ಇದು ವಾರಣಾಸಿಯ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್‌ಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು. ಉಜ್ಜಯಿನಿ ಸ್ಮಾರ್ಟ್ ಸಿಟಿ ಯೋಜನೆಯ ಅದ್ಭುತ ಗಳಲ್ಲಿ ಒಂದಾದ ಮಹಾಕಾಲ್ ಲೋಕದ ಮೊದಲ ಹಂತವು ನಾಲ್ಕು ವರ್ಷಗಳಲ್ಲಿ ಪೂರ್ಣಗೊಂಡಿದೆ.
ಎರಡು ಭಾಗಗಳ ಯೋಜನೆಯ ಮೊದಲ ಹಂತವು ಭಗವಾನ್ ಶಿವನ ಜೀವನವನ್ನು ನಿರೂಪಿಸುವ ಪ್ರತಿಮೆಗಳು ಮತ್ತು ಭಿತ್ತಿಚಿತ್ರಗಳನ್ನು ಒಳಗೊಂಡಿದೆ. ಮಹಾಕಾಳೇಶ್ವರ ವಾಟಿಕಾ, ಮಹಾಕಾಳೇಶ್ವರ ಪಥ, ಶಿವ ಅವತಾರ್ ವಾಟಿಕಾ, ರುದ್ರಸಾಗರ ಸರೋವರದ ಮುಂಭಾಗ, ಧರ್ಮಶಾಲಾ ಸಂಕೀರ್ಣ ಮತ್ತು ಪ್ರವಚನ ಸಭಾಂಗಣ ಸೇರಿದಂತೆ ಸಂಕೀರ್ಣದ ಹಲವಾರು ಸ್ಥಳಗಳನ್ನು ಸುಂದರಗೊಳಿಸಲಾಗಿದೆ.
ಮಂಗಳವಾರದ ಉಜ್ಜಯಿನಿ ಭೇಟಿಯು ಒಂದು ತಿಂಗಳೊಳಗೆ ಮಧ್ಯಪ್ರದೇಶಕ್ಕೆ ನರೇಂದ್ರ ಮೋದಿಯವರ ಎರಡನೇ ಭೇಟಿಯಾಗಿದೆ. ಸೆಪ್ಟೆಂಬರ್ 17 ರಂದು, ಮೋದಿ ತಮ್ಮ 72 ನೇ ಹುಟ್ಟುಹಬ್ಬವನ್ನು ಈ ಸ್ಥಳದಲ್ಲೇ ಆಚರಿಸಿದ್ದರು. ಈ ವೇಳೆ ವಿಶ್ವದ ಮೊದಲ ಅಂತರ್-ಖಂಡಾಂತರ ಚೀತಾ ಸ್ಥಳಾಂತರ ಯೋಜನೆಯನ್ನು ಉದ್ಘಾಟಿಸಿದ್ದರು. ಶಿಯೋಪುರ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಎಂಟು ಚಿರತೆಗಳನ್ನು ಬಿಡುಗಡೆ ಮಾಡಿದ್ದರು.