Saturday, 14th December 2024

ನುಡಿದಂತೆ ಅಭಿವೃದ್ದಿ ಮಾಡಿದ್ದಾರೆ: ಜಗದೇವ ಮಲ್ಲಿಬೋಮ್ಮ ಸ್ವಾಮಿಗಳು

ಇಂಡಿ: ಯಶವಂತರಾಯಗೌಡ ಪಾಟೀಲ ಜಿಲ್ಲೆಯಾಗುವ ಕನಸು ಕಂಡಿದ್ದಾರೆ ನುಡಿದಂತೆ ನಡೆಯುವ ನಾಯಕ. ಇವರ ಬಗ್ಗೆ ಮಾತನಾಡುವುದು ೧೨ನೇ ಶತಮಾನದ ಬಸವಣ್ಣನ ಕುರಿತು ಮಾತನಾಡಿದಂತಾಗುತ್ತದೆ. ಕೈ, ಬಾಯಿ ಸ್ವಚ್ಛ ಕಚ್ಚಿ ಭಧ್ರತೆ ಇದೆ ವಿಜಯಪೂರ ಜಿಲ್ಲೆಯಲ್ಲಿಯೇ ಒಳ್ಳೇಯ ರಾಜಕಾರಣಿ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೋಮ್ಮ ಸ್ವಾಮೀಜಿ ನುಡಿದರು.

ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘ ರಿ. ಮುಂಭಾಗ ಭವ್ಯ ಮಂಟಪದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಇವರ ಜನ್ಮದಿನದ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಮಹಮ್ಮದ ಆಗುವುದು ಸುಲಭ, ಪೈಗಂಬರ್ ಆಗುವುದು ಕಷ್ಟ, ಗೌತಮಬುದ್ದ ಆಗುವುದು ಸುಲಭ, ಬುದ್ದನಾಗುವುದು ಕಷ್ಟ. ಕಲ್ಯಾಣ ಕಟ್ಟು ವುದು ಸುಲಭ ಬಸವನಾಗುವುದು ಕಷ್ಟ, ಕಳಿಂಗ ಗೆಲ್ಲುವುದು ಸುಲಭ, ಅಶೋಕನಾಗುವುದು ಕಷ್ಟ, ಯಶವಂತ ರಾಯಗೌಡ ಬಗ್ಗೆ ಮಾತನಾಡುವುದೆಂದರೆ ಬಸಣ್ಣನ ಬಗ್ಗೆ ಮಾತನಾಡಿದಂತಾಗುತ್ತದೆ.

ಯಶವಂತರಾಯಗೌಡ ಪಾಟೀಲ ಕೈಶುದ್ದ,ಬಾಯಿ ಸ್ವಚ್ಛ ,ಕಚ್ಚಿ ಭದ್ರ ವಿಜಯಪೂರ ಜಿಲ್ಲೆಯಲ್ಲಿಯೇ ಪರಿಶುದ್ಧ ರಾಜಕಾರಣಿ ಎಂದರೆ ಅತೀಶೋಕ್ತಿ ಅಲ್ಲ. ಎರಡು ಅವಧಿ ೧೦೮ ಆಯ್ಕೆ ಮಾಡಿದ್ದೀರಿ, ನಾನು ಯಾರ ಹಂಗಿ ನಲ್ಲಿಯೂ ಇಲ್ಲ ಸತ್ಯ ಮಾತನಾಡಲು ಯಾವ ಆತಂಕವಿಲ್ಲ. ಒಬ್ಬ ಪ್ರಮಾಣಿಕ, ಬಡವರ, ದೀನದುರ್ಬಲರ ,ನೊಂದವರ ಧ್ವನಿಯಾಗಿ ,ನೀರಾವರಿ, ರಸ್ತೆ, ಶಿಕ್ಷಣ ಸೇರಿದಂತೆ ಇಂಡಿ ಜಿಲ್ಲೆಯಾಗಿಸುವ ದೂರದೃಷ್ಠಿಯಿಂದ ಅನೇಕ ಯೋಜನೆಗಳು ತಂದಿದ್ದಾರೆ. ತಾಲೂಕಿನ ಹೃದಯವಂತ ಮತದಾರರು ಮುಂಬರುವ ದಿನಗಳಲ್ಲಿ ಸಚಿವರಾಗಿ ನೋಡಿ ಭಗವಂತ ಶಾಸಕರಿಗೆ ದೀರ್ಘ ಆಯುಷ್ಯ ನೀಡಲಿ ಎಂದು ಶುಭ ಹಾರೈಸಿದರು.

ಕೋಳೂರ ಯಶವಂತ ಶಾಸ್ತಿç , ಬಿ.ಎಂ.ಕೋರೆ, ಶ್ರೀಕಾಂತ ಕುಡಿಗೂರ, ಮುತ್ತಪ್ಪ ಪೋತೆ, ಬಿ.ಸಿ ಸಾಹುಕಾರ. ನಿರ್ಮಲಾ ತಳಕೇರಿ ಮಾತನಾಡಿದರು.

*

ನಾನು ಜನ್ಮ ದಿನಕ್ಕೆ ಎನೂ ತಗೆದುಕೊಂಡು ಬಂದಿಲ್ಲ ಪರಿಶುದ್ದ ಹೃದಯ ತಂದಿದ್ದೇನೆ.ವರAಜ್ಯೋತಿ ಬುದ್ದ ನನ್ನ ಕನಸ್ಸಿನಲ್ಲಿ ಬಂದು ನಿನ್ನ ಆಯುಷ್ಯ ಕಡಿಮೆ ಮಾಡಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಕೊಡುತ್ತೇನೆ ಎಂದರೆ ವರಂಜ್ಯೋತಿ ಮೇಲೆ ಪ್ರಮಾಣ ಮಾಡುತ್ತೇನೆ ಬಡವರ, ದೀನ ದುರ್ಬಲರ ಶ್ರೀರಕ್ಷೆಯಾಗಿರುವ ಪಾಟೀಲ ಇವರಿಗಾಗಿ ನನ್ನ ಸಂಪೂರ್ಣ ಆಯುಷ್ಯ ನೀಡುತ್ತೇನೆ ಎಂದು ಆರ್ಶೀವಚನ ನೀಡಿದರು.

ವರಂಜ್ಯೋತಿ ಭಂತೇಜಿ

ಗೋಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಪೂಜ್ಯ ಶಿವಲಿಂಗ ಮಹಾಸ್ವಾಮಿಗಳು,ಭಂತೇಜಿ ,ಖ್ಯಾತ ಜ್ಯೋತಿಷಿ ಅಶೋಕ ಪಂಡೀತ, ಮೌಲನಾಮಹಮ್ಮದ ಮದ್ಜೀದ್ ದಿವ್ಯಸಾನಿಧ್ಯ ವಹಿಸಿದರು.

ಬಿ.ಎಂ ಕೋರೆ,ಭೀಮಣ್ಣಾ ಕೌಲಗಿ, ವಿಶ್ವನಾಥ ಬಿರಾದಾರ, ಜಟ್ಟೆಪ್ಪ ರವಳಿ ,ರಷೀದ ಅರಬ, ಭೀಮಾಶಂಕರ ಮೂರಮನ್,ಬ್ಲಾಕ ಕಾಂಗ್ರೆಸ ಅಧ್ಯಕ್ಷ ಜಾವೀದ ಮೋಮಿನ, ಕಲ್ಲನಗೌಡ ಬಿರಾದಾರ,ಶೇಖರ ನಾಯಕ,ಸುರೇಶ ಶಿವೂರ,ಶ್ರೀಕಾಂತ ಕುಡಿಗನೂರ, ಮುತ್ತಪ್ಪ ಪೋತೆ, ಅಯುಬ ಬಾಗವಾನ, ಬಸವರಾಜ ಕಣ್ಣಿ,ನಿರ್ಮಲಾ ತಳಕೇರಿ, ಉಮೇಶ ದೇಗಿನಾಳ, ಸುಧೀರ ಕರಕಟ್ಟಿ, ಸತೀಶ ಕುಂಬಾರ, ಅವಿನಾಶ ಬಗಲಿ, ಜೈನುದೀನ ಬಾಗವಾನ, ಇಲಿಯಾಸ ಬೋರಾಮಣಿ,ಸತಾರ ಬಾಗವಾನ, ಅಣ್ಣಾರಾಯ ಬಿದರಕೋಟಿ, ಚಂದಣ್ಣಾ ಆಲಮೇಲ,ಮಹಿಬೂಬ ಅರಬ, ಸಲೀಮ ಶೇಖ, ಲಿಂಬಾಜಿ ರಾಠೋಡ,ಜಹಾಂಗೀರ ಸೌದಾಗರ, ಅಸ್ಲಂಕಡಣಿ, ನೀಲಕಂಠ ರೂಗಿ, ರುಕ್ಮದೀನ ತದ್ದೇವಾಡಿ, ಜೀತಪ್ಪ ಕಲ್ಯಾಣಿ ವೇದಿಕೆಯಲ್ಲಿದ್ದರು.

ಪ್ರಶಾಂತ ಕಾಳೆ, ದಸ್ತಗೀರ ಲಾಳಸಂಗಿ, ಗಂಗಾಧರ ನಾಟೀಕಾರ, ರಾಜುಗೌಡ ಪಾಟೀಲ. ಶ್ರೀಮಂತ ಲೋಣಿ,ಸಂತೋಷ ಪರಶೇನವರ, ಮುನ್ನಾ ಡಾಂಗೆ, ಮಹೇಶ ಬಿರಾದಾರ, ಮಹೇಶ ಹೊನಬಿಂದಗಿ,ರೈಸ್ ಅಷ್ಠೇಕರ, ದುಂಡು ಮುಜಗೊಂಡ, ಸುಭಾಷ ಬಾಬರ,ಚಂದುಸಾಹುಕಾರ ಸೊನ್ನ,ಪ್ರೋ, ಮಾಡ್ಯಾಳ,ಪಂಡೀತ ಹೂಗಾರ ಸೇರಿದಂತೆ ನೂರಾರು ಕಾರ್ಯಕರ್ತರು ,ಯಶವಂತರಾಯಗೌಡ ಪಾಟೀಲ ಅಭಿಮಾನಿಗಳು, ಗಣ್ಯರು ಉಪಸ್ಥಿತರಿದ್ದರು.

ಇದೇ ಸಂಧರ್ಬದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಹಾಗೂ ಎಸ್.ಎಸ್.ಎಲ್.ಸಿ ಪಿ.ಯು.ಸಿ ಅÃತಿಹೆಚ್ಚು ಅಂಕಗಳಿಸಿದ ತಾಲೂಕಿನ ವಿಧ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಗೈದ ರೈತಾಪಿ ವರ್ಗಕ್ಕೆ ಸನ್ಮಾನಿಸಲಾಯಿತು.