Saturday, 14th December 2024

ಭಿಕ್ಷಾಟನೆಯಲ್ಲಿ ತೊಡಗಿದವರನ್ನು ರಕ್ಷಣೆ ಮಾಡಿದ ಅಧಿಕಾರಿಗಳು

ಕೊಲ್ಹಾರ: ಸಾರ್ವಜನಿಕವಾಗಿ ಭಿಕ್ಷಾಟನೆಯಲ್ಲಿ ತೊಡಗಿದ ಕೆಲ ಭಿಕ್ಷುಕರನ್ನು ವಿಜಯಪುರ ನಿರಾಶ್ರಿತ ಪರಿಹಾರ ಕೇಂದ್ರದ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದುಕೊಂಡರು.

ಬುಧವಾರ ಪಟ್ಟಣದಲ್ಲಿ ಅನೇಕ ಭಿಕ್ಷುಕರು ಭಿಕ್ಷಾಟನೆಯಲ್ಲಿ ತೊಡಗಿದ್ದರು ನಿರಾಶ್ರಿತ ಕೇಂದ್ರದ ಅಧಿಕಾರಿಗಳು ಭಿಕ್ಷಾಟನೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆದುಕೊಂಡು ವಿಜಯಪುರ ನಿರಾಶ್ರಿತ ಕೇಂದ್ರಕ್ಕೆ ರವಾನಿಸಿದರು.

ಈ ಸಂದರ್ಭದಲ್ಲಿ ನಿರಾಶ್ರಿತ ಕೇಂದ್ರದ ಹೆಡ್ ವಾರ್ಡರ್ ರಾಜು ಚವ್ಹಾಣ ಮಾತನಾಡಿ ವಿಜಯಪುರ ನಿರಾಶ್ರಿತ ಕೇಂದ್ರದ ಅಧಿಕ್ಷಕರಾದ ಬಸವರಾಜ ನಾಟಿಕಾರ್ ಅವರ ನೇತೃತ್ವದಲ್ಲಿ ಭಿಕ್ಷಾಟನೆ ತೊಡಗಿದವರನ್ನು ವಶಕ್ಕೆ ಪಡೆದು ನಿರಾಶ್ರಿತ ಕೇಂದ್ರಕ್ಕೆ ರವಾನಿಸಲಾಗುತ್ತಿದೆ. ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975 ಸೆಕ್ಷನ್ 3 ರ ಅನ್ವಯ ಭಿಕ್ಷೆ ಬೇಡುವುದು ನಿಷೇಧಿಸಲಾಗಿದೆ. ಭಿಕ್ಷೆ ಬೇಡುವುದು ನಿಷೇಧವಿದ್ದರು ಕೂಡ ಬುಧವಾರ ಭಿಕ್ಷಾಟನೆಯಲ್ಲಿ ತೊಡಗಿದ ಹಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಶಕ್ಕೆ ಪಡೆದವರನ್ನು ವಿಜಯಪುರ ನಿರಾಶ್ರಿತ ಕೇಂದ್ರಕ್ಕೆ ರವಾನಿಸಲಾಗುವುದು ಎಂದು ಹೇಳಿದರು.