾಗಿ ಆರಂಭವಾಯಿತು. ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ಪಂದ್ಯವು ಅರ್ಧ ಗಂಟೆ ವಿಳಂಬವಾಗಿ ಪ್ರಾರಂಭ ವಾಗಿದೆ.

ಈ ಹಿಂದೆ 1 ಗಂಟೆಗೆ ಟಾಸ್ ಆಗಿ 1.30ಕ್ಕೆ ಪಂದ್ಯ ಆರಂಭಕ್ಕೆ ಸಮಯ ನಿಗದಿಪಡಿಸ ಲಾಗಿತ್ತು. ಆದರೆ, ಈಗ 1.30ಕ್ಕೆ ಟಾಸ್ ಮತ್ತು 2 ಗಂಟೆಗೆ ಪಂದ್ಯದ ಆರಂಭಕ್ಕೆ ನಿಗದಿ ಮಾಡಲಾಗಿದೆ ಎಂದು ಬಿಸಿಸಿಐ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಗುರುವಾರ ಬೆಳಿಗ್ಗೆ ಮೈದಾನದಲ್ಲಿ ಪರಿಶೀಲನೆ ನಡೆಸಿದ ಅಂಪೈರ್‌ಗಳು ಪಂದ್ಯದ ಸಮಯವನ್ನು ಮುಂದೂಡುವ ನಿರ್ಧಾರಕ್ಕೆ ಬಂದರು

ಈ ಪಂದ್ಯದ ಬಳಿಕ ಉಭಯ ತಂಡಗಳು ಅ.9ರಂದು ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕಾಗಿ ರಾಂಚಿಗೆ ತೆರಳಲಿವೆ. ಅ.11ರಂದು ನವದೆಹಲಿಯಲ್ಲಿ ಕೊನೆಯ ಪಂದ್ಯ ನಡೆಯಲಿದೆ.

ಟಿ20 ಸರಣಿಯನ್ನು 2-1ರಿಂದ ಗೆದ್ದ ರೋಹಿತ್ ಶರ್ಮಾ ಬಳಗದ ಬಹುತೇಕ ಆಟಗಾರರು ಚುಟುಕು ಕ್ರಿಕೆಟ್‌ ವಿಶ್ವಕಪ್ ಟೂರ್ನಿ ಯಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ಎಡಗೈ ಬ್ಯಾಟರ್ ಶಿಖರ್ ಧವನ್ ಮುನ್ನಡೆಸಲಿದ್ದಾರೆ.

ಟಿ20 ಸರಣಿಯಲ್ಲಿ ಆಡಿದ್ದ ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್ ಹಾಗೂ ಶ್ರೇಯಸ್ ಅಯ್ಯರ್‌ ಅವರು ಈ ತಂಡದಲ್ಲಿದ್ಧಾರೆ.