ಸುರಪುರ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಉಪನ್ಯಾಸಕರಾದ ರಾಮನಗೌಡ ಪಾಟೀಲ್ ಅವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ದಲ್ಲಿ ಪ್ರಥಮ ದರ್ಜೆ ಸಹಾಯಕರಾದ ನಾರಾಯಣರಾವ್, ಕಾಲೇಜು ಸಿಬ್ಬಂದಿಗಳಾದ ಯಮನಪ್ಪ, ಬಸವರಾಜ, ಪ್ರಕಾಶ್ ಆನೆಗುಂದಿ, ಗಿರೀಶ್ ಮತ್ತಿತರರು ಇದ್ದರು.